HOME » NEWS » National-international » SIKH SANT BABA RAM SINGH KILLS SELF CITES STRUGGLE OF FARMERS IN SUICIDE SESR

ರೈತರ ಸಂಕಷ್ಟ ನೋಡಲಾಗುತ್ತಿಲ್ಲ; ಹೋರಾಟದಲ್ಲಿ ಆತ್ಮಹತ್ಯೆಗೆ ಶರಣಾದ ಸಿಖ್ ಗುರು

ಕಳೆದ 21ದಿನಗಳಿಂದ ದೇಶದ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ​  ರೈತರಿಗಾಗಿ ಬಾಬಾ ರಾಮ್​ ಸಿಂಗ್ ಪ್ರಾಣತ್ಯಾಗ ಮಾಡಿರುವುದಾಗಿ ತಿಳಿಸಿದ್ದಾರೆ.

news18-kannada
Updated:December 16, 2020, 9:58 PM IST
ರೈತರ ಸಂಕಷ್ಟ ನೋಡಲಾಗುತ್ತಿಲ್ಲ; ಹೋರಾಟದಲ್ಲಿ ಆತ್ಮಹತ್ಯೆಗೆ ಶರಣಾದ ಸಿಖ್ ಗುರು
 ಬಾಬಾ ರಾಮ್​ ಸಿಂಗ್
  • Share this:
ನವದೆಹಲಿ (ಡಿ.16): ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಕಷ್ಟಗಳನ್ನು ನೋಡಲಾಗದೇ ಗುರುದ್ವಾರದ ಸಂತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಡೆತ್​ ನೋಟ್​ ಬರೆದಿರುವ ಅವರು ಸರ್ಕಾರದ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 65 ವರ್ಷ ಬಾಬಾ ರಾಮ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡ ಸಂತ. ದೆಹಲಿ ಸೋನಿಪತ್​ ಗಡಿಯಲ್ಲಿ ಪ್ರತಿಭಟನಾ ರೈತರಿಗೆ ಬೆಂಬಲವಾಗಿ ಹೋರಾಟದಲ್ಲಿ ಇವರು ಭಾಗಿಯಾಗಿದ್ದರು. ಕಳೆದ  21 ದಿನಗಳಿಂದ ದೇಶದ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ​  ರೈತರಿಗಾಗಿ ಬಾಬಾ ರಾಮ್​ ಸಿಂಗ್ ಪ್ರಾಣತ್ಯಾಗ ಮಾಡಿರುವುದಾಗಿ ತಿಳಿಸಿದ್ದಾರೆ. 'ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ನೋವು ತಂದಿದೆ. ನಾನು ಅವರ ನೋವನ್ನು ಹಂಚಿಕೊಂಡಿದ್ದೇನೆ. ಸರ್ಕಾರ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ. ಅನ್ಯಾಯ ಮಾಡುವುದು ಕೂಡ ಪಾಪ, ಆದರೆ, ಅನ್ಯಾಯವನ್ನು ಸಹಿಸುವುದು ಕೂಡ ದೊಡ್ಡ ಪಾಪವಾಗಿದೆ. ರೈತರನ್ನು ಬೆಂಬಲಿಸಲು ಕೆಲವರು ಸರ್ಕಾರಕ್ಕೆ ಹಲವಾರು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ನಾನು ನನ್ನ ಪ್ರಾಣತ್ಯಾಗದ ಮೂಲಕ ಅವರಿಗೆ ಬೆಂಬಲಿಸುತ್ತಿದ್ದೇನೆ. ನನ್ನ ಆತ್ಮಹತ್ಯೆ ದಬ್ಬಾಳಿಕೆ ವಿರುದ್ಧದ ಧ್ವನಿಯಾಗಿದೆ' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಅವರನ್ನು ತಕ್ಷಣಕ್ಕೆ ಪಾಣಿಪತ್​ನ ಪಾರ್ಕ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮಾರ್ಗಮಧ್ಯೆದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದರು ತಿಳಿಸಿದರು ಎಂದು ಸೋನಿಪಾತ್​ನ ಉಪ ಪೊಲೀಸ್​ ಆಯುಕ್ತ ಶ್ಯಾಮ್​ ಲಾಲ್​ ಪೂನಿಯಾ ತಿಳಿಸಿದ್ದಾರೆ. ಅವರ ಮೃತದೇಹವನ್ನು ಸದ್ಯ ಕರ್ನಾಲ್​ಗೆ ಸ್ಥಳಾಂತರಿಸಲಾಗುತ್ತಿದೆ.
ರೈತರ ಕಷ್ಟನೋಡಲಾಗದೇ ಬಾಬಾ ರಾಮ್​ ಸಿಂಗ್​ ಅವರು ಸಾವನ್ನಪ್ಪಿದ್ದಾರೆ. ಅವರ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಈ ಪರಿಸ್ಥಿತಿ ಮತ್ತಷ್ಟು ಹದಗೆಡುವುದು ಬೇಡ. ಶೀಘ್ರವೇ ಸರ್ಕಾರ ಮೂರು ವಿವಾದಿತ ಕೃಷಿ ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಅಕಾಲಿದಳ ಪಕ್ಷದ ಹಿರಿಯ ನಾಯಕ ಸಖ್ಬಿರ್​ ಬಾದಲ್​ ಟ್ವೀಟ್​ ಮೂಲಕ ಒತ್ತಾಯಿಸಿದ್ದಾರೆ.ರೈತ ಪ್ರತಿಭಟನೆ ಪ್ರಾರಂಭವಾದಗಿನಿಂದ 20 ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರು ನಿನ್ನೆ ಮಾಹಿತಿ ನೀಡಿದ್ದರು. ಕಳೆದ 21 ದಿನಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಪ್ರತಿದಿನ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ರೈತ ಮುಖಂಡ ರಿಷಿಪಾಲ್​ ತಿಳಿಸಿದ್ದರು.
Published by: Seema R
First published: December 16, 2020, 9:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories