ಇರಾಕ್​ ಮೇಲೆ ಅಮೆರಿಕ ಸೇನಾಪಡೆಯಿಂದ ಮತ್ತೆ ವಾಯುದಾಳಿ; ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ 6 ಜನ ಸಾವು

ಇರಾಕ್​ನ ಹಶೆದ್ ಅಲ್-ಶಾಬಿ ಸೇನಾಪಡೆಯ ವಾಹನಗಳ ಮೇಲೆ ಇಂದು ಬೆಳಗ್ಗೆ ಅಮೆರಿಕ ಸೇನಾಪಡೆ ಮತ್ತೊಮ್ಮೆ ದಾಳಿ ನಡೆಸಿದೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 6 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

news18-kannada
Updated:January 4, 2020, 9:16 AM IST
ಇರಾಕ್​ ಮೇಲೆ ಅಮೆರಿಕ ಸೇನಾಪಡೆಯಿಂದ ಮತ್ತೆ ವಾಯುದಾಳಿ; ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ 6 ಜನ ಸಾವು
ಇರಾಕ್​ನಲ್ಲಿ ಶುಕ್ರವಾರ ನಡೆದ ಅಮೆರಿಕ ವಾಯುದಾಳಿ
  • Share this:
ಬಾಗ್ದಾದ್ (ಜ.4): ಅಮೆರಿಕ ವಾಯುಪಡೆಯ ದಾಳಿಗೆ ಬಲಿಯಾಗಿದ್ದ ಇರಾನ್​ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮನಿ ಸಾವಿನಿಂದ ಯುದ್ಧಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಇಂದು ಮುಂಜಾನೆ ಇರಾಕ್ ಮೇಲೆ ಅಮೆರಿಕ ಸೇನಾಪಡೆ ವಾಯುದಾಳಿ ನಡೆಸಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಇರಾನ್ ಪರವಾಗಿ ಧ್ವನಿಯೆತ್ತಿರುವ ದೇಶಗಳಿಗೆ ಇದರಿಂದ ಆತಂಕ ಎದುರಾಗಿದೆ.

ಇರಾಕ್​ನ ಹಶೆದ್ ಅಲ್-ಶಾಬಿ ಸೇನಾಪಡೆಯ ವಾಹನಗಳ ಮೇಲೆ ಇಂದು ಬೆಳಗ್ಗೆ ಅಮೆರಿಕ ಸೇನಾಪಡೆ ಮತ್ತೊಮ್ಮೆ ದಾಳಿ ನಡೆಸಿದೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 6 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಅಮೆರಿಕದ ಪಡೆಗಳು ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಸೊಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್‌ ಮುಹಂದಿಸ್‌ ಇಬ್ಬರೂ ಬಲಿಯಾಗಿದ್ದರು. ಇರಾನ್ ಸೇನಾ ಮುಖ್ಯಸ್ಥರನ್ನು ಹತ್ಯೆ ಮಾಡಿದ 24 ಗಂಟೆಗಳಲ್ಲೇ ಇರಾಕ್ ಮೇಲೆ ಮತ್ತೊಮ್ಮೆ ಅಮೆರಿಕ ದಾಳಿ ನಡೆಸಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಅಮೆರಿಕದ ವಾಯು ದಾಳಿಯಲ್ಲಿ ನಿನ್ನೆ ಸಾವನ್ನಪ್ಪಿದ ಖಾಸಿಂ ಸೊಲೇಮನಿ ಮತ್ತು ಅಬು ಮೆಹದಿ ಅಲ್ ಮುಹಂದಿಸ್ ಅವರ ಅಂತಿಮಯಾತ್ರೆಗೆ ಸಿದ್ಧತೆ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಇದನ್ನೂ ಓದಿ: ಕೂಡಲೇ ಇರಾಕ್​ನಿಂದ ಜಾಗ ಖಾಲಿ ಮಾಡುವಂತೆ ತನ್ನ ಪ್ರಜೆಗಳಿಗೆ ಕಟ್ಟಪ್ಪಣೆ ಹೊರಡಿಸಿದ ಅಮೆರಿಕ ರಾಯಭಾರ ಕಚೇರಿ

ಇಂದು ಬೆಳಗ್ಗೆ ಸೊಲೇಮನಿ ಮತ್ತು ಮುಹಂದಿಸ್ ಅವರ ಮೃತದೇಹಗಳನ್ನು ಅಂತಿಮ ದರ್ಶನಕ್ಕೆ ಇರಿಸಲು ಮೆರವಣಿಗೆ ಕೊಂಡೊಯ್ಯಲು ನಿರ್ಧರಿಸಲಾಗಿತ್ತು. ಬಾಗ್ದಾದ್​ನಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಮೃತದೇಹಗಳನ್ನು ಇರಾನ್​ಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಸೊಲೇಮನಿ ಸಾವಿನ ಹಿನ್ನಲೆಯಲ್ಲಿ ಇರಾನ್​ನಲ್ಲಿ 3 ದಿನಗಳ ಕಾಲ ಶೋಕಾಚರಣೆಗೆ ಆದೇಶ ನೀಡಲಾಗಿತ್ತು.ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು. ಬಾಗ್ದಾದ್‌ನಲ್ಲಿಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಹಾಗೂ ಮತ್ತಷ್ಟು ಅಮೆರಿಕನ್ನರನ್ನು ಕೊಲ್ಲುವ ಸಂಚಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು.

ಶುಕ್ರವಾರ ನಡೆದ ದಾಳಿಯ ನಂತರ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಅಮೆರಿಕದಲ್ಲಿರುವ ಇರಾನ್ ಪ್ರಜೆಗಳು ತಕ್ಷಣ ಅಲ್ಲಿಂದ ಹೊರಟು ಬರಬೇಕು ಎಂದು ಅಮೆರಿಕ ರಾಯಭಾರ ಕಚೇರಿ ಆದೇಶ ಹೊರಡಿಸಿತ್ತು. ವಿಮಾನದ ಮೂಲಕ ಅಮೆರಿಕದಿಂದ ಹೊರಟು ಬನ್ನಿ, ತಕ್ಷಣ ಅಲ್ಲಿಂದ ಬೇರೆ ಯಾವುದಾದರೂ ದೇಶಕ್ಕೆ ತೆರಳಿ ಎಂದು ಸೂಚನೆ ನೀಡಲಾಗಿತ್ತು.
Published by: Sushma Chakre
First published: January 4, 2020, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading