• Home
 • »
 • News
 • »
 • national-international
 • »
 • Narendra Modi: 2014ರಿಂದಲೂ ಚಿಕಿತ್ಸೆಗಾಗಿ ಸರ್ಕಾರದ ಹಣ ಪಡೆಯದ ಪ್ರಧಾನಿ! ತಮ್ಮ ಆಸ್ಪತ್ರೆ ಬಿಲ್ ತಾವೇ ಪಾವತಿಸ್ತಾರೆ ಮೋದಿ!

Narendra Modi: 2014ರಿಂದಲೂ ಚಿಕಿತ್ಸೆಗಾಗಿ ಸರ್ಕಾರದ ಹಣ ಪಡೆಯದ ಪ್ರಧಾನಿ! ತಮ್ಮ ಆಸ್ಪತ್ರೆ ಬಿಲ್ ತಾವೇ ಪಾವತಿಸ್ತಾರೆ ಮೋದಿ!

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ ಅವರು 2014ರಿಂದ 2019ರವರೆಗೆ ಮೊದಲ ಬಾರಿ ಹಾಗೂ 2019ರಿಂದ ಪ್ರಸ್ತುತ 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ 2014ರಿಂದ ಈಗಿನವರೆಗೆ ನರೇಂದ್ರ ಮೋದಿ ಅವರು ಸರ್ಕಾರದಿಂದ ತಮ್ಮ ವೈದ್ಯಕೀಯ ವೆಚ್ಚವನ್ನು ಭರಿಸಿಕೊಂಡಿಲ್ಲವಂತೆ!

 • News18 Kannada
 • 3-MIN READ
 • Last Updated :
 • New Delhi, India
 • Share this:

ನವದೆಹಲಿ: ಮಾಜಿ ಪ್ರಧಾನಿ (Former Prime Minister) ಸೇರಿದಂತೆ ವಿವಿಧ ಸ್ಥಾನಗಳನ್ನು ಪಡೆದ ಮಾಜಿ ಜನಪ್ರತಿನಿಧಿಗಳಿಗೂ ನಿವೃತ್ತಿ (retirement) ನಂತರವೂ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ಇನ್ನು ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿಯಾದವರಿಗೆ (Prime Minister) ಸರ್ಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ. ಈ ಪೈಕಿ ವೈದ್ಯಕೀಯ ವೆಚ್ಚ (medical expenses) ಸೇರಿದಂತೆ ಹಲವು ರೀತಿಯ ಸೌಲಭ್ಯ ಇರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದಿಂದ ಇದುವರೆಗೂ ಕೇವಲ ಒಂದೇ ಒಂದು ರೂಪಾಯಿ ವೈದ್ಯಕೀಯ ವೆಚ್ಚ ಪಡೆದಿಲ್ಲವಂತೆ. 2014ರಿಂದ ಈವರೆಗೆ ನರೇಂದ್ರ ಮೋದಿ ಅವರು 2 ಬಾರಿ ಪ್ರಧಾನಿ ಗದ್ದುಗೆ ಏರಿದ್ದಾರೆ. ಆದರೆ 2014ರಿಂದಲೂ ತಮ್ಮ ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಪಡೆದಿಲ್ಲವಂತೆ. ಬದಲಾಗಿ ತಮ್ಮ ಸ್ವಂತ ಖರ್ಚಿನಿಂದಲೇ ತಮ್ಮ ಆಸ್ಪತ್ರೆ ಬಿಲ್ (Hospital Bill) ತೀರಿಸಿದ್ದಾರಂತೆ! ಹೀಗಂತ ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಕೇಳಿದ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯ (Prime Minister's Office) ಮಾಹಿತಿ ನೀಡಿದೆ.


ಸರ್ಕಾರದಿಂದ ಮೆಡಿಕಲ್ ವೆಚ್ಚ ಭರಿಸದ ಪ್ರಧಾನಿ


ನರೇಂದ್ರ ಮೋದಿ ಅವರು 2014ರಿಂದ 2019ರವರೆಗೆ ಮೊದಲ ಬಾರಿ ಹಾಗೂ 2019ರಿಂದ ಪ್ರಸ್ತುತ 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ 2014ರಿಂದ ಈಗಿನವರೆಗೆ ನರೇಂದ್ರ ಮೋದಿ ಅವರು ಸರ್ಕಾರದಿಂದ ತಮ್ಮ ವೈದ್ಯಕೀಯ ವೆಚ್ಚವನ್ನು ಭರಿಸಿಕೊಂಡಿಲ್ಲವಂತೆ. ಬದಲಾಗಿ ತಮ್ಮ ಸ್ವಂತ ಹಣದಲ್ಲಿ ತಮ್ಮ ವೈದ್ಯಕೀಯ ಬಿಲ್ ಪಾವತಿಸಿದ್ದಾರಂತೆ.


ಆರ್‌ಟಿಐ ಮೂಲಕ ಮಾಹಿತಿ ಬಹಿರಂಗ


ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಎಂಬುವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ವೈದ್ಯಕೀಯ ವೆಚ್ಚಗಳನ್ನು ಯಾರು ಭರಿಸುತ್ತಾರೆ ಅಂತ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದ್ದರು. ಈ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ನೀಡಿದ ಉತ್ತರದಲ್ಲಿ ಇದು ಬಹಿರಂಗವಾಗಿದೆ. 2014ರಿಂದ ನರೇಂದ್ರ  ಮೋದಿ ಪ್ರಧಾನಿಯಾಗಿದ್ದು, ಆಗಿನಿಂದ ಈಗಿನವರೆಗೆ ಅವರು ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸಿಲ್ಲ, ಬದಲಾಗಿ ಅವರ ಸ್ವಂತ ಹಣದಿಂದ ವೈದ್ಯಕೀಯ ವೆಚ್ಚ ಪಾವತಿಸಿದ್ದಾರೆ ಅಂತ ಮಾಹಿತಿ ನೀಡಲಾಗಿದೆ.


ಇದನ್ನೂ ಓದಿ: Brazil Riots: ಬ್ರೆಜಿಲ್​ನಲ್ಲಿ ತೀವ್ರ ಗಲಭೆ; ಪ್ರಧಾನಿ ಮೋದಿ ಕಳವಳ, ದಾಳಿಕೋರರ ವಿರುದ್ಧ ಖಂಡನೆ


ವಿದೇಶದಲ್ಲೂ ಆಸ್ಪತ್ರೆ ವೆಚ್ಚ ಭರಿಸದ ಪ್ರಧಾನಿ


ಆರ್‌ಟಿಐ ಮೂಲಕ ಕೇಳಿದ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯ (ಪಿಎಂಒ) ಈ ಮಾಹಿತಿ ನೀಡಿದೆ. ಆರ್‌ಟಿಐಗೆ ಪ್ರತಿಕ್ರಿಯಿಸಿದ ಪ್ರಧಾನಿ ಕಚೇರಿಯ ಕಾರ್ಯದರ್ಶಿ ಬಿನೋದ್ ಬಿಹಾರಿ ಸಿಂಗ್, ಸರ್ಕಾರದ ಬಜೆಟ್‌ನ ಒಂದು ರೂಪಾಯಿಯನ್ನೂ ಪ್ರಧಾನಿಯವರ ವೈಯಕ್ತಿಕ ವೈದ್ಯಕೀಯ ಚಿಕಿತ್ಸೆಗೆ ಪಾವತಿಸಲು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಖರ್ಚು ಮಾಡಲಾಗಿಲ್ಲ ಎಂದು ಆರ್‌ಟಿಐ ಪ್ರತಿಕ್ರಿಯೆ ತಿಳಿಸಿದೆ. 2014 ರಿಂದ ಇಲ್ಲಿಯವರೆಗೆ ಭಾರತ ಮತ್ತು ವಿದೇಶಗಳಲ್ಲಿ ಯಾವುದೇ ವೆಚ್ಚವನ್ನು ಮಾಡಲಾಗಿಲ್ಲ ಅಂತಾನೂ ಪ್ರಧಾನ ಮಂತ್ರಿಯವರ ಕಾರ್ಯಾಲಯ ತಿಳಿಸಿದೆ.


ಇದನ್ನೂ ಓದಿ: Narendra Modi: ಅಮ್ಮನ ಅಗಲಿಕೆ ನೋವಿನಲ್ಲೂ ಕರ್ತವ್ಯ ಮರೆಯದ ಮೋದಿ, ಹೀರಾಬೆನ್ ಅಂತ್ಯಸಂಸ್ಕಾರದ ಬಳಿಕ ಪ್ರಧಾನಿ ಬ್ಯಾಕ್ ಟು ವರ್ಕ್!


“ತೆರಿಗೆದಾರರ ಹಣ ಪ್ರಧಾನಿ ವೈಯಕ್ತಿಕ ಕೆಲಸಕ್ಕೆ ಬಳಸುವುದಿಲ್ಲ”


ಪಿಎಂ ಮೋದಿ ಫಿಟ್ ಇಂಡಿಯಾ ಆಂದೋಲನದ ಮೂಲಕ ದೇಶವಷ್ಟೇ ಅಲ್ಲ ಇಡೀ ವಿಶ್ವಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಅವರು ಸ್ವತಃ ಉದಾಹರಣೆ ನೀಡುವ ಮೂಲಕ 135 ಕೋಟಿ ಭಾರತೀಯರನ್ನು ಫಿಟ್ ಆಗಿರಲು ಪ್ರೇರೇಪಿಸುತ್ತಿದ್ದಾರೆ ಎಂದು ಕಾರ್ಯಕರ್ತ ಪ್ರಫುಲ್ ಸರ್ದಾ ಹೇಳಿದ್ದಾರೆ.  "ತೆರಿಗೆದಾರರ ಹಣವನ್ನು ಪ್ರಧಾನಿಯವರ ಯಾವುದೇ ವೈಯಕ್ತಿಕ ಕೆಲಸಗಳಿಗೆ ಬಳಸಲಾಗುತ್ತಿಲ್ಲ; ಇದು ಆಡಳಿತದಲ್ಲಿ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ. ಸಂಸದರು ಮತ್ತು ಶಾಸಕರು ಸಹ ತಮ್ಮ ವೈಯಕ್ತಿಕ ವೈದ್ಯಕೀಯ ವೆಚ್ಚವನ್ನು ಯಾವುದಾದರೂ ಇದ್ದರೆ ತಾವೇ ಭರಿಸುವ ಮೂಲಕ ಅದೇ ಮಾರ್ಗವನ್ನು ಅನುಸರಿಸಬೇಕು" ಎಂದು ಅವರು ಹೇಳಿದ್ದಾರೆ.

Published by:Annappa Achari
First published: