• Home
  • »
  • News
  • »
  • national-international
  • »
  • Shocking Incident: ಅಮೆರಿಕಾದಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರ ಮೃತದೇಹ ಪತ್ತೆ; ಹೆಚ್ಚಾಯ್ತು ಆತಂಕ

Shocking Incident: ಅಮೆರಿಕಾದಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರ ಮೃತದೇಹ ಪತ್ತೆ; ಹೆಚ್ಚಾಯ್ತು ಆತಂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಸಿಖ್ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆಯನ್ನು  ಶುಕ್ರವಾರ ನಡೆದಿದೆ. ಭಾರತೀಯ ಮೂಲದ ಈ ನಾಲ್ವರೂ ಒಂದೇ ಕುಟುಂಬದ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.

  • Share this:

ಕ್ಯಾಲಿಫೋರ್ನಿಯಾ: ಭಾರತೀಯ ಮೂಲದ ಸಿಖ್ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ (Shocking Incident)  ಶುಕ್ರವಾರ ನಡೆದಿದೆ. ಭಾರತೀಯ (India) ಮೂಲದ ಈ ನಾಲ್ವರೂ ಒಂದೇ ಕುಟುಂಬದ (Family) ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.  ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತನ್ನ ಮಿಷನ್ ಸ್ಥಳೀಯ ಅಧಿಕಾರಿಗಳು ಈ ವಿಷಯವನ್ನು ತಿಳಿಸಿದ್ದು ಕುಟುಂಬದ ಸದಸ್ಯರೊಡನೆ ಸಂಪರ್ಕದಲ್ಲಿದ್ದೇವೆ. ಅಗತ್ಯವಿದ್ದರೆ ನೆರವು ನೀಡಲು ನೀಡುವುದಾಗಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ, “ಘಟನೆಯ ಬಗ್ಗೆ ನಮಗೆ ತಿಳಿದಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಮ್ಮ ಮಿಷನ್ ಈ ಕುರಿತು ಮಾಹಿತಿ ನೀಡುತ್ತಿದೆ. ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ನಾವು ನೀಡಬಹುದಾದ ಸಹಾಯವನ್ನು ನಾವು ನೀಡುತ್ತೇವೆ. ಇದೊಂದು ಆಘಾತಕಾರಿ ಘಟನೆಯಾಗಿದೆ ಎಂದು ಹೇಳಿದ್ದಾರೆ.


ಪಂಜಾಬ್‌ನ ಹೋಶಿಯಾರ್‌ಪುರದ ಹಾರ್ಸಿ ಪಿಂಡ್ ಮೂಲದ ಕುಟುಂಬದ ನಾಲ್ವರು ಸದಸ್ಯರನ್ನು ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಹೊಸದಾಗಿ ತೆರೆದಿರುವ ಟ್ರೆಕ್ಕಿಂಗ್ ವ್ಯವಹಾರದಿಂದ ಕುಟುಂಬದವರನ್ನು ಈ ವಾರ ಶಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ಈ ವಾರ ಅಪಹರಿಸಿದ್ದಾನೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ಧಾರೆ.


ಮೃತರಾದ ಕುಟುಂಬದ ಸದಸ್ಯರು ಯಾರೆಲ್ಲ?


36 ವರ್ಷದ ಜಸ್ದೀಪ್ ಸಿಂಗ್, 27 ವರ್ಷದ ಜಸ್ಲೀನ್ ಕೌರ್, ಅವರ ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಮಗುವಿನ ಚಿಕ್ಕಪ್ಪ, 39 ವರ್ಷದ ಅಮನದೀಪ್ ಸಿಂಗ್ ಅವರ ಮೃತದೇಹಗಳು ಬುಧವಾರ ಸಂಜೆ  ತೋಟದಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


ಶಂಕಿತ ವ್ಯಕ್ತಿ  ಮಾಜಿ ಕೆಲಸಗಾರ


ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಎಂದು ಗುರುತಿಸಲಾದ 48 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವನು ಆ ಕುಟುಂಬದ ಸದಸ್ಯರೊಡನೆ ದ್ವೇಷಹೊಂದಿದ್ದನು ಎಂದು ತಿಳಿದು ಬಂದಿದೆ. ಇದೇ ಅವರ ಕೊಲೆಗೂ ಕಾರಣವಾಗಿರಬಹುದು ಎಂದು ಹೇಳಲಾಗಿದೆ.


ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಆತ್ಮಹತ್ಯೆಗೆ ಯತ್ನ


ಈ ಪ್ರಕರಣದಲ್ಲಿ ನಾಲ್ಕು ಕೊಲೆ ಮತ್ತು ನಾಲ್ಕು ಅಪಹರಣದ ಪ್ರಕರಣಗಳಲ್ಲಿ ಸಲ್ಗಾಡೊ ಅವರನ್ನು ಗುರುವಾರ ತಡರಾತ್ರಿ ಔಪಚಾರಿಕವಾಗಿ ಬಂಧಿಸಲಾಗಿದೆ ಎಂದು ಮರ್ಸಿಡ್ ಕೌಂಟಿ ಶೆರಿಫ್‌ನ ವಕ್ತಾರ ಅಲೆಕ್ಸಾಂಡ್ರಾ ಬ್ರಿಟನ್ ಹೇಳಿದ್ದಾರೆ, ಸಲ್ಗಾಡೊ ಅವರು ಮಂಗಳವಾರ ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಆತ್ಮಹತ್ಯೆಗೆ ಯತ್ನಿಸಿದರು.


ಇದನ್ನೂ ಓದಿ: ಪುಷ್ಪಾ ನಟಿಗೆ 2ನೇ ಮದ್ವೆಯಂತೆ, ಸಿಎಂ ಯಾತ್ರೆಗೆ ಯತ್ನಾಳ್ ವ್ಯಂಗ್ಯ, ಸಮಂತಾ ಫ್ಯಾನ್ಸ್​​​ ಇಲ್ನೋಡಿ; ಬೆಳಗಿನ ಟಾಪ್ ನ್ಯೂಸ್


ಕುಟುಂಬದ ಇನ್ನಿತರರು ಮಾಡಿದ ಆರೋಪ ಹೀಗಿದೆ ನೋಡಿ


ಅಪಹರಣ ಮತ್ತು ಕೊಲೆಯ ಪ್ರಾಥಮಿಕ ಶಂಕಿತ ಸಲ್ಗಾಡೊ  ಟ್ರಕ್ಕಿಂಗ್ ಕಂಪನಿಗೆ ಚಾಲನೆ ಮಾಡುತ್ತಿದ್ದ ಮಾಜಿ ಉದ್ಯೋಗಿ ಆಗಿದ್ದ ಕಾರಣ ಅವರಿಬ್ಬರು ಭಿನ್ನಾಭಿಪ್ರಾಯ ಹೊಂದಿದ್ದರು. ಜೊತೆಗೆ ಬೇರೆಯಾಗಿದ್ದರು ಎಂದು ಮೃತ ಕುಟುಂಬದ ಸಂಬಂಧಿಯೊಬ್ಬರು ಹೇಳಿದ್ದಾರೆ. ಅಪಹರಣ ಮತ್ತು ಕೊಲೆ ಎರಡರಲ್ಲೂ ಈತನೆ ಭಾಗಿಯಾಗಿದ್ದಾನೆ ಎಂದು ಬಲವಾಗಿ ಅವರ ಕುಟುಂಬದ ಇನ್ನಿತರರು ಆರೋಪಿಸಿದ್ದಾರೆ.


ಹಳೆ ದ್ವೇಷವೇ ಕೊಲೆಗೆ ಕಾರಣವಾಯ್ತಾ?


ಒಂದು ವರ್ಷದ ಹಿಂದೆ ಕೋಪಗೊಂಡ ಟ್ರಕ್ ಡ್ರೈವರ್ ಕುಟುಂಬದ ಸದಸ್ಯರಿಗೆ ಮೆಸೆಜ್ ಮತ್ತು ಇಮೇಲ್ ಮೂಲಕ ಬೆದರಿಕೆ ನೀಡಿದ್ದಾಗಿಯೂ ತಿಳಿದು ಬಂದಿದೆ. ಒಟ್ಟಿನಲ್ಲಿ ನಾಲ್ಕು ಜನ ಮೃತರಾದ ಸಂಗತಿಯಿಂದ ಕುಟುಂಬಸ್ಥರು ಬೇಸರದಲ್ಲಿದ್ದಾರೆ.

First published: