• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Atiq Ahmed Case: 2 ವರ್ಷದಲ್ಲಿ ಅತಿಕ್ ಅಹ್ಮದ್‌ಗೆ ಸೇರಿದ 6 ಕಟ್ಟಡಗಳು ನೆಲಸಮ! ಈ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?

Atiq Ahmed Case: 2 ವರ್ಷದಲ್ಲಿ ಅತಿಕ್ ಅಹ್ಮದ್‌ಗೆ ಸೇರಿದ 6 ಕಟ್ಟಡಗಳು ನೆಲಸಮ! ಈ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?

(ಸಂಗ್ರಹ ಚಿತ್ರ)

(ಸಂಗ್ರಹ ಚಿತ್ರ)

ಕಟ್ಟಡಗಳನ್ನು ಕೆಡವುವ ಮೊದಲು ಅತೀಕ್ ಅಹ್ಮದ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ ಅತಿಕ್‌ನ ಕುಟುಂಬದ ಯಾವುದೇ ಸದಸ್ಯರು ಇದುವರೆಗೆ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದಂತೆ ಮುಂದೆ ಬಂದಿಲ್ಲ ಎಂದು ಪಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • Share this:

ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ದುಷ್ಕರ್ಮಿಗಳು ದರೋಡೆಕೋರ ಕಂ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್‌ನನ್ನು (Ahraf) ಕೆಲ ದಿನಗಳ ಹಿಂದೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಅತಿಕ್ ಅಹ್ಮದ್‌ನ ಮನೆ ಮತ್ತು ಕಚೇರಿ ಸೇರಿದಂತೆ ಆರು ಕಟ್ಟಡಗಳನ್ನು ನೆಲಸಮಗೊಳಿಸಿರುವ (Demolish) ಅಂಕಿಅಂಶಗಳು ಹೊರಬಿದ್ದಿವೆ.


ಅತಿಕ್ ಅಹ್ಮದ್‌ಗೆ ಸೇರಿದ ಆರು ಕಟ್ಟಡಗಳ ನೆಲಸಮ
ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ಸೆಪ್ಟೆಂಬರ್ 2020 ರಿಂದ ಅತಿಕ್ ಅಹ್ಮದ್ ಅವರ ಮನೆ ಮತ್ತು ಕಚೇರಿ ಸೇರಿದಂತೆ ಆರು ಕಟ್ಟಡಗಳನ್ನು ನೆಲಸಮಗೊಳಿಸಿದೆ. ಈ ಪೈಕಿ ಎರಡು ಕಟ್ಟಡಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ತಿಳಿಸಿದೆ.


ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡಗಳು!
ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಎರಡು ಕಟ್ಟಡಗಳನ್ನು ನೆಲಸಮಗೊಳಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಕೆಡವಲಾದ ಉಳಿದ ನಾಲ್ಕು ಆಸ್ತಿಗಳು ಅತೀಕ್ ಅಹ್ಮದ್‌ಗೆ ಸೇರಿವೆ. ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ನಿರ್ಮಿಸಿದ ಕಾರಣ ಆತನಿಗೆ ಸೇರಿದ ಕಟ್ಟಡಗಳನ್ನು ಕೆಡವಲಾಗಿದೆ. ಕೆಡವುವ ಮೊದಲು ಅತೀಕ್ ಅಹ್ಮದ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ ಅತಿಕ್‌ನ ಕುಟುಂಬದ ಯಾವುದೇ ಸದಸ್ಯರು ಇದುವರೆಗೆ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದಂತೆ ಮುಂದೆ ಬಂದಿಲ್ಲ ಎಂದು ಪಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Atiq Ahmed Killers: ಅತೀಕ್ ಅಹ್ಮದ್ ಶೂಟೌಟ್‌ನ ಮೂವರು ಆರೋಪಿಗಳಿಗಿದೆ ಖತರ್ನಾಕ್ ಇತಿಹಾಸ!


ನೆರೆಹೊರೆಯವರ ಜಮೀನು ಸ್ವಾಧೀನ
ಪ್ರಯಾಗ್‌ರಾಜ್‌ನ ಚಕಿಯಾ ಕ್ರಾಸಿಂಗ್‌ನಲ್ಲಿರುವ ಅತಿಕ್‌ ಕಚೇರಿಯನ್ನು ಕೆಡವಿದ ಎರಡು ದಿನಗಳ ನಂತರ ಚಕಿಯಾ ಪ್ರದೇಶದಲ್ಲಿರುವ ಎರಡು ಅಂತಸ್ತಿನ ಮನೆಯನ್ನು ಸಹ 2020ರ ಸೆಪ್ಟೆಂಬರ್ 22 ರಂದು ಕೆಡವಲಾಯಿತು. ಅಲ್ಲದೇ ಅತೀಕ್ ನೆರೆಹೊರೆಯವರ ಜಮೀನನ್ನು ಬಲವಂತವಾಗಿ ವಶಪಡಿಸಿಕೊಂಡು ತಮ್ಮ ಮನೆಯ ಜಾಗಕ್ಕೆ ಸೇರಿಸಿಕೊಂಡಿದ್ದ. ಹೀಗಾಗಿ ಈ ಮನೆಯನ್ನು ಮೂರು ವರ್ಷದ ಹಿಂದೆ ನೆಲಸಮಗೊಳಿಸಲಾಗಿದೆ. ಇನ್ನೂ ಕಚೇರಿ ಕೂಡ ಭಾಗಶಃ ಅಕ್ರಮವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಅನುಮೋದನೆ ಪಡೆಯದೇ ದೊಡ್ಡ ಕಟ್ಟಡ ನಿರ್ಮಾಣ!


“ಪ್ರಾಧಿಕಾರ ಅನುಮೋದಿಸಲ್ಪಟ್ಟಿದ್ದಕ್ಕಿಂತ ದೊಡ್ಡ ಪ್ರದೇಶದಲ್ಲಿ ಕಚೇರಿ ಕಟ್ಟಡವನ್ನು ಅತಿಕ್ ನಿರ್ಮಿಸಿದ್ದರು. ಕಟ್ಟಡದ ಯೋಜನೆಯನ್ನು ಅಕ್ಟೋಬರ್ 2004 ರಲ್ಲಿ ಪ್ರಾಧಿಕಾರವು ಅನುಮೋದಿಸಿದೆ. ಹೆಚ್ಚುವರಿ ನಿರ್ಮಾಣಕ್ಕಾಗಿ ವಿವರಣೆಯನ್ನು ಕೋರಿ 2019 ರಲ್ಲಿ ಅತೀಕ್ ಮನೆಗೆ ನೋಟಿಸ್‌ಗಳನ್ನು ನೀಡಲಾಯಿತು. ಆದರೆ ಇದಕ್ಕೆ ಅತೀಕ್‌ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ ಅಕ್ರಮವಾಗಿ ನಿರ್ಮಿಸಲಾದ ಪ್ರದೇಶವನ್ನು ಸೆಪ್ಟೆಂಬರ್ 20, 2020 ರಂದು ಕೆಡವಲಾಯಿತು ಎಂದು ಪಿಡಿಎ ಅಧಿಕಾರಿ ಹೇಳಿದರು.


ಫೆಬ್ರವರಿ 24 ರಂದು ಪ್ರಯಾಗರಾಜ್‌ನ ಧೂಮಂಗಂಜ್ ಪ್ರದೇಶದಲ್ಲಿ ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರ ಹತ್ಯೆಗೆ ಸಂಬಂಧಿಸಿದ ಐದು ಜನರನ್ನು ಬಂಧಿಸಿದ ನಂತರ ಪ್ರಯಾಗರಾಜ್ ಪೊಲೀಸರು ಮಾರ್ಚ್ 21 ರಂದು ಕಚೇರಿ ಕಟ್ಟಡದೊಳಗೆ ಶೋಧ ನಡೆಸಿದರು. ಕಾರ್ಯಾಚರಣೆಯಲ್ಲಿ ಅತೀಕ್ ಕಚೇರಿಯಿಂದ 72.37 ಲಕ್ಷ ರೂಪಾಯಿ ನಗದು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಆ ವೇಳೆ ತಿಳಿಸಿದ್ದರು.‌


ಕುಟುಂಬಕ್ಕೆ ಬೆದರಿಕೆವೊಡ್ಡಿ ಜಮೀನು ವಶ
ಕಟ್ಟಡದ ಸಮೀಪ ಅಂಗಡಿಗಳ ಮಾಲೀಕರು ಮಾತನಾಡಿ, ಹಲವು ವರ್ಷಗಳ ಹಿಂದೆ ಅತೀಕ್ ಅವರ ಕಚೇರಿ ಕಟ್ಟಡ ಇರುವ ಜಮೀನಿನಲ್ಲಿ ಕುಟುಂಬವೊಂದು ವಾಸವಾಗಿತ್ತು. ಅತಿಕ್ ತನಗೆ ಜಮೀನನ್ನು ಕಡಿಮೆ ದರಕ್ಕೆ ಮಾರಾಟ ಮಾಡುವಂತೆ ಕುಟುಂಬದ ಮೇಲೆ ಒತ್ತಡ ಹೇರಿದ್ದ. ಪಾಪಾ ಆ ಕುಟುಂಬ ಇವರ ಕಿರುಕುಳಕ್ಕೆ ಜಮೀನು ಮಾರಿ ಹೋದರು. ನಂತರ ಅತೀಕ್ ಅಲ್ಲಿ ತನ್ನ ಕಚೇರಿಯನ್ನು ನಿರ್ಮಿಸಿದನು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಕಚೇರಿಗೆ ಭೇಟಿ ನೀಡುತ್ತಿದ್ದ ಎಂದು ಕಟ್ಟಡದ ಎದುರು ಪಾನ್ ಅಂಗಡಿ ನಡೆಸುತ್ತಿರುವ ಮನೋಜ್ ಕುಮಾರ್ ಹೇಳಿದರು.


ಇದನ್ನೂ ಓದಿ: Demolition: ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ದೆಹಲಿಯಲ್ಲಿ ಮಸೀದಿ, ದೇವಸ್ಥಾನ ನೆಲಸಮ


2020-21ರವರೆಗೆ ನೆಲಸಮವಾದ ಅತೀಕ್‌ ಆಸ್ತಿಗಳು




    • ಸಿವಿಲ್ ಲೈನ್ಸ್ ಪ್ರದೇಶದಲ್ಲಿ 4,500 ಚದರ ಅಡಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ವಾಣಿಜ್ಯ ಕಟ್ಟಡವನ್ನು ಸೆಪ್ಟೆಂಬರ್ 7, 2020 ರಂದು ಕೆಡವಿದ ಅಧಿಕಾರಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಂಡರು.

    • ಸಿವಿಲ್ ಲೈನ್ಸ್‌ನಲ್ಲಿ 6,300 ಚದರ ಅಡಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ವಾಣಿಜ್ಯ ಕಟ್ಟಡ ಸೆಪ್ಟೆಂಬರ್ 12, 2020 ರಂದು ನೆಲಸಮ.

    • ಸೆಪ್ಟೆಂಬರ್ 13, 2020 ರಂದು ಲುಕರ್‌ಗಂಜ್ ಪ್ರದೇಶದಲ್ಲಿ 6,300 ಚದರ ಅಡಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡ ಸ್ವಾಧೀನಪಡಿಸಿಕೊಂಡ ಪಿಡಿಎ.

    • ಸೆಪ್ಟೆಂಬರ್ 13, 2020 ರಂದು ಲುಕರ್‌ಗಂಜ್‌ನಲ್ಲಿ 23,400 ಚದರ ಅಡಿ ಮತ್ತು 34,200 ಚದರ ಅಡಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡ ಸ್ವಾಧೀನ.

    • ಜುಸಿ ಪ್ರದೇಶದಲ್ಲಿ ಅತೀಕ್ ಅವರ ಕೋಲ್ಡ್ ಸ್ಟೋರೇಜ್ ಅನ್ನು ಸೆಪ್ಟೆಂಬರ್ 17 ಮತ್ತು 18, 2020 ರಂದು ಕೆಡವಲಾಯಿತು.

    • ಸೆಪ್ಟೆಂಬರ್ 20, 2020 ರಂದು ಅಕ್ರಮವಾಗಿ ನಿರ್ಮಿಸಲಾದ ಕಚೇರಿ ಭಾಗಗಳ ನೆಲಸಮ

    • ಸೆಪ್ಟೆಂಬರ್ 22, 2020 ರಂದು ಅತೀಕ್ ಮನೆ ನೆಲಸಮ.




top videos



    • ಲುಕರ್‌ಗಂಜ್‌ನಲ್ಲಿ 40,500 ಚದರ ಅಡಿ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಮಾರ್ಚ್ 7-10, 2021 ರಂದು ಕೆಡವಲಾಯಿತು

    First published: