ಮಿತಿಮೀರಿದ ಹೆರಾಯಿನ್​ ಸೇವನೆಯಿಂದ ಆಸ್ಪತ್ರೆ ಸೇರಿದ ಗಾಯಕಿ!

news18
Updated:July 25, 2018, 4:26 PM IST
ಮಿತಿಮೀರಿದ ಹೆರಾಯಿನ್​ ಸೇವನೆಯಿಂದ ಆಸ್ಪತ್ರೆ ಸೇರಿದ ಗಾಯಕಿ!
news18
Updated: July 25, 2018, 4:26 PM IST
ನ್ಯೂಸ್​ 18 ಕನ್ನಡ 

ಲಾಸ್​ಎಂಜಲೀಸ್(ಜು.25): ​ ಅತಿಯಾದ ಹೆರಾಯಿನ್​ ಸೇವನೆಯಿಂದ ಗಾಯಕಿಯೊಬ್ಬರು ಆಸ್ಪತ್ರೆ ಸೇರಿರುವ ಘಟನೆ ಲಾಸ್​ಎಂಜಲೀಸ್​ನಲ್ಲಿ ನಡೆದಿದೆ.

25 ವರ್ಷದ ಡೆಮಿ ಲೊವಾಟೊ ಎಂಬ ಗಾಯಕಿ ಲಾಸ್​ ಎಂಜಲೀಸ್​ನಲ್ಲಿರುವ ತಮ್ಮ ಮನೆಯಲ್ಲೇ ಅತಿಯಾಗಿ ಹೆರಾಯಿನ್​ ಸೇವಿಸಿ ಅಸ್ವಸ್ಥರಾಗಿದ್ದರು. ವಿಷಯ ತಿಳಿದ ಕೂಡಲೇ ಅವರನ್ನು ಲಾಸ್​ ಎಂಜಲೀಸ್​ನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಸೆಲೆಬ್ರಿಟಿ ವೆಬ್​ಸೈಟ್​ ಟಿಎಂಜಿ ವರದಿ ಮಾಡಿದೆ.

ಈ ಹಿಂದೆ ಲೊವಾಟೊ ತನಗಿರುವ ಕೊಕೇನ್​ ಹಾಗೂ ಮದ್ಯ ಸೇವನೆ ಚಟದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಸೋಬರ್​ ಎಂಬ ಆಲ್ಬಂ ಹಾಡನ್ನು ಬಿಡುಗಡೆ ಮಾಡಿದ್ದ ಈ ಗಾಯಕಿ, ಆರು ವರ್ಷಗಳ ನಂತರ ಚಟದಿಂದ ಹೊರಬಂದು ಚೇತರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು.

ಮಂಗಳವಾರ ಹಾಲಿವುಡ್​ ಹಿಲ್​ ಸ್ಟ್ರೀಟ್​ನಲ್ಲಿನ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅಸ್ವಸ್ಥರಾಗಿರುವುದಾಗಿ ವಿಷಯ ತಿಳಿದು ಅವರನ್ನು ಆಸ್ಪತ್ರೆಗೆ ಸೆರಿಸಲಾಯಿತು ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಆಕೆಯ ಹೆಸರನ್ನು ಬಹಿರಂಗಪಡಿಸಿಲ್ಲ. ಸದ್ಯ ಗಾಯಕಿಯ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು  ಟಿಎಂಜಿ ವರದಿ ಮಾಡಿದೆ.

 
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ