• Home
  • »
  • News
  • »
  • national-international
  • »
  • Gas Heater: ಚಳಿಗಾಲದ ರಾತ್ರಿ ಬೆಚ್ಚಗಾಗಲಿ ಅಂತ ಗ್ಯಾಸ್ ಹೀಟರ್ ಹಚ್ಚುತ್ತೀರಾ? ಇಲ್ಲಿ ನೋಡಿ ನಾಲ್ವರ ಪ್ರಾಣವೇ ಹೋಗಿದೆ!

Gas Heater: ಚಳಿಗಾಲದ ರಾತ್ರಿ ಬೆಚ್ಚಗಾಗಲಿ ಅಂತ ಗ್ಯಾಸ್ ಹೀಟರ್ ಹಚ್ಚುತ್ತೀರಾ? ಇಲ್ಲಿ ನೋಡಿ ನಾಲ್ವರ ಪ್ರಾಣವೇ ಹೋಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದ ತಂಪು ಗಾಳಿಯನ್ನು ತಪ್ಪಿಸಲು ಕೋಣೆಯ ಬಳಿ ಹಚ್ಚಿಟ್ಟಿದ್ದ ಗ್ಯಾಸ್ ಹೀಟರ್ ಮನೆಯ ಸದಸ್ಯರ ಸಾವಿಗೆ ಕಾರಣವಾಗಿದೆ. ಗ್ಯಾಸ್ ಹೀಟರ್ ನಾಲ್ಕು ಜನರ ಪ್ರಾಣವನ್ನು ಬಲಿ ಪಡೆದಿದೆ. ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

  • News18 Kannada
  • Last Updated :
  • Uttar Pradesh, India
  • Share this:

    ಉತ್ತರ ಪ್ರದೇಶ: ಚಳಿಗಾಲದಲ್ಲಿ (Winter) ದೇಹವನ್ನು (Body) ಬೆಚ್ಚಗೆ ಇರಿಸುವುದು ತುಂಬಾ ಮುಖ್ಯ. ತಂಪು, ಶೀತ ಮತ್ತು ಚಳಿಯಿಂದ ರಕ್ಷಣೆ ಪಡೆಯಲು ಜನರು ಅಲ್ಲಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುತ್ತಾ ಕುಳಿತಿರುತ್ತಾರೆ. ಹೀಗೆಯೇ ಮಲಗುವ ಕೋಣೆಯ (Sleeping Room) ಬಳಿಗೆ ಬೆಚ್ಚಗೆ ಇರಬೇಕೆಂದು ಹಚ್ಚಿಟ್ಟಿದ್ದ ಗ್ಯಾಸ್ ಹೀಟರ್ ಮನೆಯ ಸದಸ್ಯರನ್ನೇ ಬಲಿ ಪಡೆದಿದೆ. ಚಳಿಗಾಲದಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಕೋಣೆಯ ಬಳಿ ಗ್ಯಾಸ್ ಹೀಟರ್ (Gas Heater) ಹಚ್ಚಿಟ್ಟಿದ್ದ ಮನೆಯ ಸದಸ್ಯರು, ಬೆಳಗ್ಗೆ ಮತ್ತೆ ಎದ್ದೇ ಇಲ್ಲ. ರಾತ್ರಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೌದು.. ಉತ್ತರ ಪ್ರದೇಶದ ಸೀತಾಪುರ (Uttar Pradesh Seetha Pura) ಎಂಬಲ್ಲಿ ಈ ರೀತಿಯ ಘಟನೆ ನಡೆದಿದೆ.


    ಚಳಿಯಿಂದ ರಕ್ಷಣೆ ಪಡೆಯಲು ಹೋಗಿ ಜೀವವನ್ನೇ ಕಳೆದುಕೊಂಡ ಕುಟುಂಬ


    ಚಳಿಗಾಲದ ತಂಪು ಗಾಳಿಯನ್ನು ತಪ್ಪಿಸಲು ಕೋಣೆಯ ಬಳಿ ಹಚ್ಚಿಟ್ಟಿದ್ದ ಗ್ಯಾಸ್ ಹೀಟರ್ ಮನೆಯ ಸದಸ್ಯರ ಸಾವಿಗೆ ಕಾರಣವಾಗಿದೆ. ಉತ್ತರ ಪ್ರದೇಶದ ಸೀತಾಪುರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.


    ಗ್ಯಾಸ್ ಹೀಟರ್ 4 ಜನರ ಪ್ರಾಣವನ್ನು ಬಲಿ ಪಡೆದಿದೆ. ರಾತ್ರಿ ಚಳಿಯಿಂದ ರಕ್ಷಣೆ ಪಡೆಯಲು ಮಲಗುವ ಕೋಣೆಯ ಬಳಿ ಹಚ್ಚಿಟ್ಟಿದ್ದ ಗ್ಯಾಸ್ ಹೀಟರ್ ಲೀಕ್ ಆಗಿದ್ದು, ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.


    ಘಟನೆಯಿಂದ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


    ಭಾನುವಾರ ರಾತ್ರಿ ನಡೆದ ಘಟನೆ


    ಭಾನುವಾರ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪ್ರತಾಪ್ ತಿಳಿಸಿದ್ದಾರೆ. ಸದರ್‌ ಪುರದ ಮದರಸಾದಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದ ಉರ್ದು ಶಿಕ್ಷಕ ಝಜ್ಜರ್‌ ನ ನಿವಾಸಿ ಮೊಹಮ್ಮದ್ ಆಸಿಫ್ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ.


    ಶನಿವಾರ ತಡರಾತ್ರಿ ಮೊಹಮ್ಮದ್ ಆಸಿಫ್ ತನ್ನ ಕುಟುಂಬದ ಜೊತೆ ಮನೆಯೊಳಗೆ ಮಲಗಿದ್ದರು. ಆದರೆ ಬೆಳಗ್ಗೆ ದಿನವೂ ಬೇಗ ಬಾಗಿಲು ತೆರೆಯುತ್ತಿದ್ದ ಮೊಹಮ್ಮದ್ ಆಸಿಫ್ ಕುಟುಂಬಸ್ಥರು ಎಷ್ಟೊ ಹೊತ್ತಾದರೂ ಭಾನುವಾರ ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ. ಭಾನುವಾರ ಬೆಳಗ್ಗೆ ಝಜ್ಜರ್ ಪ್ರದೇಶದಲ್ಲಿ ಹಾಲಿನ ವ್ಯಾಪಾರಿಯೊಬ್ಬ ಮನೆಯ ಬಾಗಿಲು ಬಡಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    ಇದನ್ನು ಗಮನಿಸಿದ ಉರ್ದು ಶಿಕ್ಷಕಿ ಹಾಗೂ ಅವರ ಮನೆಯವರು, ಮೊಹಮ್ಮದ್ ಆಸಿಫ್ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಶಿಕ್ಷಕಿ ಬಾಗಿಲು ಬಡಿದಿದ್ದನ್ನು ಕಂಡು ಸುತ್ತಮುತ್ತಲಿನವರು ಬಂದು ಬಾಗಿಲು ಬಡಿದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.


    ಮಾಹಿತಿ ತಿಳಿದ ತಕ್ಷಣ ಪಟ್ಟಣ ಪ್ರಭಾರಿ ಕೃಷ್ಣಕುಮಾರ್ ಪೊಲೀಸ್ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಆಗಮಿಸಿದ್ದರು. ನಂತರ ಬಾಗಿಲು ತೆರೆದು ನೋಡಿದಾಗ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.


    ಸ್ಥಳೀಯ ಮದರಸಾದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಆಸಿಫ್ (35), ಪತ್ನಿ ಶಗುಫ್ತಾ (32) ಮಕ್ಕಳಾದ ಜೈದ್ (3) ಮತ್ತು ಮೈರಾ (2) ಮೃತ ದುರ್ದೈವಿಗಳು. ಗ್ಯಾಸ್ ಹೀಟರ್‌ನಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


    ಇದನ್ನೂ ಓದಿ: 25 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿದ ವೈಟ್ ಕಾಲರ್ ಕ್ರಿಮಿನಲ್ ಕೊನೆಗೂ ಅರೆಸ್ಟ್


    ಕುಟುಂಬದವರೆಲ್ಲರೂ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದನ್ನು ಕಂಡು ಅವರನ್ನು ಬಿಸ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆಗ ವೈದ್ಯರು ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು