ಬೀಜಿಂಗ್: ಚೀನಾದ ಗಾಯಕಿ ಹಾಗೂ ಸಂಗೀತ ರಚನೆಕಾರರಾದ ಜೇನ್ ಜಾಂಗ್ (Chinese Singer Jane Zhang) ಅವರು ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ (Corona Virus) ಸೋಂಕಿಗೆ ತಾವು ಒಳಗಾಗಿದ್ದು ಇದೀಗ ಚೇತರಿಸಿಕೊಂಡಿರುವುದಾಗಿ ಬಹಿರಂಗಪಡಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ (Social Media) ಟೀಕೆಗಳಿಗೆ ಗುರಿಯಾಗಿದ್ದಾರೆ. ಒಮಿಕ್ರಾನ್ ಉಪ ರೂಪಾಂತರ BF.7 BF.7 (Omicron variant) ಚೀನಾದಲ್ಲಿ ಕೊರೋನಾ ವೈರಸ್ ಪ್ರಕರಣಗಳನ್ನು (Corona Cases in China) ಉಲ್ಭಣಗೊಳಿಸುತ್ತಿದ್ದು ಆಘಾತಕಾರಿ ಸ್ಥಿತಿಯನ್ನು ಚೀನಾ (China) ಎದುರಿಸುತ್ತಿದ್ದು ಈ ಸಮಯದಲ್ಲಿ ಗಾಯಕಿಯ ಬಹಿರಂಗಪಡಿಸುವಿಕೆಯು ಭಾರೀ ಟೀಕೆಗೆ ಒಳಗಾಗಿದೆ.
ಕೋವಿಡ್ಗೆ ತುತ್ತಾಗಿದ್ದ ಸ್ನೇಹಿತರನ್ನು ಭೇಟಿಯಾಗಿದ್ದ ಜೇನ್
ಕೋವಿಡ್ ಇದ್ದ ಸ್ನೇಹಿತರನ್ನು ಭೇಟಿಯಾಗುವ ಮೂಲಕ ಉದ್ದೇಶಪೂರ್ವಕವಾಗಿ ತಾನು ಸೋಂಕಿಗೆ ತುತ್ತಾಗಿರುವುದಾಗಿ ಗಾಯಕಿ ಜೇನ್ ಜಾಂಗ್ ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಒಪ್ಪಿಕೊಂಡಿದ್ದಾರೆ.
ಸೌಥ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಗಾಯಕಿ ಕೋವಿಡ್ ಧನಾತ್ಮಕ ಪರೀಕ್ಷೆಯನ್ನು (ಕೋವಿಡ್ ಪಾಸಿಟಿವ್) ದೃಢೀಕರಿಸಿದ್ದ ಹೋಮ್ಸ್ ಆಫ್ ಶೀಪ್ (ಚೀನಾದಲ್ಲಿ ವೈರಸ್ ವಾಹಕಗಳು ಎಂದು ಕರೆಯಲಾಗುತ್ತದೆ) ಗೆ ಭೇಟಿ ನೀಡಿರುವುದಾಗಿ ಗಾಯಕಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಸಂಗೀತ ಕಾರ್ಯಕ್ರಮಕ್ಕೆ ತೊಂದರೆಯಾಗದಿರಲು ಈ ನಿರ್ಧಾರ
ಮುಂಬರಲಿರುವ ಹೊಸ ವರ್ಷದ ಸಂಜೆಯ ಈವೆಂಟ್ ಸಿದ್ಧತೆಗಾಗಿ ಗಾಯಕಿ ಜೇನ್ ಜಾಂಗ್ ಮೊದಲೇ ವೈರಸ್ಗೆ ತುತ್ತಾಗಲು ಬಯಸಿದ್ದರು. ಇದರಿಂದ ಈವೆಂಟ್ನ ದಿನ ಸೋಂಕುರಹಿತರಾಗಿ ಕಾರ್ಯಕ್ರಮವನ್ನು ನೀಡಬಹುದು ಎಂಬ ಯೋಜನೆಯಲ್ಲಿದ್ದರು ಎಂದು ತಿಳಿಸಿದ್ದಾರೆ. ಜೇನ್ ಡಿಸೆಂಬರ್ನ ಕೊನೆಯಲ್ಲಿ ತಮ್ಮ ಸಂಗೀತ ಕಾನ್ಸರ್ಟ್ನಲ್ಲಿ ಪಾಲ್ಗೊಳ್ಳುವವರಿದ್ದರು.
ಸಂಗೀತ ಕಾರ್ಯಕ್ರಮದ ಸಮಯದಲ್ಲಿ ನಾನು ವೈರಸ್ ದಾಳಿಗೆ ತುತ್ತಾಗಬಾರದು ಎಂಬ ಕಾರಣಕ್ಕಾಗಿ ಈಗಾಗಲೇ ವೈರಸ್ ಪಾಸಿಟಿವ್ ಆಗಿರುವ ಜನರ ಗುಂಪನ್ನು ಭೇಟಿಯಾಗಿರುವುದಾಗಿ ಜೇನ್ ತಿಳಿಸಿದ್ದು, ಇದರಿಂದ ಸಂಗೀತ ಕಾರ್ಯಕ್ರಮದ ಸಮಯದಲ್ಲಿ ನಾನು ಚೇತರಿಸಿಕೊಳ್ಳಬಹುದು ಎಂಬ ಯೋಜನೆಯಿಂದ ಈ ರೀತಿ ಮಾಡಿಕೊಂಡಿರುವುದಾಗಿ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಒಂದು ದಿನ ಮಾತ್ರವಿದ್ದ ರೋಗಲಕ್ಷಣಗಳು
ಗಂಟಲು ನೋವು, ಮೈಕೈ ನೋವು ಹೀಗೆ ರೋಗದ ಲಕ್ಷಣಗಳು ಕಂಡುಬಂದ ನಂತರವೇ ತಾನು ನಿದ್ರಿಸಿರುವುದಾಗಿ 38 ರ ಹರೆಯದ ಗಾಯಕಿ ಜೇನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಆಕೆಯಲ್ಲಿರುವ ರೋಗಲಕ್ಷಣಗಳು ಕೋವಿಡ್ ರೋಗಿಯ ಅದೇ ರೋಗಲಕ್ಷಣಗಳಿಗೆ ಸಮಾನವಾಗಿದ್ದು ಒಂದು ದಿನ ಮಾತ್ರವೇ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಬಹಿರಂಗವಾಗಿ ಗಾಯಕಿ ತಿಳಿಸಿದ್ದಾರೆ.
Singer #JaneZhang says that she's worried she'll be sick for New Years concerts, so she decided to visit some covid+ people to get sick and get over it
Now she's getting bashed because she said she recovered in 1 day, lost weight and now has good skin😂 pic.twitter.com/wyki8v2wrZ
— 🍉 田里的猹 (@melonconsumer) December 17, 2022
Singer #JaneZhang says that she's worried she'll be sick for New Years concerts, so she decided to visit some covid+ people to get sick and get over it
Now she's getting bashed because she said she recovered in 1 day, lost weight and now has good skin😂 pic.twitter.com/wyki8v2wrZ
— 🍉 田里的猹 (@melonconsumer) December 17, 2022
ಗಾಯಕಿಯ ಪೋಸ್ಟ್ಗೆ ಕಟು ಟೀಕೆ
ಜೇನ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ವೈರಲ್ ಆಯಿತು ಮಾತ್ರವಲ್ಲದೆ ಆಕೆಯ ಬೇಜವಾಬ್ದಾರಿಯುತವಾದ ವರ್ತನೆಯನ್ನು ಬಳಕೆದಾರರು ತೀವ್ರವಾಗಿ ಖಂಡಿಸಿದ್ದಾರೆ.
ಚೀನಾದಲ್ಲಿ ಕೋವಿಡ್-19 ಉಲ್ಭಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಜೇನ್ ಜನರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ ಹಾಗೂ ಗೌರವಯುತ ವ್ಯಕ್ತಿಯಾಗಿ ಸಂವೇದನಾರಹಿತರಾಗಿದ್ದಾರೆ ಎಂದು ಬಳಕೆದಾರರು ಛೀಮಾರಿ ಹಾಕಿದ್ದಾರೆ.
ಸಾರ್ವಜನಿಕರಲ್ಲಿ ಬಹಿರಂಗ ಕ್ಷಮೆಯಾಚನೆ
ಜೇನ್ ತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ನಂತರದಿಂದ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದು, ವಿವಾದಾತ್ಮಕ ಪೋಸ್ಟ್ ಅನ್ನು ಅಳಿಸಿದ್ದಾರೆ ಹಾಗೂ ತಮ್ಮ ವರ್ತನೆಗೆ ಬಳಕೆದಾರರಲ್ಲಿ ಕ್ಷಮೆಯಾಚಿಸಿದ್ದಾರೆ.
ಪೋಸ್ಟ್ ಮಾಡುವ ಧಾವಂತದಲ್ಲಿ ನಾನು ವಿಷಯಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿಲ್ಲ. ಸಾರ್ವಜನಿಕರಲ್ಲಿ ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಜೇನ್ ತಿಳಿಸಿದ್ದಾರೆ.
ಎಲ್ಲರೂ ಸುರಕ್ಷಿತರಾಗಿರಬೇಕೆಂದು ಹೀಗೆ ಮಾಡಿದೆ
ಕಾನ್ಸರ್ಟ್ ಸಮಯದಲ್ಲಿ ನಾನು ಸೋಂಕಿಗೆ ಒಳಗಾದರೆ ಅದು ನನ್ನ ಸಂಪರ್ಕಕ್ಕೆ ಬರುವ ಇತರರಿಗೂ ಹರಡುತ್ತದೆ ಹಾಗೂ ನನ್ನ ಸಹೋದ್ಯೋಗಿಗಳು ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ ಎಂದು ನಾನು ಚಿಂತಿತಳಾಗಿದ್ದೆ.
ಕೋವಿಡ್ ಅನಿರೀಕ್ಷಿತ ಸಂಭವವಾದ್ದರಿಂದ ಈಗಲೇ ವೈರಸ್ಗೆ ತುತ್ತಾಗಿ ಮನೆಯಲ್ಲಿದ್ದುಕೊಂಡೇ ಚೇತರಿಸಿಕೊಳ್ಳುವ ನಿರ್ಧಾರಕ್ಕೆ ಬಂದೆ ಮುಂದೆ ಇದರಿಂದ ನನ್ನ ಕೆಲಸಕ್ಕೆ ಯಾವುದೇ ತೊಂದರೆಯುಂಟಾಗುವುದಿಲ್ಲ ಎಂಬುದನ್ನು ಯೋಚಿಸಿ ಹೀಗೆ ಮಾಡಿದೆ ಇದರಿಂದ ನೀವೆಲ್ಲರೂ ಸುರಕ್ಷಿತರಾಗಿರಬಹುದು ಎಂದು ಭಾವಿಸಿದ್ದೆ ಎಂದು ಜೇನ್ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ