ಜಪಾನ್​ನಲ್ಲಿ ನೆಲಕ್ಕುರುಳಿದ ಅಮೆರಿಕದ ಸೇನಾ ವಿಮಾನಗಳು; ಆರು ಸಿಬ್ಬಂದಿ ನಾಪತ್ತೆ

ಸಿ-130 ವಿಮಾನದಲ್ಲಿ ಐದು ಸಿಬ್ಬಂದಿ ಹಾಗೂ ಎಫ್​-18 ವಿಮಾನದಲ್ಲಿ ಎರಡು ಸಿಬ್ಬಂದಿ ಇದ್ದರು. ಓರ್ವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಣೆಯಾದ ಆರು ಸಿಬ್ಬಂದಿಗಾಗಿ ಹುಡುಕಾಟ ಮುಂದುವರಿದಿದೆ.

Rajesh Duggumane | news18
Updated:December 6, 2018, 12:53 PM IST
ಜಪಾನ್​ನಲ್ಲಿ ನೆಲಕ್ಕುರುಳಿದ ಅಮೆರಿಕದ ಸೇನಾ ವಿಮಾನಗಳು; ಆರು ಸಿಬ್ಬಂದಿ ನಾಪತ್ತೆ
ಸಾಂದರ್ಭಿಕ ಚಿತ್ರ
Rajesh Duggumane | news18
Updated: December 6, 2018, 12:53 PM IST
ಟೋಕಿಯೋ(ಡಿ.06): ಅಮೆರಿಕದ ಎರಡು ಸೇನಾ ವಿಮಾನಗಳು ಜಪಾನ್​ನಲ್ಲಿ ಪತನಗೊಂಡಿದ್ದು, ಅಮೆರಿಕ ನೌಕಾಪಡೆಯ 6 ಸಿಬ್ಬಂದಿ ಕಾಣೆಯಾಗಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯತ್ತಿದ್ದು, ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಎಫ್​-18 ಫೈಟರ್​ ಹಾಗೂ ಸಿ-130 ಟ್ಯಾಂಕರ್​ ವಿಮಾನಗಳು ದಕ್ಷಿಣ ಜಪಾನ್​ನ ಇವಕುನಿ ಬಳಿ ಇರುವ ವಾಯು ನೆಲೆಯಲ್ಲಿ ಇಂಧನ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದವು. ಎರಡೂ ವಿಮಾನಗಳು ಟೇಕ್​ ಆಫ್​ ಆದ ಕೆಲವೇ ನಿಮಿಷಗಳಲ್ಲಿ ನೆಲಕ್ಕುರುಳಿವೆ ಎಂದು ಜಪಾನ್​ ಅಧಿಕಾರಿಗಳು ತಿಳಿಸಿದ್ದಾರೆ.

ಸಿ-130 ವಿಮಾನದಲ್ಲಿ ಐದು ಸಿಬ್ಬಂದಿ ಹಾಗೂ ಎಫ್​-18 ವಿಮಾನದಲ್ಲಿ ಎರಡು ಸಿಬ್ಬಂದಿ ಇದ್ದರು. ಓರ್ವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಣೆಯಾದ ಆರು ಸಿಬ್ಬಂದಿಗಾಗಿ ಹುಡುಕಾಟ ಮುಂದುವರಿದಿದೆ.

ಇದನ್ನೂ ಓದಿ:  ತೆಲಂಗಾಣ, ರಾಜಸ್ಥಾನ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ನಾಳೆ ಮತದಾನ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಪಾನ್​ ಅಧಿಕಾರಿಗಳು, ‘ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತಕ್ಕೆ ತುತ್ತಾದ ಎಲ್ಲರೂ ಜೀವಂತವಾಗಿದ್ದಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ದುರಂತಕ್ಕೆ ಕಾರಣವೇನು ಎನ್ನುವ ಬಗ್ಗೆಯೂ ನಾವು ತನಿಖೆ ನಡೆಸುತ್ತೇವೆ’ ಎಂದಿದ್ದಾರೆ.

ನವೆಂಬರ್​ ತಿಂಗಳಲ್ಲಿ ಅಮೆರಿಕದ ನೌಕಾ ಪಡೆಯ ವಿಮಾನ ಒಕಿನಾವಾ ಸಮೀಪ ಸಮುದ್ರಕ್ಕೆ ಉರುಳಿತ್ತು. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಇನ್ನು ಅಮೆರಿಕದ ಸೇನಾ ಹೆಲಿಕಾಪ್ಟರ್​ ಜಪಾನ್​ ಶಾಲೆಯೊಂದರ ಮೇಲೆ ಬಿದ್ದಿತ್ತು. ಈ ಘಟನೆಗಳಿಂದ ಅಮೆರಿಕ ಹಾಗೂ ಜಪಾನ್​ ನಡುವೆ ಬಿಗುವಿನ ವಾತಾವರಣ ಉಂಟಾಗಿತ್ತು.

ಇದನ್ನೂ ಓದಿ: 6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Loading...

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ