Exclusive- ಆರು ಉಗ್ರರು ವಿವಿಧ ಮಾರ್ಗಗಳಿಂದ ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದದ್ದು ಬೆಳಕಿಗೆ

ಹಬ್ಬ ಹರಿದಿನಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಆರು ಆರೋಪಿಗಳನ್ನ ದೆಹಲಿ ಕೋರ್ಟ್ 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇವರು ವಿವಿಧ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ಹೋಗಿ ಉಗ್ರ ತರಬೇತಿ ಪಡೆದು ಬಂದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಬಂಧಿತ ಆರು ಉಗ್ರ ಆರೋಪಿಗಳು

ಬಂಧಿತ ಆರು ಉಗ್ರ ಆರೋಪಿಗಳು

 • News18
 • Last Updated :
 • Share this:
  ನವದೆಹಲಿ, ಸೆ. 15: ಭಾರತದ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದ್ದ ಪಾಕ್ ಬೆಂಬಲಿತ ಉಗ್ರರ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದರು. ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಹಲವು ಬಾಂಬ್ ಸ್ಫೋಟಗಳನ್ನ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದರು. ದೆಹಲಿ ಪೊಲೀಸರು ಆರು ಮಂದಿ ಉಗ್ರರನ್ನು ಬಂಧಿಸಿದ್ದರು. ಇವರನ್ನ ವಿಚಾರಣೆ ನಡೆಸಿದಾಗ ಕೆಲ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಪ್ರತಿಯೊಬ್ಬರೂ ಕೂಡ ವಿಭಿನ್ನ ಭೂಮಾರ್ಗ ಹಾಗೂ ಸಮುದ್ರ ಮಾರ್ಗಗಳ ಮೂಲಕ ಪಾಕಿಸ್ತಾನವನ್ನು ತಲುಪಿದ್ದರಂತೆ. ಅಲ್ಲಿ ಇವರಿಗೆ 16 ದಿನಗಳ ಕಾಲ ಐಇಡಿ ಬಾಂಬ್ ಸ್ಫೋಟದ ತಂತ್ರಜ್ಞಾನ, ಮದ್ದು ಗುಂಡು, ಗನ್ ಇತ್ಯಾದಿಗಳ ತರಬೇತಿ ಸಿಕ್ಕಿತ್ತು. ಈ ವಿಚಾರಗಳು ಈ ಆರು ಮಂದಿಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನ್ಯೂಸ್18 ವಾಹಿನಿಗೆ ಈ ವಿಚಾರಣೆಯ ಎಕ್ಸ್​ಕ್ಲೂಸಿವ್ ಮಾಹಿತಿ ಲಭಿಸಿದೆ. ಇದೇ ವೇಳೆ, ಆರು ಮಂದಿ ಆರೋಪಿಗಳ ಪೈಕಿ ಒಸಾಮ ಎಂಬ ಆರೋಪಿಯ ತಂದೆ ಒಬಾದುರ್ ಅವರನ್ನ ದುಬೈನಿಂದ ಭಾರತಕ್ಕೆ ಹಸ್ತಾಂತರಿಸಿಕೊಳ್ಳುವ ಸಾಧ್ಯತೆ ಇದೆ. ಉಗ್ರ ತರಬೇತಿ ಶಿಬಿರದ ಖರ್ಚು ವೆಚ್ಚಗಳನ್ನ ಒಬಾದುರ್​ನೇ ನೋಡಿಕೊಂಡಿದ್ದನೆನ್ನಲಾಗಿದೆ. ದುಬೈನಲ್ಲಿ ಈತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.

  ನಿನ್ನೆ ದೆಹಲಿ ಪೊಲೀಸರು ಬಂಧಿಸಿದ್ದ ಆರು ಉಗ್ರರು ಶೇಖ್ ಅಲಿಯಾಸ್ ಸಮೀರ್, ಒಸಾಮ (22), ಮೂಲಚಂದ್(47), ಮೊಹಮ್ಮದ್ ಅಬು ಬಕರ್(23), ಜೀಷನ್ ಖಮರ್(28) ಮತ್ತು ಮೊಹಮ್ಮದ್ ಆಮಿರ್ ಜಾವೇದ್(31) ಅವರನ್ನ ದೆಹಲಿಯ ನ್ಯಾಯಾಲಯವೊಂದು ಇಂದು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಈ ಆರು ಮಂದಿಯು ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ದರ್ಜೆಯ ಅಧಿಕಾರಿ ಘಾಜಿ ಎಂಬುವರಿಂದ ತರಬೇತಿ ಪಡೆದು ಬಂದವರಾಗಿದ್ದರು. ದೇಶಾದ್ಯಂತ ಗಣೇಶ ಚತುರ್ಥಿ, ನವರಾತ್ರಿ, ರಾಮಲೀಲಾ ಹಬ್ಬಗಳಂದು ಬಾಂಬ್ ಸ್ಫೋಟ ನಡೆಸಲು ಯೋಜಿಸಿದ್ದರೆನ್ನಲಾಗಿದೆ. ಅಷ್ಟರಲ್ಲಿ ದೆಹಲಿ ಪೊಲೀಸ್​ನ ವಿಶೇಷ ತಂಡವು ನಿನ್ನೆ ಈ ಉಗ್ರ ಜಾಲವನ್ನು ಪತ್ತೆ ಹಚ್ಚಿ ಉಗ್ರ ಸಂಚನ್ನು ವಿಫಲಗೊಳಿಸಿದೆ.

  ಜೀಷನ್ ಎಂಬ ಆರೋಪಿ ಮಸ್ಕಟ್​ನಲ್ಲಿರುತ್ತಾನೆ. ಲಕ್ನೋದಿಂದ ಒಸಾಮ ಅದೇ ಸ್ಥಳಕ್ಕೆ ಬರುತ್ತಾನೆ. ಉಳಿದ ನಾಲ್ವರು ಆರೋಪಿಗಳೂ ಅಲ್ಲಿಗೆ ಬರುತ್ತಾರೆ. ಬಳಿಕ ಅಲ್ಲಿಂದ ಈ ಆರು ಆರೋಪಿಗಳು ಬೇರೆ ಬೇರೆ ಮಾರ್ಗಗಳನ್ನ ಹಿಡಿದು ಪಾಕಿಸ್ತಾನ ತಲುಪುತ್ತಾರೆ. ಅಲ್ಲಿ 15 ದಿನಗಳ ಕಾಲ ಅವರಿಗೆ ಭಯೋತ್ಪಾದನಾ ಕೃತ್ಯದ ತರಬೇತಿ ನೀಡಲಾಗುತ್ತದೆ. ಕುತೂಹಲವೆಂದರೆ ಎಲ್ಲರ ಬಳಿಯೂ ಅಧಿಕೃತ ಟ್ರಾವೆಲ್ ದಾಖಲೆಗಳಿದ್ದವು. ಓಮನ್ ದೇಶ ದಾಟಿದ ಬಳಿಕ ಅವರ ಪಾಸ್​ಪೋರ್ಟ್​ಗೆ ಯಾವ ಮುದ್ರೆಯೂ ಬಿದ್ದಿಲ್ಲ. ಇರಾನ್ ಮತ್ತು ಪಾಕಿಸ್ತಾನದ ಜಲಮಾರ್ಗವನ್ನು ಅಕ್ರಮವಾಗಿ ಮುಟ್ಟಿದರೂ ಯಾರೂ ಏನೂ ಮಾಡುವುದಿಲ್ಲ. ಮಾನವ ಸಾಗಣೆದಾರನೊಬ್ಬ ತಮ್ಮನ್ನು ಓಮನ್​ನಿಂದ ಪಾಕಿಸ್ತಾನಕ್ಕೆ ಕರೆದೊಯ್ದಿದ್ದ ಎಂದು ಆರು ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

  ಇದನ್ನೂ ಓದಿ: EXPLAINED: Dengue ಕೊರೋನಾ ನಂತರ ಜನರನ್ನು ಕಾಡಲಿದೆಯೇ ಡಿ 2 ಡೆಂಗ್ಯೂ ? ಇಲ್ಲಿದೆ ವಿವರ

  ಮಸ್ಕಟ್​ನಿಂದ ಇರಾನ್​ಗೆ ಆರೋಪಿಗಳು ಜಲಮಾರ್ಗದಲ್ಲಿ ಹೋಗುತ್ತಾರೆ. ಅಲ್ಲಿಂದ ಮತ್ತೆ ರಸ್ತೆ ಮಾರ್ಗದಲ್ಲಿ ಸಾಗುತ್ತಾರೆ. ಪಾಕಿಸ್ತಾನದ ಗ್ವಾದರ್ ಏರ್​ಪೋರ್ಟ್​ಗೆ ಅವರು ಮತ್ತೆ ಸಮುದ್ರ ಮಾರ್ಗದಲ್ಲೇ ಸಾಗುತ್ತಾರೆ. ಕರಾಚಿಯ ಥಟ್ಟಾ ಎಂಬಲ್ಲಿನ ಫಾರ್ಮ್​ ಹೌಸ್​ವೊಂದರಲ್ಲಿ ಲೆಫ್ಟಿನೆಂಟ್ ದರ್ಜೆಯ ಸೇನಾಧಿಕಾರಿಯಿಂದ ಇವರಿಗೆ ತರಬೇತಿ ಸಿಕ್ಕಿತೆನ್ನಲಾಗಿದೆ.

  ಐಎಸ್​ಐ ಪ್ರಾಯೋಜಿತ ತರಬೇತಿ ಪಡೆದ ಜಾನ್ ಮೊಹಮ್ಮದ್ ಶೇಖ್ ಎಂಬೊಬ್ಬ ಆರೋಪಿಗೆ ಡಿ ಕಂಪನಿಯಿಂದ ಸ್ಫೋಟಕಗಳನ್ನ ಕೊಡಲಾಗುತ್ತದೆ. ಭಾರತದ ವಿವಿಧ ಭಾಗಗಳಿಗೆ ಇವುಗಳನ್ನ ತಲುಪಿಸುವ ಜವಾಬ್ದಾರಿ ವಹಿಸಲಾಗುತ್ತದೆ ಎಂಬ ವಿಚಾರ ಅವರ ವಿಚಾರಣೆಯಿಂದ ತಿಳಿದುಬಂದಿದೆ.
  Published by:Vijayasarthy SN
  First published: