ಮುಂಬೈ: ನಿನ್ನೆ ರಾತ್ರಿ (ಸೋಮವಾರ) ಮುಂಬೈನ ಚೆಂಬೂರ್‌ನಲ್ಲಿ (Chembur) ನಡೆದ ಸಂಗೀತ ಕಾರ್ಯಕ್ರಮದ (Musical Event) ವೇಳೆ ಪ್ರಖ್ಯಾತ ಗಾಯಕ ಸೋನು ನಿಗಮ್ (Sonu Nigam) ಮತ್ತು ಅವರ ತಂಡದ ಸದಸ್ಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ವಿಡಿಯೋ ಒಂದು ವೈರಲ್ ಆಗಿದ್ದು, ಸೋನು ನಿಗಮ್ ಅವರು ಸಂಗೀತ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಇಳಿಯುವಾಗ ವ್ಯಕ್ತಿಯೊಬ್ಬ ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶಿವಸೇನಾ (ಯುಬಿಟಿ) ಪಕ್ಷದ ನಾಯಕ ಪ್ರಕಾಶ್ ಫಾಟರ್‌ಪೇಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋನು ನಿಗಮ್ ಚೆಂಬೂರ್‌ಗೆ ಬಂದಿದ್ದರು. ಅವರು ಕಾರ್ಯಕ್ರಮ ಮುಗಿಸಿ ಕೆಳಗೆ ಇಳಿಯುತ್ತಿದ್ದಂತೆ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಪ್ರಕಾಶ್ ಫಾಟರ್‌ಪೇಕರ್, ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಆ ಸಮಯದಲ್ಲಿ ಅಂಗರಕ್ಷಕರು ಆ ಜನರನ್ನು ತಳ್ಳಲು ಪ್ರಯತ್ನಿಸಿದರು, ಆದರೆ ಆಗ ಒಬ್ಬ ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಳ್ಳಲು ಮುಂದಾದಾಗ ಸೋನು ನಿಗಮ್ ಅವರು ತಾಗಿದರು. ಆದರೆ ಸೋನು ನಿಗಮ್‌ಗೆ ಏನೂ ಆಗಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Sonu Sood: ರೈಲಿನ ವಿಡಿಯೋ ಪೋಸ್ಟ್ ಮಾಡಿದ ಸೋನು ಸೂದ್ ಮೇಲೆ ನೆಟ್ಟಿಗರ ಕೋಪ, ಮುಂಬೈ ಪೊಲೀಸ್ ವಾರ್ನಿಂಗ್
ಶಾಸಕರ ಪುತ್ರನ ಅನುಚಿತ ವರ್ತನೆ?
ಈ ಮಧ್ಯೆ ಸೋನು ನಿಗಮ್ ಅವರ ತಂಡದ ಮ್ಯಾನೇಜರ್ ಸಾಯಿರಾ ಅವರ ಜೊತೆ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಪುತ್ರ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದ್ದು, ಈ ವೇಳೆ ಆತನನ್ನು ವೇದಿಕೆಯಿಂದ ಹೊರಗೆ ಹೋಗುವಂತೆ ಸೋನು ನಿಗಮ್ ಸೂಚಿಸಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಶಾಸಕರು ಹೇಳಿದ್ದೇನು?
‘ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಸೋನು ನಿಗಮ್ ಅವರ ಅಂಗರಕ್ಷಕ ಹರಿಯನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದರು. ಈ ವೇಳೆ ಸೋನು ನಿಗಮ್ ಅವರ ಗುರುಗಳ ಪುತ್ರ ರಬ್ಬಾನಿ ಖಾನ್ ಕೂಡ ಇದ್ದರು. ಆಗ ತಳ್ಳಿದ ರಭಸಕ್ಕೆ ರಬ್ಬಾನಿ ಖಾನ್ ವೇದಿಕೆಯ ಮೆಟ್ಟಿಲಿನಿಂದ 7 ಅಡಿ ಕೆಳಗಡೆ ಇರುವ ಗ್ರೌಂಡ್‌ಗೆ ಬಿದ್ದಿದ್ದಾರೆ. ಗಲಾಟೆಯಲ್ಲಿ ರಬ್ಬಾನಿ ಖಾನ್ ಅವರಿಗೆ ಹಲವು ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚೆಂಬೂರಿನ ಝೆನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಪೂರ್ಣ ಘಟನೆಯಿಂದ ಸೋನು ನಿಗಮ್ ಆಘಾತಕ್ಕೆ ಒಳಗಾಗಿದ್ದಾರೆ. ರಬ್ಬಾನಿ ಚಿಕಿತ್ಸೆ ನಡೆಯುತ್ತಿದೆ’ ಎಂದು ಶಾಸಕರು ಹೇಳಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗಾಯಕ ಸೋನು ನಿಗಮ್, ‘ಕಾರ್ಯಕ್ರಮ ಮುಗಿದ ಮೇಲೆ ನಾನು ವೇದಿಕೆಯಿಂದ ಇಳಿಯುತ್ತಿದ್ದೆ. ಸ್ವಪ್ನಿಲ್ ಪ್ರಕಾಶ್ ಪಟೆರ್ಪಕರ್ ಅವರು ನನ್ನನ್ನು ತಳ್ಳಿದರು. ಆ ವೇಳೆ ಹರಿ, ರಬ್ಬನಿ ಅವರು ನನ್ನನ್ನು ತಳ್ಳಿದರು. ಆಮೇಲೆ ನಾನು ಮೆಟ್ಟಿಲಿನಿಂದ ಕೆಳಗಡೆ ಬಿದ್ದೆ. ಆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದೇನೆ. ಆಕ್ರಮಣ ಮಾಡುವ ರೀತಿಯಲ್ಲಿ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಪಡಬೇಕಿದ್ರೆ ಅವರು ಯೋಚನೆ ಮಾಡಬೇಕು’ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ