Single Vote BJP| ತ.ನಾಡು ಸ್ಥಳೀಯ ಚುನಾವಣೆ ಕೇವಲ ಒಂದು ಮತಕ್ಕೆ ತೃಪ್ತಿಪಟ್ಟ ಬಿಜೆಪಿ ಅಭ್ಯರ್ಥಿ; ಜಾಲತಾಣಗಳಲ್ಲಿ ಭಾರೀ ಟ್ರೋಲ್!

ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ಕುಟುಂಬದಲ್ಲಿಯೇ 5 ಜನ ಮತದಾರರಿದ್ದರು ಸಹ ಅವರು ಕೇವಲ ಒಂದೇ ಒಂದು ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. 

ಒಂದು ಮತ ಪಡೆದ ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್.

ಒಂದು ಮತ ಪಡೆದ ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್.

 • Share this:
  ಚೆನ್ನೈ; ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ (BJP) ಪಕ್ಷ ಗಟ್ಟಿ ನೆಲೆ ಹೊಂದಿದೆ. ಧರ್ಮವನ್ನು ಮುಂದಿಟ್ಟು ತನ್ನ ಪಕ್ಷಕ್ಕೆ ಬಹುಸಂಖ್ಯಾತ ಮತಗಳ ಧ್ರುವೀಕರಣ ಮಾಡಿದೆ ಮತ್ತು ಅದರ ಫಲವನ್ನು ಇಂದು ಅನುಭವಿಸುತ್ತಿದೆ ಎಂಬುದು ಎಷ್ಟು ಸತ್ಯವೋ? ದ್ರಾವಿಡ ನಾಡು ತಮಿಳುನಾಡಿನಲ್ಲಿ (Tamilnadu) ಏನೇ ಕಸರತ್ತು ನಡೆಸಿದರೂ ಅಲ್ಲಿನ ಮತದಾರರನ್ನು ಮರಳು ಮಾಡಲು ಸಾಧ್ಯವಾಗಲಿಲ್ಲ ಎಂಬುದು ಅಷ್ಟೇ ಸತ್ಯ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆಯೊಂದು ಲಭ್ಯವಾಗಿದೆ. ತಮಿಳುನಾಡಿನಲ್ಲಿ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತ ಪಡೆದು ನಗೆಪಾಟೀಲುಗೀಡಾದ ಘಟನೆ ನಡೆದಿದೆ. ತಮಿಳುನಾಡು ಚುನಾವಣಾ ರಾಜಕಾರಣದಲ್ಲೇ (Tamilnadu Local Election) ಕೇವಲ ಒಂದು ಮತ ಪಡೆದ ಅಭ್ಯರ್ಥಿ ಎಂಬ ಕುಖ್ಯಾತಿಗೆ ಇದೀಗ ಬಿಜೆಪಿ ಅಭ್ಯರ್ಥಿ ಒಳಗಾಗಿದ್ದಾರೆ.

  ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ಕುಟುಂಬದಲ್ಲಿಯೇ 5 ಜನ ಮತದಾರರಿದ್ದರು ಸಹ ಅವರು ಕೇವಲ ಒಂದೇ ಒಂದು ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಅದು ಅವರದೇ ಮತ ಎಂದು ಹಲವರು ವ್ಯಂಗ್ಯವಾಡಿದ್ದು ಟ್ವಿಟರ್‌ನಲ್ಲಿ ‘ಸಿಂಗಲ್ ವೋಟ್ ಬಿಜೆಪಿ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಮೂಲಕ ತಮಿಳುನಾಡಿನ ಜನ ತಮ್ಮ ಮನೆಯವನೇ ಅಭ್ಯರ್ಥಿಯಾದರೂ ಬಿಜೆಪಿಗೆ ಮತ ಹಾಕಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

  ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವೀಟ್ ಮಾಡಿ, "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಸಿಕ್ಕಿದೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ಕು ಮತದಾರರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದಿದ್ದಾರೆ.  ಶಿವ ಪ್ರಸಾತ್ ಟಿ ಆರ್ ಎಂಬುವವರು ಟ್ವೀಟ್ ಮಾಡಿ, "ಒಂದು ದೇಶ, ಒಂದು ಚುನಾವಣೆ, ಒಂದು ಧರ್ಮ, ಒಂದು ವೋಟು, ತಮಿಳುನಾಡಿನಲ್ಲಿ ಬಿಜೆಪಿ ನಂಬರ್ 1 ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ವಿಶೇಷ ಸೂಚನೆ ಒಂದು ಮತ ಪಡೆದ ಅಭ್ಯರ್ಥಿ ಕೊಯಮತ್ತೂರು ಜಿಲ್ಲಾ ಬಿಜೆಪಿ ಯುವ ವಿಭಾಗದ ಉಪ ಕಾರ್ಯದರ್ಶಿಯೂ ಹೌದು" ಎಂದಿದ್ದಾರೆ.  ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯ ಕುಟುಂಬ ಸದಸ್ಯರೂ ಸಹ ಬಿಜೆಪಿಗೆ ಮತ ನೀಡದೆ "ಬಿಜೆಪಿಗೆ ನಮಸ್ಕಾರ" ಎಂದು ಹೇಳಿದ್ದಾರೆ ಎಂದು ನೀರಜ್ ಭಾಟಿಯ ಟ್ವೀಟ್ ಮಾಡಿದ್ದಾರೆ.  ಬಿಜೆಪಿಗೆ ಮತ ನೀಡುವುದು ವ್ಯರ್ಥ ಎಂದು ಬಿಜೆಪಿಯ ಅಭ್ಯರ್ಥಿಯ ಕುಟುಂಬಸ್ಥರಿಗೂ ತಿಳಿದಿದೆ. ಅದಕ್ಕೆ ಬಿಜೆಪಿ ಅಭ್ಯರ್ಥಿಯ ಮನೆಯಲ್ಲಿ 5 ಮತದಾರರಿದ್ದರೂ ಕೇವಲ ಒಂದು ಮತ ಬಿದ್ದಿದೆ ಎಂದು ಸಿದ್ದಿಕ್ ವ್ಯಂಗ್ಯವಾಡಿದ್ದಾರೆ. ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಕ್ಟೋಬರ್ 6 ಮತ್ತು 9 ರಂದು ನಡೆಯಿತು. ಒಟ್ಟಾರೆಯಾಗಿ, 79,433 ಅಭ್ಯರ್ಥಿಗಳು 27,003 ಹುದ್ದೆಗಳಿಗೆ ಸ್ಪರ್ಧಿಸಿದ್ದರು.
  Published by:MAshok Kumar
  First published: