ಮಾದಕ ದ್ರವ್ಯ ಸೇವನೆ ಅಪರಾಧವಲ್ಲ, ಕಾಯಿಲೆ ; ಸಿಕ್ಕಿಂ ಮುಖ್ಯಮಂತ್ರಿ

news18
Updated:August 9, 2018, 2:58 PM IST
ಮಾದಕ ದ್ರವ್ಯ ಸೇವನೆ ಅಪರಾಧವಲ್ಲ, ಕಾಯಿಲೆ ; ಸಿಕ್ಕಿಂ ಮುಖ್ಯಮಂತ್ರಿ
news18
Updated: August 9, 2018, 2:58 PM IST
ನ್ಯೂಸ್​ 18 ಕನ್ನಡ

ಸಿಕ್ಕಿಂ (ಆ.9): ನಿಷೇಧಿತ ಮಾದಕ ದ್ರವ್ಯಗಳ ಸೇವನೆ ಅಪರಾಧ ಅಲ್ಲ. ಅದು ಒಂದು ರೀತಿ ಕಾಯಿಲೆ ಎಂದು ಸಿಕ್ಕಿಂ ಸರ್ಕಾರ ತೀರ್ಮಾನಿಸಿದೆ.  ಅಲ್ಲದೇ ಇದಕ್ಕೆ ಸಂಬಂಧಿಸಿದ ಕಾನೂನುಗಳ ಬದಲಾವಣೆ ತರಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪವನ್​ ಚಾಮ್ಲಿಂಗ್​ ತಿಳಿಸಿದ್ದಾರೆ.

ಮಾದಕ ದ್ರವ್ಯಗಳ ಮಾರಾಟ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಮಾದಕ ದ್ರವ್ಯ ಸೇವನೆ ಮಾಡುವವರನ್ನು ಅಪರಾಧಿಗಳೆಂದು ಭಾವಿಸಲು ಸಾಧ್ಯವಿಲ್ಲ. ಬದಲಾಗಿ ಅವರನ್ನು  ರೋಗಿಗಳೆಂದು ಪರಿಗಣಿಸಲಾಗುವುದು. ಅವರಿಗೆ ಶಿಕ್ಷೆ ಬದಲಿಗೆ ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ಮಾದಕ ಸೇವನೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಅಲ್ಲದೇ, ಈ ಚಟದಿಂದ ಮುಕ್ತವಾಗಲು ಬಯಸುವ ಯುವಕರಿಗೆ ಚಿಕಿತ್ಸೆ ಕೊಡಿಸಲು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಚಟದಿಂದ ಯುವಕರಿಗೆ ಮುಕ್ತರಾಗಲು ಪ್ರೇರಣೆ ನೀಡುವಂತೆ ಅರಿವು ಮೂಡಿಸಲು ಮುಂದಾಗಲಾಗುವುದು. ಅಲ್ಲದೆ ಈ ಜಾಗೃತಿ ಕಾರ್ಯಕ್ರಮಕ್ಕೆ ನಟ ಸಂಜಯ್​ ದತ್​ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಿಕ್ಕಿಂನ ಕಾನೂನು ಪ್ರಕಾರ ಮಾದಕ ದ್ರವ್ಯ ಸೇವನೆ ಅಪರಾಧವಾಗಿದ್ದು, ಈ ಅಪರಾಧಕ್ಕೆ 20 ಸಾವಿರ ದಂಡ ಹಾಗೂ 6 ತಿಂಗಳ ಶಿಕ್ಷೆ ವಿಧಿಸಲಾಗುವುದು.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ