• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mosquito Coil: ಒಂದೇ ಕುಟುಂಬದ 6 ಮಂದಿಯ ಜೀವ ತೆಗೆದ ಸೊಳ್ಳೆ ಬತ್ತಿ, ವಿಷಕಾರಿ ಹೊಗೆಯಿಂದ ಮಲಗಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ!

Mosquito Coil: ಒಂದೇ ಕುಟುಂಬದ 6 ಮಂದಿಯ ಜೀವ ತೆಗೆದ ಸೊಳ್ಳೆ ಬತ್ತಿ, ವಿಷಕಾರಿ ಹೊಗೆಯಿಂದ ಮಲಗಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾವನ್ನಪ್ಪಿದವರಲ್ಲಿ ನಾಲ್ವರು ಪುರುಷರು, ಒಬ್ಬ ಮಹಿಳೆ ಮತ್ತು ಒಂದು ಮಗು ಸೇರಿದೆ. ರಾತ್ರಿ ಕುಟುಂಬಸ್ಥರು ಸೊಳ್ಳೆ ಬತ್ತಿಯನ್ನು ಹಾಸಿಗೆ ಪಕ್ಕದಲ್ಲಿ ಹಚ್ಚಿ ಮಲಗಿದ್ದಾರೆ. ಅದು ಹಾಸಿಗೆಯ ಮೇಲೆ ಬಿದ್ದು, ವಿಷಕಾರಿ ಹೊಗೆ ಉತ್ಪತ್ತಿಯಾಗಿದೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ನವದೆಹಲಿ: ರಾತ್ರಿ ಮಲಗಿದ್ದ ವೇಳೆ ಸೊಳ್ಳೆ (Mosquito) ಕಾಟದಿಂದ ತಪ್ಪಿಸಿಕೊಳ್ಳಲು ಹಚ್ಚಿದ್ದ ಸೊಳ್ಳೆ ನಿವಾರಕ ಬತ್ತಿಯಿಂದಲೇ ( Mosquito Coil) ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ (Delhi) ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಕುಟುಂಬಸ್ಥರು ರಾತ್ರಿ ಸೊಳ್ಳೆ ನಿವಾರಕ ಬತ್ತಿಯನ್ನು ಹಚ್ಚಿ ಮಲಗಿದ್ದಾರೆ. ಅದು ಹಾಸಿಗೆ ಮೇಲೆ ಬಿದ್ದು ಸುಟ್ಟ ಪರಿಣಾಮ ಕಾರ್ಬನ್ ಮಾನಾಕ್ಸೈಡ್ (Carbon Monoxide) ಉತ್ಪತ್ತಿಯಾಗಿ ಉಸಿರುಗಟ್ಟಿ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.


ಸಾವನ್ನಪ್ಪಿದವರಲ್ಲಿ ನಾಲ್ವರು ಪುರುಷರು, ಒಬ್ಬ ಮಹಿಳೆ ಮತ್ತು ಒಂದು ಮಗು ಸೇರಿದೆ. ರಾತ್ರಿ ಕುಟುಂಬಸ್ಥರು ಸೊಳ್ಳೆ ಬತ್ತಿಯನ್ನು ಹಾಸಿಗೆ ಪಕ್ಕದಲ್ಲಿ ಹಚ್ಚಿ ಮಲಗಿದ್ದಾರೆ. ಅದು ಹಾಸಿಗೆಯ ಮೇಲೆ ಬಿದ್ದು, ವಿಷಕಾರಿ ಹೊಗೆ ಉತ್ಪತ್ತಿಯಾಗಿದೆ. ಪರಿಣಾಮವಾಗಿ ಕುಟುಂಬದ ಹಲವಾರು ಸದಸ್ಯರು ಮಲಗಿದ್ದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದು, ಉಸಿರಾಟದಿಂದ ಕಾಬರ್ನ್ ಮಾನಾಕ್ಸೈಡ್​ ದೇಹ ಸೇರಿದ್ದರಿಂದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಇಬ್ಬರು ಪ್ರಾಣಾಪಾಯದಿಂದ ಪಾರು


ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಬೆಳಿಗ್ಗೆ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ತಲುಪಿ ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ದಿತ್ತು. ಅಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. 15 ವರ್ಷದ ಬಾಲಕಿ ಹಾಗೂ 45 ವರ್ಷದ ಮತ್ತೊಬ್ಬ ಮಹಿಳೆಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




ಕಿಟಕಿ ಬಾಗಿಲು ಮುಚ್ಚಿದ್ದರಿಂದ ಸಾವು


ಮನೆಯವರು ಸೊಳ್ಳೆ ನಿವಾರಕ ಬತ್ತಿಯನ್ನು ಹಚ್ಚಿದ ನಂತರ, ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿ ಮಲಗಿದ್ದಾರೆ. ಅದು ಹಾಸಿಗೆ ಮೇಲೆ ಬಿದ್ದು ಕೊಠಡಿಯಲ್ಲಿ ಹೊಗೆ ಆವರಿಸಿದೆ. ಹೊಗೆಯಿಂದ ಉತ್ಪತ್ತಿಯಾದ ಕಾರ್ಬನ್ ಮಾನಾಕ್ಸೈಡ್ ಮೃತರ ದೇಹ ಸೇರಿದ್ದರಿಂದ ಸಾವನ್ನಪ್ಪಿದ್ದಾರೆ. ಮೃತರ ಶವಗಳನ್ನು ಇಂದು ಮರಣೋತ್ತರ ಪರೀಕ್ಷೆಯ ನಂತರ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಈಶಾನ್ಯ ಜಿಲ್ಲೆಯ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ.


ಸೊಳ್ಳೆಬತ್ತಿಗಳು ಆರೋಗ್ಯಕ್ಕೆ ಹಾನಿಕರ


ಸೊಳ್ಳೆಗಳನ್ನು ಓಡಿಸಲು ಸೊಳ್ಳೆ ಬತ್ತಿ, ಸೊಳ್ಳೆ ಓಡಿಸುವ  ಕಾಯಲ್, ದುಬಾರಿ ಸೊಳ್ಳೆ ಔಷಧಗಳನ್ನು ಹೀಗೆ ಇನ್ನೇನೋ ಹಚ್ಚಿಕೊಂಡು ಮಲಗುತ್ತೇವೆ. ಇದು ಸೊಳ್ಳೆಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೋ ಗೊತ್ತಿಲ್ಲ, ಆದರೆ ನಮ್ಮ ಆರೋಗ್ಯದ ಮೇಲೆ ಖಂಡಿತ ಕೆಟ್ಟ ಪರಿಣಾಮ ಬೀರುತ್ತವೆ. ಅದರ ಬದಲು ಸೊಳ್ಳೆಗಳನ್ನು ತಡೆಯಲು ಸೊಳ್ಳೆ ಪರದೆ ಬಳಸುವುದು ಉತ್ತಮ. ಜೊತೆಗೆ ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೊಳಕು ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳುವ ಮೂಲಕ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬೇಕು.


ಸೊಳ್ಳೆ ನಿವಾರಕಗಳಿಂದ ಶ್ವಾಸಕೋಶಕ್ಕೆ ಹಾನಿ


ಸೊಳ್ಳೆ ನಿವಾರಕ ಬತ್ತಿಗಳಲ್ಲಿ ಕ್ಯಾನ್ಸರ್ ಕಾರಕ ಪದಾರ್ಥಗಳಿವೆ. ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ. ಇಷ್ಟು ಮಾತ್ರವಲ್ಲದೆ, ನೀವು ಮುಚ್ಚಿದ ಕೋಣೆಯಲ್ಲಿ ಸೊಳ್ಳೆ ಬತ್ತಿಯನ್ನು ಬಳಸುತ್ತಿದ್ದರೆ, ಅದರ ಹೊಗೆಯು ಸಿಗರೇಟ್‌ ಸೇದುವುದಕ್ಕೆ ಸಮಾನವಾಗಿರುತ್ತದೆ.


ಇದನ್ನೂ ಓದಿ: Mosquito Coil Side Effects: ಸೊಳ್ಳೆ ಜಾಸ್ತಿ ಅಂತ ಕಾಯಿಲ್ ಬಳಕೆ ಮಾಡಿದ್ರೆ ಈ ಎಲ್ಲಾ ಸಮಸ್ಯೆಗಳು ಬರ್ಬೋದು ಎಚ್ಚರ


ತೆಗೆದುಕೊಳ್ಳಬೇಕಾದ ಕ್ರಮ

top videos


    ಸೊಳ್ಳೆಗಳ ನಿಯಂತ್ರಣ ಮಾಡಬೇಕಾದರೂ ನಮ್ಮ ಮನೆಗಳ ಸುತ್ತಮುತ್ತಮಳೆ ನೀರು ಸಂಗ್ರಹವಾಗುವ ಸ್ಥಳಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ. ಅದೇ ಸಮಯದಲ್ಲಿ, ನೀವು ಸಾರಭೂತ ತೈಲವನ್ನು ಸಹ ಬಳಸಬಹುದು. ಎಲ್ಲದಕ್ಕಿಂತ ಮುಖ್ಯವೆಂದರೆ ಸೊಳ್ಳೆ ಪರದೆಗಳನ್ನು ಬಳಸುವುದು ಬಹಳ ಒಳ್ಳೆಯದು. ಜೊತೆಗೆ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವ ಮೂಲಕ ಸೊಳ್ಳೆಕಾಟದಿಂದ ತಪ್ಪಿಸಿಕೊಳ್ಳಬಹುದು.

    First published: