ಮಾಡೆಲ್​ಗೆ ಅಶ್ಲೀಲ ಫೋಟೋ ಕಳಿಸಿದ್ದ ಬಾಲಿವುಡ್ ಗಾಯಕ ಮಿಕಾ ಸಿಂಗ್​ ಬಂಧನ

ಮಿಕಾ ಸಿಂಗ್ ತನಗೆ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬ್ರೆಜಿಲ್​ ದೇಶದ ಮಾಡೆಲ್​ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ದುಬೈನಲ್ಲಿ ಮಿಕಾ ಸಿಂಗ್‍ರನ್ನು ಬಂಧಿಸಿದ್ದಾರೆ.

sushma chakre | news18
Updated:December 7, 2018, 10:49 AM IST
ಮಾಡೆಲ್​ಗೆ ಅಶ್ಲೀಲ ಫೋಟೋ ಕಳಿಸಿದ್ದ ಬಾಲಿವುಡ್ ಗಾಯಕ ಮಿಕಾ ಸಿಂಗ್​ ಬಂಧನ
ಮಿಕಾ ಸಿಂಗ್
sushma chakre | news18
Updated: December 7, 2018, 10:49 AM IST
ನವದೆಹಲಿ (ಡಿ. 7): ಬ್ರೆಜಿಲ್​ನ 17 ವರ್ಷದ ರೂಪದರ್ಶಿಗೆ ಅಶ್ಲೀಲವಾದ ಮೆಸೇಜ್​ ಮತ್ತು ಫೋಟೋ ಕಳುಹಿಸಿದ್ದ ಬಾಲಿವುಡ್​ ಗಾಯಕ ಮಿಕಾ ಸಿಂಗ್​ ಅವರನ್ನು ದುಬೈ ಪೊಲೀಸರು ಬಂಧಿಸಿದ್ದಾರೆ.

ಮಿಕಾ ಸಿಂಗ್ ತನಗೆ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬ್ರೆಜಿಲ್​ ದೇಶದ ಮಾಡೆಲ್​ ಮುರಾಕ್ಕಾಬಾತ್​ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಬೆಳಗ್ಗೆ 3 ಗಂಟೆಗೆ ದುಬೈನಲ್ಲಿ ಗಾಯಕ ಮಿಕಾ ಸಿಂಗ್‍ರನ್ನು ಬಂಧಿಸಿದ್ದಾರೆ.

ದುಬೈನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡಲು ಹೋಗಿದ್ದ ಮಿಕಾ ಸಿಂಗ್​ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.


Loading...

ಮಿಕಾ ಸಿಂಗ್​ ಅವರ ಮೇಲೆ ಈ ರೀತಿಯ ಆರೋಪ ಇದೇ ಮೊದಲೇನಲ್ಲ. 10 ವರ್ಷದ ಹಿಂದೆ ಮಿಕಾ ಸಿಂಗ್​ ಅವರ ಹುಟ್ಟುಹಬ್ಬ ಸಮಾರಂಭಕ್ಕೆ ಹೋಗಿದ್ದ ನಟಿ ರಾಖಿ ಸಾವಂತ್​ ಅವರನ್ನು ಬಲವಂತವಾಗಿ ಎಳೆದು ಚುಂಬಿಸಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ರಾಖಿ ಸಾವಂತ್​ ಕೂಡ ಮಿಕಾ ಸಿಂಗ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆ ವಿಷಯ ಸಾಕಷ್ಟು ಚರ್ಚೆಗೊಳಗಾಗಿತ್ತು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್‌ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!

ಬ್ರೆಜಿಲ್​ ಮಾಡೆಲ್​ಗೆ ಬಾಲಿವುಡ್​ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿದ್ದ ಮಿಕಾ ಸಿಂಗ್​ ಆಕೆಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ಹಿಂದಿ ಆಲ್ಬಂ, ಬಾಲಿವುಡ್​ ಸಿನಿಮಾಗಳ ಮೂಲಕ ಪ್ರಸಿದ್ಧಿ ಪಡೆದಿರುವ ಮಿಕಾ ಸಿಂಗ್​, ಇತ್ತೀಚೆಗೆ ತೆರೆಕಂಡ ಸೀಕ್ರೆಟ್​ ಸೂಪರ್​ ಸ್ಟಾರ್, ಸ್ತ್ರೀ, ರೇಸ್​ 3, ವೀರೇ ಕಿ ವೆಡ್ಡಿಂಗ್, ಪ್ಯಾಡ್​ಮನ್​ ಮುಂತಾದ ಸಿನಿಮಾಗಳಲ್ಲೂ ಹಾಡಿದ್ದಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ