• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sir W Arthur Lewis: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಸರ್ ಡಬ್ಲು ಅರ್ಥೂರ್ ಲೆವಿಸ್​ಗೆ ಗೂಗಲ್ ಡೂಡಲ್ ಗೌರವ

Sir W Arthur Lewis: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಸರ್ ಡಬ್ಲು ಅರ್ಥೂರ್ ಲೆವಿಸ್​ಗೆ ಗೂಗಲ್ ಡೂಡಲ್ ಗೌರವ

ಪ್ರೊಫೆಸರ್ ಸರ್ ಡಬ್ಲು ಆರ್ಥರ್ ಲೆವಿಸ್

ಪ್ರೊಫೆಸರ್ ಸರ್ ಡಬ್ಲು ಆರ್ಥರ್ ಲೆವಿಸ್

Google Doodles: ಆಫ್ರಿಕಾ, ಏಷ್ಯಾ, ಕೆರಿಬಿಯನ್ ಸರ್ಕಾರಗಳಿಗೆ ಆರ್ಥಿಕ ಸಲಹೆಗಾರರೂ ಆಗಿದ್ದ ಸರ್ ಡಬ್ಲು ಆರ್ಥರ್ ಲೆವಿಸ್ ಅವರಿಗೆ 1979ರಲ್ಲಿ ಇದೇ ದಿನ ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿತ್ತು.

  • Share this:

Sir W Arthur Lewis | Google Doodle: ಆಧುನಿಕ ಅರ್ಥಶಾಸ್ತ್ರದ ಅಭಿವೃದ್ಧಿಯ ಪಿತಾಮಹರಲ್ಲಿ ಒಬ್ಬರಾದ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಸರ್ ಡಬ್ಲು ಆರ್ಥರ್ ಲೆವಿಸ್ ಅವರ ಗೌರವಾರ್ಥವಾಗಿ ಗೂಗಲ್ ಇಂದು ಡೂಡಲ್ ಗೌರವವನ್ನು ಸಲ್ಲಿಸಿದೆ. ಮ್ಯಾಂಚೆಸ್ಟರ್ ಮೂಲದ ಕಲಾವಿದ ಕ್ಯಾಮಿಲ್ಲ ರು. ಅವರು ರಚಿಸಿರುವ ಇಲ್ಲಸ್ಟ್ರೇಷನ್ ಮೂಲಕ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. ಆಧುನಿಕ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳಿಂದ ದೇಶಗಳ ಅಭಿವೃದ್ಧಿಯಲ್ಲಿ ಉಂಟಾದ ಪರಿಣಾಮಗಳನ್ನು ಪರಿಗಣಿಸಿ 1979ರಲ್ಲಿ ಇದೇ ದಿನ ಸರ್ ಡಬ್ಲು ಆರ್ಥರ್ ಲೆವಿಸ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿತ್ತು. ಆ ನೆನಪಿಗಾಗಿ ಇಂದು ಗೂಗಲ್ ಡೂಡಲ್ ಮೂಲಕ ಅವರ ಕೊಡುಗೆಯನ್ನು ಸ್ಮರಿಸಿಕೊಂಡಿದೆ.


ಆಧುನಿಕ ಆರ್ಥಿಕಾಭಿವೃದ್ಧಿಯ ಪಿತಾಮಹರಲ್ಲಿ ಒಬ್ಬರಾದ ಸರ್ ಲೆವಿಸ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನ ಮೊದಲ ಕಪ್ಪು ಜನಾಂಗೀಯ ಪ್ರಾಧ್ಯಾಪಕರಾಗಿದ್ದವರು. ಹಾಗೇ ಬ್ರಿಟಿಷ್ ಯುನಿವರ್ಸಿಟಿಯ ಉತ್ತುಂಗ ಸ್ಥಾನವನ್ನೇರಿದ ಮೊದಲ ಕಪ್ಪು ಜನಾಂಗೀಯ ವ್ಯಕ್ತಿಯೂ ಹೌದು. ಈ ಮೂಲಕ ಕಪ್ಪು ಜನಾಂಗೀಯರಿಗೆ ಸಿಗಬೇಕಾದ ಗೌರವ, ಸೌಲಭ್ಯಗಳನ್ನು ತಮ್ಮ ಜ್ಞಾನದ ಮೂಲಕ ಗಿಟ್ಟಿಸಿಕೊಂಡ ಸರ್ ಲೆವಿಸ್ ವರ್ಣಭೇದ ನೀತಿಯ ವಿರುದ್ಧ ತಮ್ಮದೇ ರೀತಿಯಲ್ಲಿ ಹೋರಾಡಿ, ಮಾನ್ಯತೆ ಪಡೆದರು.


ಇದನ್ನೂ ಓದಿ: New Parliament Building: 971 ಕೋಟಿ ರೂ. ವೆಚ್ಚದ ನೂತನ ಸಂಸತ್ ಭವನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ


1915ರಲ್ಲಿ ಸೇಂಟ್ ಲೂಸಿಯಾದ ಕೆರಿಬಿಯನ್ ದ್ವೀಪದಲ್ಲಿ ಜನಿಸಿದ ಸರ್ ಲೆವಿಸ್ ಅವರ ಅಪ್ಪ-ಅಮ್ಮ ಇಬ್ಬರೂ ಶಾಲಾ ಶಿಕ್ಷಕರಾಗಿದ್ದವರು. ಆಂಟಿಗಾದಿಂದ ವಲಸೆ ಬಂದಿದ್ದ ಅವರು ಕೆರಿಬಿಯನ್ ದ್ವೀಪದಲ್ಲಿ ಸೆಟಲ್ ಆಗಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ತಮ್ಮ 14ಏ ವಯಸ್ಸಿಗೆ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿದ ಸರ್ ಲೆವಿಸ್ ಅಲ್ಲಿನ ಸರ್ಕಾರಿ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದರೂ ಅವರಲ್ಲಿ ಓದುವ ಆಸೆ ಇನ್ನೂ ಸತ್ತಿರಲಿಲ್ಲ. ಹೀಗಾಗಿ, 1932ರಲ್ಲಿ ಸರ್ಕಾರಿ ಸ್ಕಾಲರ್​ಶಿಪ್ ಪಡೆದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ತೆರಳಿ ವಿದ್ಯಾಭ್ಯಾಸ ಮುಂದುವರೆಸಿದರು.


ಕಪ್ಪು ಜನಾಂಗದವರಾದ ಸರ್ ಲೆವಿಸ್ ಲಂಡನ್​ನಲ್ಲಿ ವರ್ಣ ತಾರತಮ್ಯವನ್ನು ಎದುರಿಸಿದರು. ತಮ್ಮ 33ನೇ ವಯಸ್ಸಿಗೆ ಅವರು ಪೂರ್ಣ ಪ್ರಮಾಣದ ಪ್ರೊಫೆಸರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಆಫ್ರಿಕಾ, ಏಷ್ಯಾ, ಕೆರಿಬಿಯನ್ ಸರ್ಕಾರಗಳಿಗೆ ಆರ್ಥಿಕ ಸಲಹೆಗಾರರೂ ಆಗಿದ್ದ ಸರ್ ಲೆವಿಸ್ ಕೆರಿಬಿಯನ್ ಡೆವಲಪ್​ಮೆಂಟ್ ಬ್ಯಾಂಕ್​ನ ಮೊದಲ ಅಧ್ಯಕ್ಷರೂ ಆಗಿದ್ದರು.

top videos
    First published: