ಲಂಖೀಪುರ ಹತ್ಯಾಕಾಂಡ ಯೋಜಿತ ಪಿತೂರಿ ಎಂದ ವರದಿ

ಲಂಖೀಪುರದಲ್ಲಿ (Lakhimpur) ನಡೆದ ಘಟನೆ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಅಪಘಾತವಲ್ಲ ಎಂದು ಎಸ್‌ಐಟಿ (SIT) ಮುಖ್ಯ ತನಿಖಾಧಿಕಾರಿ ವಿದ್ಯಾರಾಮ್ ದಿವಾಕರ್ ಸ್ಪಷ್ಟಪಡಿಸಿದ್ದಾರೆ.

ರೈತರ ಪ್ರತಿಭಟನೆ ಚಿತ್ರ

ರೈತರ ಪ್ರತಿಭಟನೆ ಚಿತ್ರ

 • Share this:
  ಲಕ್ನೋ (ಡಿ. 14): ಲಖೀಂಪುರ ಖೇರಿಯಲ್ಲಿ (Lakhimpur Kheri) ರೈತರ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ನಾಲ್ವರು ರೈತರ (Farmers Death) ಮತ್ತು ಪತ್ರಕರ್ತರ ಹತ್ಯೆ ಯೋಜಿತ ಪಿತೂರಿಯಾಗಿದೆ ಎಂದು ವಿಶೇಷ ತನಿಖಾ ತಂಡ ವರದಿ ತಿಳಿಸಿದೆ. ಕಳೆದ ಮೂರು ತಿಂಗಳ ಹಿಂದೆ ಉತ್ತರ ಪ್ರದೇಶದ ಲಂಖೀಪುರ ಟಿಕುನಿಯಾ ಪ್ರದೇಶದಲ್ಲಿ ರೈತರು ಪ್ರತಿಭಟನೆ ಮಾಡುವಾಗ ಕೇಂದ್ರ ಸಚಿವ ಅಜಯ್​ ಮಿಶ್ರಾಟೆನಿ ರೈತರ ಮೇಲೆ ವಾಹನವನ್ನು ಹತ್ತಿಸಿ ಅವರ ಸಾವಿಗೆ ಕಾರಣರಾಗಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಎಸ್​​ಐಟಿ (SIT) ಈಗ ವರದಿ ಬಹಿರಂಗ ಪಡಿಸಿದೆ. ಮೂರು ತಿಂಗಳ ಹಿಂದೆ ನಡೆಸದ ಈ ಘಟನೆ ಆಕಸ್ಮಿಕವಲ್ಲ. ಇದು ಯೋಜಿತ ಸಂಚು ಎಂದು ತಿಳಿಸಿದೆ.

  ಯೋಚಿತ ಸಂಚು ಎಂದ ಎಸ್​ಐಟಿ

  ವರದಿ ಬೆನ್ನಲ್ಲೇ ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಎಸ್​ಐಟಿ ಆರೋಪಿಗಳ ವಿರುದ್ಧ ಹಲವು ಸೆಕ್ಷನ್‌ಗಳನ್ನು ಮಾರ್ಪಡಿಸುವಂತೆ ಕೋರಿದೆ. ಆರೋಪಿಗಳ ವಿರುದ್ಧ ಸೆಕ್ಷನ್‌ಗಳಲ್ಲಿ 307 (ಕೊಲೆಗೆ ಯತ್ನ), 326 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಸೇರಿವೆ. ಇದರೊಂದಿಗೆ ಹೆಚ್ಚಿದ ಸೆಕ್ಷನ್‌ಗಳಡಿ ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರಿ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

  ಆರೋಪಿಗಳ ಬಂಧನ

  ಟಿಕುನಿಯಾ ಘಟನೆಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತನ ಹತ್ಯೆಗೆ ಕಾರಣವಾಗಿದ್ದ ಆಶಿಶ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ, ಎಸ್‌ಐಟಿ ಆಶಿಶ್ ಮಿಶ್ರಾ, ಅಂಕಿತ್ ದಾಸ್ ಮತ್ತು ಸುಮಿತ್ ಜೈಸ್ವಾಲ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸಿದೆ.

  ಏನಿದೆ ವರದಿಯಲ್ಲಿ

  ಆರೋಪಿಗಳ ಬಂಧನಕ್ಕೆ ಕೋರಿ ಎಸ್‌ಐಟಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
  ಲಂಖೀಪುರದಲ್ಲಿ ನಡೆದ ಘಟನೆ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಅಪಘಾತವಲ್ಲ ಎಂದು ಎಸ್‌ಐಟಿ ಮುಖ್ಯ ತನಿಖಾಧಿಕಾರಿ ವಿದ್ಯಾರಾಮ್ ದಿವಾಕರ್ ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆ ವೇಳೆ ಜನಸಮೂಹವನ್ನು ಹತ್ತಿಕ್ಕಲು ಸಂಚು, ಚೆನ್ನಾಗಿ ಯೋಚಿಸಿದ ಪಿತೂರಿಯಂತೆ ಕೊಲೆಯ ಯತ್ನದ ಪ್ರಕರಣವಿದೆ ಎಂದು ತಿಳಿಸಿದೆ

  ಏನಿದು ಘಟನೆ

  ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಡಿಸಿಎಂ ಕೇಶವ್ ಮೌರ್ಯ ಲಖೀಂಪುರಕ್ಕೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ತೆರಳಿದ್ದರು. ಕೇಂದ್ರ ಸಚಿವರು ಲಖೀಂಪುರನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ರೈತರು ಕಪ್ಪು ಧ್ವಜ ಪ್ರದರ್ಶಿಸಿ ದಿಕ್ಕಾರ ಕೂಗಿದ್ದರು. ಈ ವೇಳೆ ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾ ಇದ್ದ ಎನ್ನಲಾದ ಜೀಪ್ ರೈತರ ಮೇಲೆ ಚಲಾಯಿಸಲಾಗಿತ್ತು. ಬಳಿಕ ಘಟನೆ ಹಿಂಸಾಚಾರವಾಗಿ ಬದಲಾಗಿತ್ತು. ಉತ್ತರ ಪ್ರದೇಶ ಸರ್ಕಾರ ಮೃತ ರೈತ ಕುಟುಂಬಗಳಿಗೆ 45 ಲಕ್ಷ ರೂ. ಪರಿಹಾರ ಮತ್ತು ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡೋದಾಗಿ ತಿಳಿಸಿತು

  ಇದನ್ನು ಓದಿ: ದೆಹಲಿಯಲ್ಲಿ ಹೊಸ 4 Omicron​​ ಪ್ರಕರಣ ದಾಖಲು; ಹೆಚ್ಚುತ್ತಿದೆ ಕೋವಿಡ್​ ಸಂಖ್ಯೆ

  ಬಿಜೆಪಿಗೆ ಸಂಕಷ್ಟ ತರಲಿದ್ಯಾ ಘಟನೆ

  ಈ ಘಟನೆ ರೈತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸಚಿವರ ರಾಜೀನಾಮೆಗೆ ರೈತ ಸಂಘಟನೆಗಳು ಒತ್ತಾಯಿಸಿದ್ದವು. 2022 ರ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಈ ವರದಿ ಪರಿಣಾಮ ಬೀರಬಹುದು ಎನ್ನಲಾಗಿದೆ

  ಇದನ್ನು ಓದಿ: ಮಣ್ಣಿನ ಮಗ-ಮಾಜಿ ಪ್ರಧಾನಿ ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ

  ಘಟನೆ ಕುರಿತು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತನ ಕಳೆದ ತಿಂಗಳು ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು. ಜೊತೆಗೆ ತಂಡಕ್ಕೆ ಮೂವರು ಐಪಿಎಸ್ ಅಧಿಕಾರಿಗಳನ್ನು ಸೇರಿಸಿತು. ತಂಡಕ್ಕೆ ಸೇರಿದ ಅಧಿಕಾರರಿಗಳು ಉತ್ತರ ಪ್ರದೇಶದವರಲ್ಲದಿದ್ದರೂ, ಅವರನ್ನು ಯುಪಿ ಕೇಡರ್‌ಗೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ತನಿಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತಾರಾ ಎಂಬ ಆತಂಕದಿಂದ ಇದನ್ನು ಮಾಡಲಾಗಿದೆ.
  Published by:Seema R
  First published: