ಒಂದು ಜಿಂಕೆಗಾಗಿ 6 ಸಿಂಹಗಳ ಜಗಳ: ವಿಡಿಯೋ ವೈರಲ್‌..!

ಒಂದು ಜಿಂಕೆಗಾಗಿ 6 ಸಿಂಹಗಳು ಭಯಾನಕವಾಗಿ ಕಿತ್ತಾಡಿವೆ. ಜಗಳವಾಡುತ್ತಿರುವ ಮತ್ತು ಅದನ್ನು ಸಂಪೂರ್ಣವಾಗಿ ತಾನೇ ತಿನ್ನಬೇಕು ಎಂಬ ಆಸೆಯಿಂದ ಹೋರಾಡುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಿಂಹಗಳ ವೈರಲ್​ ವಿಡಿಯೋ

ಸಿಂಹಗಳ ವೈರಲ್​ ವಿಡಿಯೋ

  • Share this:
ಕಾಡು ಪ್ರಾಣಿಗಳನ್ನು ನೋಡಲು  ಹೋಗುವ ಪ್ರವಾಸಿಗರಿಗೆ ಸಾಕಷ್ಟು ಸಲ ನಿರಾಸೆ ಎದುರಾಗುತ್ತದೆ. ಅದೇ ಕೆಲವೊಮ್ಮೆ ಜಾಕ್​ಪಾಟ್​ ಹೊಡೆಯುತ್ತದೆ. ಹೌದು, ವನ್ಯಜೀವನ ಕಾಳಗ, ಮುದ್ದಾದ ಮರಿಗಳ ಜೊತೆಗಿನ ಆಟ.. ಹೀಗೆ ನಾನಾ ರೀತಿಯ ದೃಶ್ಯಗಳು ನೋಡಲು ಸಿಗತ್ತವೆ. ಈಗಲೂ ಸಹ ಸಫಾರಿಗೆ ಹೋದವರಿಗೆ ಇಂತಹದ್ದೇ ದೃಶ್ಯವೊಂದು ಕಣ್ಣಿಗೆ ಬಿದ್ದಿದ್ದು, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಿನಲ್ಲಿ ಸಿಂಹಗಳಿಗೆ ತುಂಬಾ ಅಚ್ಚು ಮೆಚ್ಚಿನ ಆಹಾರ ಎಂದರೆ ಜಿಂಕೆ ಎಂದು ಹೇಳಬಹುದು. ಹೀಗೆ ಸಿಂಹವು ತನ್ನ ಬೇಟೆಗಾಗಿ ಜಿಂಕೆಯನ್ನು ಎಷ್ಟೋ ದೂರ ವೇಗವಾಗಿ ಅಟ್ಟಿಸಿಕೊಂಡು ಹೋಗಿ ದಾಳಿ ಮಾಡಿದ್ದು ನಾವೆಲ್ಲ ವೈರಲ್ ವೀಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ.ಹೀಗೆ ಮಹಾ ಜಟಾಪಟಿಯ ಕಾಳಗ ಎಂದರೆ ಅದು ಸಿಂಹ ಮತ್ತು ಜಿಂಕೆಯದು ಎಂದು ಹೇಳುವಷ್ಟರ ಮಟ್ಟಿಗೆ ಎರಡೂ ಪ್ರಾಣಿಗಳ ವಿಡಿಯೋಗಳನ್ನು ನೋಡಿರುತ್ತೇವೆ.ಇಲ್ಲಿ ಸಹ ಅದೇ ರೀತಿಯಲ್ಲಿ ಒಂದು ಕಾಳಗ ನಡೆದಿದೆ. 

ಅದು  ಒಂದು ಜಿಂಕೆಗಾಗಿ 6 ಸಿಂಹಗಳು ಭಯಾನಕವಾಗಿ ಕಿತ್ತಾಡಿವೆ. ಜಗಳವಾಡುತ್ತಿರುವ ಮತ್ತು ಅದನ್ನು ಸಂಪೂರ್ಣವಾಗಿ ತಾನೇ ತಿನ್ನಬೇಕು ಎಂಬ ಆಸೆಯಿಂದ ಹೋರಾಡುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.45 ಸೆಕೆಂಡುಗಳ ಈ ಭಯಾನಕ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸಾಕೇತ್ ಬಡೋಲಾ ತಮ್ಮ ಟ್ವಿಟ್ಟರ್‌ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ 2 ಸಿಂಹಗಳು ಮರದ ಮೇಲೆ ಜಿಂಕೆಗಾಗಿ ಈಗಾಗಲೇ ಜಗಳವಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಮೂರನೆಯ ಸಿಂಹವು ಮೇಲ್ಭಾಗದಲ್ಲಿ ಸ್ವಲ್ಪ ಹೊತ್ತಿನವೆರೆಗೆ ಸುಮ್ಮನೆ ಕುಳಿತಿದ್ದು, ಇನ್ನೊಂದು ಸಿಂಹ ಮರ ಹತ್ತಿ ಮೇಲೆ ಬರುವುದನ್ನು ಗಮನಿಸಿ ಅದೂ ಜಿಂಕೆಯ ಹೊಟ್ಟೆಗೆ ಬಾಯಿ ಹಾಕಿ ಎಳೆಯುತ್ತದೆ.

ಇದನ್ನೂ ಓದಿ: ರಿಯಲ್ ಸ್ಟಾರ್​ ಉಪೇಂದ್ರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಇಲ್ಲಿವೆ ಚಿತ್ರಗಳು..!

ವಿಡಿಯೋದಲ್ಲಿ ಕೆಲವು ಸೆಕೆಂಡುಗಳಲ್ಲಿ, ಇನ್ನೂ 2 ಸಿಂಹಗಳು ಮರದ ಕೆಳಗೆ ಬರುವುದನ್ನು ನಾವು ನೋಡಬಹುದು. ಹೀಗೆ ಜೋರಾಗಿ ಜಿಂಕೆ ಎಳೆದಂತಹ ಸಂದರ್ಭದಲ್ಲಿ ಜಿಂಕೆಯು ಒಂದು ಸಿಂಹಕ್ಕೆ ಸಿಗುತ್ತದೆ. ಅದನ್ನು ಬಾಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ದೂರ ಓಡಿದರೂ, ಇನ್ನುಳಿದ ಸಿಂಹಗಳು ಬಿಡದೆ ಹಿಂಬಾಲಿಸಿಕೊಂಡು ಹೋಗಿ ಮತ್ತೆ ಜಗಳವಾಡುತ್ತವೆ. ಈ ಭಯಾನಕ ದೃಶ್ಯವನ್ನು ಅಲ್ಲೇ ಹತ್ತಿರದಲ್ಲಿ ಸಫಾರಿ ಪ್ರವಾಸಿಗರು ನೋಡುತ್ತಿರುವುದನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Gal Gadot: ಚಿತ್ರೀಕರಣದ ಸೆಟ್​ನಲ್ಲೇ ಮಗುವಿಗಾಗಿ ಬಾಟಲಿಗೆ ಎದೆಹಾಲು ತುಂಬಿಸಿದ ವಂಡರ್ ವುಮನ್​ ಖ್ಯಾತಿಯ ನಟಿ

ಆಗಸ್ಟ್ 19ರಂದು ಹಂಚಿಕೊಂಡ ವಿಡಿಯೋವನ್ನು ಈಗಾಗಲೇ ಸುಮಾರು 500 ಜನ ನೋಡಿದ್ದು, 50ಕ್ಕೂ ಹೆಚ್ಚು ಜನರು ಭಯಾನಕ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಅರಣ್ಯ ಅಧಿಕಾರಿ ತಾವು ಹಂಚಿಕೊಂಡ ವಿಡಿಯೋಗೆ "ಒಂದು ಬೇಟೆ, ಅನೇಕ ಪಾಲುದಾರರು" ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದಿಲ್ಲ. ಈ ವಿಡಿಯೋ ಟ್ವಿಟ್ಟರ್‌, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೊವನ್ನು ನೋಡಿದ ನಂತರ ಅನೇಕ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ ಮತ್ತು ಇತರರು ಅದನ್ನು ತಮಾಷೆಯಾಗಿ ನೋಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್​ 2 ಸ್ಯಾಟಲೈಟ್​ ಹಕ್ಕು ಮಾರಾಟ: ಸಿನಿಮಾ ರಿಲೀಸ್​ ಆಗೋದು ಒಟಿಟಿಯಲ್ಲಾ-ಸಿನಿಮಾ ಮಂದಿರಗಳಲ್ಲಾ..?

ಒಬ್ಬ ಬಳಕೆದಾರರು "ಓ ದೇವರೇ.. ಅದ್ಭುತ" ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಸಫಾರಿ ಪ್ರವಾಸಿಗರ ಮುಂದೆ ಸಿಂಹ ಬೇಟೆ ಹೊಂಚು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅನಿರೀಕ್ಷಿತ ದೃಶ್ಯವು ಮುಂದೆ ನಡೆದಿರುವುದನ್ನು ನೋಡಿದ ಪ್ರವಾಸಿಗರು ಸಂಪೂರ್ಣವಾಗಿ ಭಯಭೀತರಾಗಿದ್ದರು.
Published by:Anitha E
First published: