Tamil Nadu: ಲಾಕ್‌ಡೌನ್‌ ಅವಧಿಯಲ್ಲಿ ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್ ತಯಾರಿಸಿದ 6 ಜನರ ಬಂಧನ

ಲಾಕ್‌ಡೌನ್‌ ಹೇರಿದ ಬಳಿಕ ಆಲ್ಕೋಹಾಲ್‌ ಬದಲು ಸ್ಯಾನಿಟೈಸರ್‌ ಕುಡಿಯುವ, ನೀಡುವ ಪ್ರಕರಣಗಳು ಇದೇ ಮೊದಲಲ್ಲ. ಕಳೆದ ವರ್ಷ, ತಮಿಳುನಾಡಿನ 35 ವರ್ಷದ ವ್ಯಕ್ತಿಯೊಬ್ಬರು ಮದ್ಯಪಾನ ದೊರಯದೆ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ಮೃತಪಟ್ಟಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತಮಿಳುನಾಡು(ಮೇ 23): ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿನ ಲಾಕ್‌ಡೌನ್(Lockdown) ಮತ್ತೊಮ್ಮೆ ಕೊನೆಯಿಲ್ಲದ ವಿಲಕ್ಷಣ ಘಟನೆಗಳಿಗೆ ಕಾರಣವಾಗಿದೆ. ಈ ಲಾಕ್‌ಡೌನ್‌ನಿಂದ ಜನರು ತಮ್ಮ ಜೀವನವನ್ನು ಕಳೆದುಕೊಳ್ಳಬಹುದು. ಅಂತಹ ಒಂದು ಇತ್ತೀಚಿನ ಘಟನೆಯಲ್ಲಿ, ಸ್ಯಾನಿಟೈಸರ್‌ಗಳಿಂದ ಆಲ್ಕೋಹಾಲ್ ತಯಾರಿಸಿದ್ದಕ್ಕಾಗಿ ತಮಿಳುನಾಡಿನ(Tamil Nadu) ಕಡಲೂರು ಜಿಲ್ಲೆಯಲ್ಲಿ ಕನಿಷ್ಠ ಆರು ಜನರನ್ನು ಬುಧವಾರ ಬಂಧಿಸಲಾಗಿದೆ. ಈ ಘಟನೆಯನ್ನು ಇಂಡಿಯಾ ಟುಡೆ ರಾಮನಾಥನ್ ಕುಪ್ಪಂ ಜಿಲ್ಲೆಯಲ್ಲಿ ವರದಿ ಮಾಡಿದೆ.


ಹಲವು ವ್ಯಕ್ತಿಗಳು ಸ್ಯಾನಿಟೈಸರ್‌ಗಳಿಂದ ಆಲ್ಕೋಹಾಲ್ ತಯಾರಿಸುತ್ತಿದ್ದಾರೆ ಎಂದು ಪೊಲೀಸರಿಗೆ ಎಚ್ಚರಿಸಿದಾಗ ಈ ಘಟನೆ ಬೆಳಕಿಗೆ ಬಂದಿತು ಮತ್ತು ನಂತರ ಆರೋಗ್ಯ ಇಲಾಖೆಯು ಬಳಸುತ್ತಿರುವ ಪದಾರ್ಥವು ವಾಸ್ತವವಾಗಿ ಸ್ಯಾನಿಟೈಸರ್ ಎಂದು ಘೋಷಿಸಿತು.


ಹೆಚ್ಚುತ್ತಿರುವ ಕೋವಿಡ್ ಸೋಂಕುಗಳ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯವು ಲಾಕ್‌ಡೌನ್ ಅನ್ನು ಮತ್ತೊಂದು ವಾರ ಅಂದರೆ ಮೇ 24 ರವರೆಗೆ ವಿಸ್ತರಿಸಿರುವ ಕಾರಣ ತಮಿಳುನಾಡಿನ ಟ್ಯಾಸ್ಮಾಕ್ಸ್ (TASMACS) ಅಂದರೆ ಸರ್ಕಾರದಿಂದ ನಡೆಸಲ್ಪಡುವ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ತಮಿಳುನಾಡಿನ ಕನಿಷ್ಠ 16 ಜಿಲ್ಲೆಗಳಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್(Positivity Rate)‌ ವರದಿಯಾಗಿದೆ. ಈ ಹಿನ್ನೆಲೆ ತಮಿಳುನಾಡಿನಲ್ಲಿ ಲಾಕ್‌ಡೌನ್‌ ಹೇರಲಾಗಿದೆ.

ಇನ್ನು, ಲಾಕ್‌ಡೌನ್‌ ಹೇರಿದ ಬಳಿಕ ಆಲ್ಕೋಹಾಲ್(Alcohol)‌ ಬದಲು ಸ್ಯಾನಿಟೈಸರ್(Sanitizer)‌ ಕುಡಿಯುವ, ನೀಡುವ ಪ್ರಕರಣಗಳು ಇದೇ ಮೊದಲಲ್ಲ. ಕಳೆದ ವರ್ಷ, ತಮಿಳುನಾಡಿನ 35 ವರ್ಷದ ವ್ಯಕ್ತಿಯೊಬ್ಬರು ಮದ್ಯಪಾನ ದೊರಯದೆ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ಮೃತಪಟ್ಟಿದ್ದರು.


ಇದನ್ನೂ ಓದಿ:Nagpur Lockdown: ಲಾಕ್​ಡೌನ್​ ಸಮಯದಲ್ಲಿ ನೂರಾರು ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ಬಡಿಸುತ್ತಿರುವ ಅಪರೂಪದ ವ್ಯಕ್ತಿ..!

ಈ ವರ್ಷದ ಆರಂಭದಲ್ಲಿ, ಮಧ್ಯಪ್ರದೇಶದ(Madhya Pradesh) ಭೋಪಾಲ್‌ನಲ್ಲಿ ಮೂವರು ಸಹೋದರರು ಮದ್ಯದ ಅನುಪಸ್ಥಿತಿಯಲ್ಲಿ ಮೂರು ಲೀಟರ್ ಸ್ಯಾನಿಟೈಸರ್ ಸೇವಿಸಿ ಮೃತಪಟ್ಟಿದ್ದರು. ಮೂವರು ಪುರುಷರು ಮದ್ಯದ ಚಟಕ್ಕೆ ಒಳಗಾಗಿದ್ದರು ಮತ್ತು ಲಾಕ್‌ಡೌನ್ ನಂತರ ಅವರಿಗೆ ಮದ್ಯ ಸಿಗಲಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಆದ್ದರಿಂದ ಅವರು ತಮ್ಮ ಬಾಯಾರಿಕೆಯನ್ನು ನೀಗಿಸಲು ಐದು ಲೀಟರ್ ಸ್ಯಾನಿಟೈಸರ್ ಕುಡಿಯಲು ಪ್ರಯತ್ನಿಸಿದರು. ಮಂಗಳವಾರದಂದು ಅವರ ಶವಗಳನ್ನು ವಶಪಡಿಸಿಕೊಂಡ ಈ ದುರದೃಷ್ಟಕರ ಘಟನೆ ಬೆಳಕಿಗೆ ಬಂದಿತ್ತು.

ಮೃತರನ್ನು ಪಾರ್ವತ್ ಅಹಿರ್ವಾರ್, (55), ರಾಮ್ ಪ್ರಸಾದ್, (50) ಮತ್ತು ಭೂರಾ ಅಹಿರ್ವಾರ್ ಎಂದು ಕಂಡುಕೊಳ್ಳಲಾಗಿತ್ತು. ಈ ಮೂವರಿಗೂ ವಿವಾಹವಾಗಿದ್ದರೂ, ಅವರು ತಮ್ಮ ಕುಟುಂಬದಿಂದ ದೂರ ಉಳಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರಾಮ್ ಪ್ರಸಾದ್ ವರ್ಣಚಿತ್ರಕಾರ ಮತ್ತು ರವಿದಾಸ್ ಕಾಲೋನಿ ಜೆಹಂಗೀರ್‌ಬಾದ್ ನಿವಾಸಿಯಾಗಿದ್ದರೆ, ಉಳಿದ ಇಬ್ಬರು ಕಾರ್ಮಿಕರಾಗಿದ್ದು, ಅವರು ಎಂ.ಪಿ. ನಗರದ ಫುಟ್‌ಪಾತ್‌ಗಳಲ್ಲಿ ಮಲಗುತ್ತಿದ್ದರು ಎಂದು ತಿಳಿದುಬಂದಿದೆ.


ಲಾಕ್‌ಡೌನ್‌ ಸಮಯದಲ್ಲಿ, ಜನರು ಆಲ್ಕೊಹಾಲ್ ಸೇವಿಸಿದ ನಂತರ ಸಾಯುತ್ತಿದ್ದಾರೆ ಎಂದು ವರದಿಯಾಗಿದೆ.




ಇದೇ ರೀತಿಯ ಒಂದು ಘಟನೆಯಲ್ಲಿ, ಕಳೆದ ವರ್ಷ ಆಂಧ್ರಪ್ರದೇಶದ(Andhra Pradesh) ಪ್ರಕಾಶಂ ಜಿಲ್ಲೆಯಲ್ಲಿ ಕೋವಿಡ್ - 19 ಲಾಕ್‌ಡೌನ್ ಅಡಿಯಲ್ಲಿರುವ ಹಳ್ಳಿಯೊಂದರಲ್ಲಿ ಮದ್ಯಕ್ಕೆ ಪರ್ಯಾಯವಾಗಿ ಸ್ಯಾನಿಟೈಸರ್ ಸೇವಿಸಿದ ಕಾರಣದಿಂದ ಮೂವರು ಭಿಕ್ಷುಕರು ಸೇರಿದಂತೆ ಕನಿಷ್ಠ ಹತ್ತು ಮಂದಿ ಮದ್ಯ ವ್ಯಸನಿಗಳು ಮೃತಪಟ್ಟಿದ್ದರು. ಕುರಿಚೆಡು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಲಾಕ್‌ಡೌನ್‌ ಕಾರಣ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮದ್ಯದಂಗಡಿಗಳನ್ನು ಹಲವು ದಿನಗಳವರೆಗೆ ಮುಚ್ಚಲಾಗಿದ್ದರಿಂದ ಅವರು ಕೈ ಸ್ವಚ್ಛತೆಗೆ ಬಳಸುವ ಹ್ಯಾಂಡ್‌ ಸ್ಯಾನಿಟೈಸರ್ ಅನ್ನು ಸೇವಿಸಿದರು ಎಂದು ತಿಳಿದುಬಂದಿತ್ತು.


Published by:Latha CG
First published: