ನವದೆಹಲಿ: ಜಿಯೋ ಪ್ಲಾಟ್ಫಾರ್ಮ್ನಲ್ಲಿ ಸಿಲ್ವರ್ ಲೇಕ್ ಆ್ಯಂಡ್ ಕೋ-ಇನ್ವೇಸ್ಟರ್ ಮತ್ತೆ 4,546.8 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಘಟಕದಲ್ಲಿ ಖಾಸಗಿ ಇಕ್ವಿಟಿ ದೈತ್ಯ ಕಂಪನಿಯಾದ ಸಿಲ್ವರ್ ಲೇಕ್ ಒಂದು ತಿಂಗಳ ಅವಧಿಯಲ್ಲಿ ಎರಡನೇ ಹೂಡಿಕೆ ಮಾಡಿದೆ ಮತ್ತು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆದ ಎರಡನೆಯ ಒಪ್ಪಂದ ಇದಾಗಿದೆ.
ಮುಕೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆಯ ಮೇಲೆ ವಿದೇಶಿ ನೇರ ಹೂಡಿಕೆ ಹೆಚ್ಚುತ್ತಲೇ ಇದೆ. ಪ್ರಥಮ ಬಾರಿಗೆ ಫೇಸ್ಬುಕ್ ಜಿಯೋದ ಷೇರನ್ನು ಖರೀದಿಸಿತ್ತು. ಇದಾದ ನಂತರ ಆರು ವಾರಗಳ ಅವಧಿಯಲ್ಲಿ ಜಿಯೋ ಮೇಲೆ ಏಳನೇ ಹೂಡಿಕೆ ಆಗಿದೆ. ಇದಕ್ಕೂ ಮುನ್ನ ಜೂನ್ 4ರಂದು ಅಬುಧಾಬಿ ಮೂಲದ ಸಾವರಿನ್ ಇನ್ವೆಸ್ಟರ್ ಮುಬದಲ ಸಂಸ್ಥೆ ಜಿಯೋದ ಶೇ.1.85 ಪಾಲನ್ನು 9,093.6 ರೂಪಾಯಿಗೆ ಖರೀದಿಸಿತ್ತು. ಕಳೆದ ಆರು ವಾರಗಳಲ್ಲಿ ಜಿಯೋ ಸಂಸ್ಥೆ ಶೇ.19.9 ಪಾಲನ್ನು 92,202.15 ಕೋಟಿ ರೂಪಾಯಿ ಮಾರಾಟ ಮಾಡುವ ಮೂಲಕ ಭಾರೀ ಹೂಡಿಕೆ ಪಡೆದಿದೆ.
ಸಿಲ್ವರ್ ಲೇಕ್ನ ಹೂಡಿಕೆಯೊಂದಿಗೆ ಜಿಯೋ ಪ್ಲಾಟ್ಫಾರ್ಮ್ಗಳು ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ ಮತ್ತು ಉದ್ಯಮ ಮೌಲ್ಯ 5.16 ಲಕ್ಷ ಕೋಟಿ ರೂ., ಮತ್ತು ಕಂಪನಿಯ ಡಿಜಿಟಲ್ ಸ್ವತ್ತು ಶೇ.2.08 ಇಕ್ವಿಟಿ ಷೇರುಗಳಾಗಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ: Jio Mubadala Deal: ಜಿಯೋಗೆ 6ನೇ ಹೂಡಿಕೆ; ಶೇ.1.85 ಪಾಲನ್ನು 9,000 ಕೋಟಿ ರೂಪಾಯಿಗೆ ಖರೀದಿಸಿದಲಿದೆ ಅಬುಧಾಬಿಯ ಮುಬದಲ ಸಂಸ್ಥೆ
2020ರ ಮೇ 4ರಂದು ವಿಶ್ವದ ಅತಿದೊಡ್ಡ ಟೆಕ್ ಹೂಡಿಕೆದಾರರಾದ ಸಿಲ್ವರ್ ಲೇಕ್ 5,655.75 ಕೋಟಿ ರೂ.ಗಳನ್ನು ಜಿಯೋದಲ್ಲಿ ಹೂಡಿಕೆ ಮಾಡಿತ್ತು. ಒಟ್ಟಾರೆಯಾಗಿ, ಜಿಯೋ ಪ್ಲಾಟ್ಫಾರಂನಲ್ಲಿ ಆರು ವಾರಗಳಲ್ಲಿ ಏಳು ದೊಡ್ಡ ಹೂಡಿಕೆಗಳಾಗಿವೆ.
ಮೊದಲ ಬಾರಿಗೆ ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ಇದರ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1 ಪಾಲನ್ನು 5,655.75 ಕೋಟಿ ರೂ.ಗೆ ಖರೀದಿಸಿತ್ತು. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿತ್ತು. ನಂತರ ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್ ಅಟ್ಲಾಂಟಿಕ್ ಹಾಗೂ ಶೇ. 2.32 ಪಾಲನ್ನು 11,367 ಕೋಟಿ ರೂಪಾಯಿಗೆ ಕೆಕೆಆರ್ ಖರಿದಿಸಿತ್ತು. ಇದೀಗ ಮತ್ತೆ ಸಿಲ್ವರ್ ಲೇಕ್ 4,546.8 ಕೋಟಿ ಹೂಡಿಕೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ