HOME » NEWS » National-international » SIX CHILDREN AMONG 14 OF MARRIAGE PARTY KILLED IN AN ACCIDENT AT UP SNVS

ಮದುವೆ ದಿಬ್ಬಣದ ಮೇಲೆ ಜವರಾಯನ ಅಟ್ಟಹಾಸ; 6 ಮಕ್ಕಳು ಸೇರಿ 14 ಮಂದಿ ಘೋರ ಸಾವು

ಮದುವೆ ಸಮಾರಂಭ ಮುಗಿಸಿಕೊಂಡು ಕಾರಿನಲ್ಲಿ ಊರಿಗೆ ಮರಳುತ್ತಿದ್ದ 14 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಪ್ರತಾಪ್​ಗಡ್ ಜಿಲ್ಲೆಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್​ಗೆ ಇವರ ಕಾರು ಗುದ್ದಿ ಈ ದುರ್ಘಟನೆ ಸಂಭವಿಸಿದೆ.

news18
Updated:November 20, 2020, 9:53 AM IST
ಮದುವೆ ದಿಬ್ಬಣದ ಮೇಲೆ ಜವರಾಯನ ಅಟ್ಟಹಾಸ; 6 ಮಕ್ಕಳು ಸೇರಿ 14 ಮಂದಿ ಘೋರ ಸಾವು
ಅಪಘಾತದ ದೃಶ್ಯ
  • News18
  • Last Updated: November 20, 2020, 9:53 AM IST
  • Share this:
ಲಕ್ನೋ(ನ. 20): ಮದುವೆ ಮನೆಯಿಂದ ವಾಪಸ್ ಊರಿಗೆ ಕಾರಿನಲ್ಲಿ ಹೊರಟಿದ್ದ 14 ಮಂದಿ ಯಮರಾಯನ ಪಾದ ಸೇರಿದ್ದಾರೆ. ಉತ್ತರ ಪ್ರದೇಶದ ಪ್ರತಾಪ್​ಗಡ್ ಜಿಲ್ಲೆಯ ಹೆದ್ದಾರಿ ರಸ್ತೆಯಲ್ಲಿ ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ ಹೊಡೆದು ಈ ದಾರುಣ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಎಲ್ಲಾ 14 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರೂ ಬದುಕಿಲ್ಲ ಎಂದು ಅಲ್ಲಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಯಾಗ್​ರಾಜ್-ಲಕ್ನೋ ಹೆದ್ದಾರಿಯಲ್ಲಿ ನಿನ್ನೆ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿರುವುದು ತಿಳಿದುಬಂದಿದೆ.

ಅಪಘಾತಕ್ಕೀಡಾದ ಕಾರು ರಸ್ತೆಯಲ್ಲಿ ಕಬ್ಬಿಣದ ರಾಶಿ ಚೆಲ್ಲಿದಂತಿತ್ತು. ಒಳಗಿದ್ದ ಶವಗಳನ್ನ ಹೊರತೆಗೆಯಲು ಗ್ಯಾಸ್ ಕಟ್ಟರ್ ಬಳಕೆ ಮಾಡಬೇಕಾಯಿತು. ಈ ಕಾರ್ಯಕ್ಕೆ ಮೂರು ಗಂಟೆಗೂ ಹೆಚ್ಚು ಕಾಲ ಹಿಡಿದಿದೆ. ಎಲ್ಲಾ 14 ಶವಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ಧಾರೆ.

ಇದನ್ನೂ ಓದಿ: BTS 2020 - ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ಕೇಂದ್ರದ ಒತ್ತು ; ಸಾವಿರ ದಿನಗಳಲ್ಲಿ 6 ಲಕ್ಷ ಕಿ.ಮೀ. ಆಪ್ಟಿಕ್ ಫೈಬರ್ ಜಾಲ ; ರವಿಶಂಕರ್ ಪ್ರಸಾದ್

ಮೃತರೆಲ್ಲರೂ ಪ್ರತಾಪ್​ಗಡ್​ನ ಕುಂಡಾ ಎಂಬಲ್ಲಿನ ನಿವಾಸಿಗಳೆನ್ನಲಾಗಿದೆ. ನವಾಬ್​​ಗಂಜ್ ಪ್ರದೇಶದಲ್ಲಿ ನಡೆದಿದ್ದ ಮದುವೆ ಸಮಾರಂಭ ಮುಗಿಸಿಕೊಂಡು ಇವರು ಊರಿಗೆ ಮರಳುತ್ತಿದ್ದರು. ಈ ವೇಳೆ ಚಾಲಕ ಕಾರು ಓಡಿಸುವಾಗ ನಿದ್ದೆ ಮಾಡಿದ್ದರಿಂದ ಅಪಘಾತವಾಗಿರಬಹುದು ಎಂದು ಶಂಕಿಸಲಾಗಿದೆ.
Published by: Vijayasarthy SN
First published: November 20, 2020, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories