HOME » NEWS » National-international » SIX TIMES IN SIX DAYS ALIBABA FOUNDER JACK MAS 669 SEX ADVICE TO NEWLYWED EMPLOYEES

ಸುಧಾರಿತ ಜೀವನಕ್ಕಾಗಿ 6 ದಿನ, ಆರು ಸಲ ಲೈಂಗಿಕ ಕ್ರಿಯೆ ನಡೆಸಿ; ಅಲಿಬಾಬ ಜಾಕ್​​ ಮಾ ಸಲಹೆ

ನಿಮ್ಮ ಜೀವನ ಸುಧಾರಣೆಗಾಗಿ ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ. ಸಯಮ ಅಂದಾಜು 9 ಗಂಟೆ ಅಂದುಕೊಳ್ಳಿ ಎಂದು ಜಾಕ್​​ ಮಾ 669 ಸೂತ್ರ ಏನೆಂದು ವಿವರಿಸಿದ್ಧಾರೆ.

news18
Updated:June 26, 2020, 1:58 PM IST
ಸುಧಾರಿತ ಜೀವನಕ್ಕಾಗಿ 6 ದಿನ, ಆರು ಸಲ ಲೈಂಗಿಕ ಕ್ರಿಯೆ ನಡೆಸಿ; ಅಲಿಬಾಬ ಜಾಕ್​​ ಮಾ ಸಲಹೆ
ಅಲಿಬಾಬ ಜಾಕ್​​ ಮಾ
  • News18
  • Last Updated: June 26, 2020, 1:58 PM IST
  • Share this:
ನವದೆಹಲಿ(ಮೇ.14): ದಿನಕ್ಕೆ '996' ಫಾರ್ಮುಲ ಪ್ರಕಾರ ದುಡಿಯುವಂತೆ ಆದೇಶಿಸಿ ವಿವಾದಕ್ಕೀಡಾಗಿದ್ದ ಚೀನಾ ಮೂಲದ ಅಲಿಬಾಬ ಕಂಪನಿ ಸಂಸ್ಥಾಪಕ ಜಾಕ್ ಮಾ ಅವರು, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ. ತಮ್ಮ ಕಂಪನಿ ಸಿಬ್ಬಂದಿಗೆ "ಮನೆ ಮತ್ತು ಕೆಲಸ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಸುಧಾರಿತ ಜೀವನ ನಡೆಸಲು "669" ಸೂತ್ರ ಪಾಲಿಸಿ" ಎಂದು ಸಲಹೆ ನೀಡಿದ್ದಾರೆ.

ಅಲಿಬಾಬ ಸಂಸ್ಥೆಯ ಸಿಬ್ಬಂದಿಗಳ ವಿವಾಹ ಸಮಾರಂಭದಲ್ಲಿ ಮಾತನಾಡಿದ್ದ ಯಶಸ್ವಿ ಉದ್ಯಮಿ ಜಾಕ್ ಮಾ ಅವರು, ಸುಧಾರಿತ ಜೀವನಕ್ಕಾಗಿ ಈ ಸೂತ್ರ ಪಾಲಿಸಿ ಎಂದಿದ್ದಾರೆ. ಹಾಗೆಯೇ ಕೆಲಸದ ವೇಳೆ 996 ಸೂತ್ರ, ಜೀವನದಲ್ಲಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.

"ನಿಮ್ಮ ಜೀವನ ಸುಧಾರಣೆಗಾಗಿ ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ. ಸಯಮ ಅಂದಾಜು 9 ಗಂಟೆ ಅಂದುಕೊಳ್ಳಿ "ಎಂದು ಜಾಕ್​​ ಮಾ "669" ಸೂತ್ರ ಏನೆಂದು ವಿವರಿಸಿದ್ಧಾರೆ.

ಈ ಹಿಂದೆಯೇ ಜಾಕ್​​ ಮಾ, ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು, ಉಳಿದವರಿಗೆ ಇಲ್ಲಿ ಜಾಗವಿಲ್ಲ ಎಂದಿದ್ದರು. ಅಲಿಬಾಬ ಕಂಪನಿಯ ಆಂತರಿಕ ಸಭೆಯೊಂದರಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು, 8 ಗಂಟೆಗಳ ಆಫೀಸ್‌ ಲೈಫ್ ಸ್ಟೈಲ್ ಬಯಸುವ ಉದ್ಯೋಗಿಗಳು ಆಲಿಬಾಬಾ ಗ್ರೂಪ್‌ಗೆ ಅಗತ್ಯವಿಲ್ಲ ಎಂದಿದ್ದರು. ಈ ಮೂಲಕ ಚೀನಿ ಇಂಟರ್‌ನೆಟ್‌ ಕಂಪನಿಗಳಲ್ಲಿ ಕಂಡು ಬರುವ ಓವರ್‌ಟೈಮ್‌ ವರ್ಕ್‌ ಕಲ್ಚರ್ ಅನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ಬಿಜೆಪಿಗೆ ಭಾರೀ ಬಹುಮತ ಸಿಗಲಿದೆ; ಕೇಂದ್ರ ಸಚಿವ ರಾಜನಾಥ್​ ಸಿಂಗ್​​ ಭವಿಷ್ಯ

ದಿನಕ್ಕೆ '996' ರೀತಿಯಲ್ಲಿ ದುಡಿಯುವ ಸಾಮರ್ಥ್ಯ‌ ಯುವಜನತೆಗೆ ಇರುವುದು ದೊಡ್ಡ ಆಶೀರ್ವಾದ. ಇದನ್ನು ನಾವು ಬಳಸಿಕೊಳ್ಳಬೇಕು ಎಂದು ಜಾಕ್ ಮಾ ಹೇಳಿದ್ದರು. ಚೀನಾದ ತಂತ್ರಜ್ಞಾನ ಕಂಪನಿಗಳ ವಲಯದಲ್ಲಿ '996 ಗಂಟೆ ದುಡಿಯುವ ಸಿಸ್ಟಮ್‌' ಚಾಲ್ತಿಯಲ್ಲಿದೆ. ಅಂದರೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಗಳ ಕಾಲ ವಾರದ 6 ದಿನಗಳ ದುಡಿಮೆ ಅರ್ಥ ಇದಾಗಿದೆ. ಆದರೆ, ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಸಿಬ್ಬಂದಿಯನ್ನು ದುಡಿಸುವಂತಿಲ್ಲ. ವಾರಕ್ಕೆ ಸರಾಸರಿ 44 ಗಂಟೆಗಿಂತ ಹೆಚ್ಚು ಕೆಲಸ ಸಲ್ಲದು.

ಇದನ್ನೂ ಓದಿ: ಗಗನಕ್ಕೇರಿದ ತರಕಾರಿ ಬೆಲೆಗಳು; ಬೀನ್ಸ್ ಕಿಲೋ 130, ಟೊಮೆಟೋ 70 ರೂ; ಜನರು ಕಂಗಾಲುಇನ್ನು ಜಾಕ್ ಮಾ ಅವರ ಹೇಳಿಕೆ ವಿವಾದಾತ್ಮಕವಾಗಿತ್ತು. ಚೀನಾದ ಟೆಕ್‌ ಉದ್ದಿಮೆ ವಲಯದಲ್ಲಿ ದೀರ್ಘ ಅವಧಿಯ ಕೆಲಸಗಳು, ಒತ್ತಡದ ಪರಿಣಾಮ ಉದ್ಯೋಗಿಗಳು, ಮುಖ್ಯವಾಗಿ ಸ್ಟಾರ್ಟಪ್‌ಗಳ ಸ್ಥಾಪಕರು ಅಕಾಲಿಕ ಸಾವಿಗೀಡಾಗಿರುವ ಬಗ್ಗೆ ವರದಿಗಳಾಗಿದ್ದವು. ಈ ರೀತಿಯ '996' ವರ್ಕ್‌ ಶೆಡ್ಯೂಲನ್ನು ಅನುಸರಿಸಿದರೆ ಕಂಪೆನಿ ಉದ್ಯೋಗಿಗಳು ಐಸಿಯುಗೆ (ತುರ್ತು ನಿಗಾ ಘಟಕ) ಸ್ಥಳಾಂತರವಾಗುವ ಅಪಾಯ ಹೆಚ್ಚು ಎಂದು ಜಾಕ್ ಮಾ ಅವರ ನಡೆಯಲು ಕೆಲವರು ಟೀಕಿಸಿದ್ದರು.
First published: May 14, 2019, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories