• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Farmers Protest; ಭಾರತದ ರೈತ ಹೋರಾಟದ ಪರವಾಗಿ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿರುವ​ ಸಿಖ್​ ಸಮುದಾಯ!

Farmers Protest; ಭಾರತದ ರೈತ ಹೋರಾಟದ ಪರವಾಗಿ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿರುವ​ ಸಿಖ್​ ಸಮುದಾಯ!

ಕೃಷಿ ಕಾಯ್ದೆ ವಿರೋಧಿಸಿ ಅಮೆರಿಕನ್ ಸಿಖ್​ ಸಮುದಾಯದ ಪ್ರತಿಭಟನೆ.

ಕೃಷಿ ಕಾಯ್ದೆ ವಿರೋಧಿಸಿ ಅಮೆರಿಕನ್ ಸಿಖ್​ ಸಮುದಾಯದ ಪ್ರತಿಭಟನೆ.

ಶುಕ್ರವಾರ(ಡಿ.4) ರಂದು ಚಿಕಾಗೋದಲ್ಲಿ ಸಿಖ್-ಅಮೆರಿಕನ್ನರ ಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎದುರು ಪ್ರತಿಭಟನಾ ರ್‍ಯಾಲಿಯನ್ನೂ ಆಯೋಜಿಸಲಾಗಿತ್ತು.

  • Share this:

ನ್ಯೂಯಾರ್ಕ್ (ಡಿಸೆಂಬರ್​ 06); ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ದೇಶದಲ್ಲಿ ರೈತರ ಹೋರಾಟದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಡಿಸೆಂಬರ್​ 8ಕ್ಕೆ ಭಾರತ್​ ಬಂದ್ ಸಹ ಘೋಷಿಸಲಾಗಿದ್ದು, ಎಲ್ಲಾ ವಿರೋಧ ಮತ್ತು ಎಡಪಕ್ಷಗಳು ಈ ಬಂದ್​ಗೆ ಬೆಂಬಲ ಸೂಚಿಸಿದೆ. ಕಾರ್ಮಿಕ ಸಂಘಟನೆಗಳು, ಕಾಂಗ್ರೆಸ್​ ಸರ್ಕಾರ ಆಳ್ವಿಕೆಯಲ್ಲಿರುವ ರಾಜ್ಯಗಳು ಸಹ ಬಂದ್​ಗೆ ಭೇಷರತ್​ ಬೆಂಬಲ ಸೂಚಿಸಿವೆ. ಕೆನಡಾ, ಲಂಡನ್​ ಸೇರಿದಂತೆ ಅನೇಕ ದೇಶಗಳು ಸಹ ಭಾರತದ ರೈತ ಹೋರಾಟವನ್ನು ಬೆಂಬಲಿಸಿವೆ.  ಈ ನಡುವೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಸಿಖ್​ ಸಮುದಾಯದವರು ಇಂದು ಅಮೆರಿಕದಾದ್ಯಂತ ಹಲವಾರು ನಗರಗಳಲ್ಲಿ ರಸ್ತೆಗಳಿಗೆ ಭಾರತ ಸರ್ಕಾರದ ವಿರುದ್ಧ ಶಾಂತಿಯುತ ರ್‍ಯಾಲಿ ನಡೆಸಿದ್ದಾರೆ. ಈ ಮೂಲಕ ಭಾರತದ ರೈತ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.


ಕ್ಯಾಲಿಫೋರ್ನಿಯಾದ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿಭಟನಾಕಾರರ ದಂಡು ಬೇ ಸೇತುವೆ ಮೇಲೆ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು. ಪ್ರತಿಭಟನಾಕಾರರು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರಿ ಕಚೇರಿ ಕಡೆಗೆ ಸಾಗುತ್ತಿದ್ದರು. ಇತ್ತ ನೂರಾರು ಜನರು ಡೌನ್‌ಟೌನ್ ಇಂಡಿಯಾನಾಪೊಲಿಸ್‌ನಲ್ಲಿ ಜಮಾಯಿಸಿದ್ದರು.


ಎರಡೂ ಸ್ಥಳಗಳಲ್ಲಿ ಪ್ರತಿಭಟನಾಕಾರರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಈ ಕಾನೂನುಗಳು ಭಾರತೀಯ ರೈತರನ್ನು ಬಡತನದತ್ತ ತಳ್ಳುತ್ತವೆ ಮತ್ತು ಕಾರ್ಪೊರೇಟ್ ಕ್ಷೇತ್ರಗಳಿಗೆ ಏಕಸ್ವಾಮ್ಯವನ್ನು ನೀಡುತ್ತದೆ ಎಂದು ವಾದಿಸಿದ್ದಾರೆ.


ಪ್ರತಿಭಟನೆ ವೇಳೆ ಮಾತನಾಡಿರುವ ಇಂಡಿಯಾನಾದ ನಿವಾಸಿ ಗುರಿಂದರ್​ ಸಿಂಗ್ ಖಲ್ಸಾ, "ರೈತರು ಯಾವುದೇ ರಾಷ್ಟ್ರದ ಆತ್ಮ. ನಾವು ನಮ್ಮ ಆತ್ಮವನ್ನು ರಕ್ಷಿಸಬೇಕು. ಯುಎಸ್ ಮತ್ತು ಕೆನಡಾದ ಅನೇಕ ನಗರಗಳು ಒಟ್ಟಾಗಿ ಭಾರತದ ಕೃಷಿ ಮಾರುಕಟ್ಟೆಯನ್ನು ಖಾಸಗಿ ವಲಯಕ್ಕೆ ತೆರೆಯುವ ಮಸೂದೆಗಳನ್ನು ವಾಪಸ್ ಪಡೆಯಲು ಒಗ್ಗೂಡಿದ್ದಾರೆ. ಇದರಿಂದ ಸ್ವತಂತ್ರ ಕೃಷಿ ಸಮುದಾಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬೆಳೆಗಳ ಮಾರುಕಟ್ಟೆ ಮೌಲ್ಯವನ್ನು ದುರ್ಬಲಗೊಳಿಸಲಾಗುತ್ತದೆ"ಎಂದು ಅಭಿಪ್ರಾಯಪಟ್ಟಿದ್ದಾರೆ.


ಇಂಡಿಯಾನಾಪೊಲಿಸ್‌ನ ಡೌನ್‌ಟೌನ್‌ನಲ್ಲಿ ನಡೆದ ರ್‍ಯಾಲಿಯ ಸಂಘಟಕರಲ್ಲಿ ಖಲ್ಸಾ ಕೂಡ ಒಬ್ಬರು. ಪತ್ರತಿಭಟನೆಯಲ್ಲಿ ಇಂಡಿಯಾನಾದ ವಿವಿಧ ಭಾಗಗಳಿಂದ ಸುಮಾರು 500 ಸಿಖ್ ಅಮೆರಿಕನ್ನರು ಭಾಗವಹಿಸಿದ್ದರು.


ಇದನ್ನೂ ಓದಿ : ಡಿಸೆಂಬರ್​ 8ಕ್ಕೆ ಭಾರತ್​ ಬಂದ್; ರೈತ ಹೋರಾಟಕ್ಕೆ​ ಕಾಂಗ್ರೆಸ್​ ಸೇರಿದಂತೆ ಎಲ್ಲಾ ಪಕ್ಷಗಳ ಭೇಷರತ್​ ಬೆಂಬಲ


ಶುಕ್ರವಾರ(ಡಿ.4) ರಂದು ಚಿಕಾಗೋದಲ್ಲಿ ಸಿಖ್-ಅಮೆರಿಕನ್ನರ ಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎದುರು ಪ್ರತಿಭಟನಾ ರ್‍ಯಾಲಿಯನ್ನೂ ಆಯೋಜಿಸಲಾಗಿತ್ತು.


ಬೇ ಏರಿಯಾದಲ್ಲಿ ಭಾನುವಾರ ನಡೆದ ಪ್ರತಿಭಟನೆ, ನ್ಯೂಯಾರ್ಕ್, ಹೂಸ್ಟನ್, ಮಿಚಿಗನ್, ಚಿಕಾಗೊ ಮತ್ತು ವಾಷಿಂಗ್ಟನ್ ಡಿ.ಸಿ ಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಏಕೆಂದರೆ ವಿಶ್ವದಾದ್ಯಂತ ನೆಲೆಸಿರುವ ಸಿಖ್ಖರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

First published: