Jio-Silver Lake Deal: ಸಿಲ್ವರ್ ಲೇಕ್ ಹೂಡಿಕೆಯಿಂದ ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಮತ್ತಷ್ಟು ಬಲವರ್ಧನೆ: ಮೂಡೀಸ್

ರೈಟ್ಸ್ ಇಷ್ಯೂ ಜೊತೆಗೆ ಫೇಸ್​ಬುಕ್ ಮತ್ತೀಗ ಸಿಲ್ವರ್ ಲೇಕ್ ಹೂಡಿಕೆಗಳಿಂದ 13.6 ಬಿಲಿಯನ್ ಡಾಲರ್ ಹಣ ಬಂದಂತಾಗಿದೆ. 21.4 ಬಿಲಿಯನ್ ಡಾಲರ್​ನಷ್ಟಿದ್ದ ಆರ್​ಐಎಲ್​ನ ನಿವ್ವಳ ಸಾಲ ಈಗ ಮುಕ್ಕಾಲು ಪಾಲು ಇಳಿದಂತಾಗಿದೆ.

news18
Updated:May 4, 2020, 4:57 PM IST
Jio-Silver Lake Deal: ಸಿಲ್ವರ್ ಲೇಕ್ ಹೂಡಿಕೆಯಿಂದ ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಮತ್ತಷ್ಟು ಬಲವರ್ಧನೆ: ಮೂಡೀಸ್
ರಿಲಾಯನ್ಸ್ ಜಿಯೋ ಮತ್ತು ಸಿಲ್ವರ್ ಲೇಕ್ ಒಪ್ಪಂದ
  • News18
  • Last Updated: May 4, 2020, 4:57 PM IST
  • Share this:
ರಿಲಾಯನ್ಸ್ ಜಿಯೋದಲ್ಲಿ ಸಿಲ್ವರ್ ಲೇಕ್ ಸಂಸ್ಥೆ 5,655.75 ಕೋಟಿ ರೂ ಬಂಡವಾಳ ಹೂಡಿರುವ ಬೆಳವಣಿಗೆಯು ಭಾರತದ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಜಿಯೋದಲ್ಲಿ ಫೇಸ್​ಬುಕ್​ನಿಂದ 45 ಸಾವಿರಕ್ಕೂ ಹೆಚ್ಚು ಹಣದ ಹೂಡಿಕೆ ಬಂದ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಗಮನಾರ್ಹ. ವಿಶ್ವದ ಅನೇಕ ಹಣಕಾಸು ಸಲಹಾ ಸಂಸ್ಥೆಗಳು ಇದನ್ನು ಸಕಾರಾತ್ಮಕ ಒಪ್ಪಂದ ಎಂದು ಬಣ್ಣಿಸಿವೆ. ಜಾಗತಿಕ ಹಣಕಾಸು ಸಲಹಾ ಸಂಸ್ಥೆಯಾದ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಈ ಜಿಯೋ-ಸಿಲ್ವರ್ ಲೇಕ್ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಆರ್ಥಿಕ ಬಲವರ್ದನೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ತನ್ನ ಡಿಜಿಟಲ್ ಸೇವೆಯ ವ್ಯವಹಾರದಲ್ಲಿ ಲಾಭ ಮಾಡಿಕೊಳ್ಳುವ ಸಾಮರ್ಥ್ಯ ಆರ್​ಐಎಲ್ ಸಂಸ್ಥೆಗೆ ಇರುವುದು ಈ ಒಪ್ಪಂದದಿಂದ ಇನ್ನಷ್ಟು ನಿಚ್ಚಳವಾಗಿ ವೇದ್ಯವಾಗಿದೆ. 2021ರ ಮಾರ್ಚ್ 31ರ ವೇಳೆಗೆ ಸಾಲಮುಕ್ತವಾಗಬೇಕೆಂಬ ಅದರ ಸಂಕಲ್ಪ ನೆರವೇರುವ ಹಾದಿ ಇನ್ನಷ್ಟು ಸುಗಮಗೊಂಡಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಸಂಸ್ಥೆಯ ಕಾರ್ಪೊರೇಟ್ ಫೈನಾನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ವಿಕಾಸ್ ಹಲನ್ ಹೇಳಿದ್ದಾರೆ.

ಇದನ್ನೂ ಓದಿ: Reliance Jio-Silver Lake Deal: ಅಮೆರಿಕದ ಸಿಲ್ವರ್ ಲೇಕ್​ನಿಂದ Jioದಲ್ಲಿ Rs. 5,655.75 ಕೋಟಿ ಹೂಡಿಕೆ

ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಹಣಕಾಸು ಸ್ಥಿತಿ ಬಲಪಡಿಸಿಕೊಳ್ಳಲು ಇತ್ತೀಚೆಗೆ ಕೆಲ ಮಹತ್ವದ ಹೆಜ್ಜೆಗಳನ್ನಿರಿಸಿದೆ. ಕೆಲ ದಿನಗಳ ಹಿಂದಷ್ಟೇ ಆರ್​ಐಎಲ್ ರೈಟ್ಸ್ ಇಷ್ಯೂ ಜಾರಿಗೊಳಿಸಿತ್ತು. ರೈಟ್ಸ್ ಇಷ್ಯೂ ಎಂದರೆ ತನ್ನ ಷೇರುದಾರರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಹೆಚ್ಚುವರಿ ಷೇರುಗಳನ್ನು ಕೊಳ್ಳಲು ನೀಡುವ ಆಫರ್. ಈ ನಡೆಯಿಂದ ಆರ್​ಐಎಲ್​ಗೆ ಸರಿಸುಮಾರು 7 ಬಿಲಿಯನ್ ಡಾಲರ್ ಹಣ ಹರಿದುಬಂದಿತು.

ರೈಟ್ಸ್ ಇಷ್ಯೂ ಜೊತೆಗೆ ಫೇಸ್​ಬುಕ್ ಮತ್ತೀಗ ಸಿಲ್ವರ್ ಲೇಕ್ ಹೂಡಿಕೆಗಳಿಂದ 13.6 ಬಿಲಿಯನ್ ಡಾಲರ್ ಹಣ ಬಂದಂತಾಗಿದೆ. 21.4 ಬಿಲಿಯನ್ ಡಾಲರ್​ನಷ್ಟಿದ್ದ ಆರ್​ಐಎಲ್​ನ ನಿವ್ವಳ ಸಾಲ ಈಗ ಮುಕ್ಕಾಲು ಪಾಲು ಇಳಿದಂತಾಗಿದೆ.

ಇದನ್ನೂ ಓದಿ: Reliance Jio-Silver Lake Deal: ಜಿಯೋ-ಸಿಲ್ವರ್‌ ಲೇಕ್ ಒಪ್ಪಂದದ ಮೂಲಕ ಭಾರತೀಯ ಡಿಜಿಟಲ್ ವ್ಯವಸ್ಥೆ ಮತ್ತಷ್ಟು ಪ್ರಗತಿ ಸಾಧಿಸಲಿದೆ; ಮುಖೇಶ್ ಅಂಬಾನಿ

ಇದೇ ವೇಳೆ, ಎಡೆಲ್​ವೇಸ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಕೂಡ ಜಿಯೋ-ಸಿಲ್ವರ್ ಲೇಕ್ ಒಪ್ಪಂದವನ್ನು ಆರ್​ಐಎಲ್ ಮತ್ತು ಭಾರತೀಯ ಡಿಜಿಟಲ್ ಕ್ಷೇತ್ರಕ್ಕೆ ಸಕಾರಾತ್ಮಕ ಬೆಳವಣಿಗೆ ಎಂದು ವರ್ಣಿಸಿದೆ.
First published: May 4, 2020, 4:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading