ದೆಹಲಿ: ಇಂದು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಉಳಿತಾಯ ಖಾತೆ ಮತ್ತು ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
ಬ್ಯಾಂಕ್ ರೆಪೊ ರೇಟ್ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್ಎಲ್ಎಲ್ಆರ್) ಅನ್ನು ಶೇ.0.40 ರಷ್ಟು ಕಡಿತಗೊಳಿಸಿದೆ ಮತ್ತು ಈಗ ಪರಿಣಾಮಕಾರಿಯಾದ ಆರ್ಎಲ್ಎಲ್ಆರ್ ಶೇ6.65 ಆಗಿದ್ದರೆ, ಮೊದಲು ಇದು ಶೇ.7.05% ಆಗಿತ್ತು. ಇದಲ್ಲದೆ, ಪಿಎನ್ಬಿ ಎಲ್ಲಾ ಅಧಿಕಾರಾವಧಿಯಲ್ಲಿನ ಎಲ್ಲಾ ಸಾಲಗಳಿಗೆ ಎಂಸಿಎಲ್ಆರ್ ಅನ್ನು ಶೇ.0.15% ರಷ್ಟು ಕಡಿತಗೊಳಿಸಿದೆ.
ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿದರಗಳನ್ನು ತಗ್ಗಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂತಹ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಆದ್ದರಿಂದ, ನಿಮ್ಮ ಖಾತೆಯಲ್ಲಿ ನೀವು ಒಂದು ಲಕ್ಷ ರೂಪಾಯಿಗಳನ್ನು ಹೊಂದಿದ್ದರೆ ಶೇ.2.75 ಬಡ್ಡಿ ದರದಲ್ಲಿ, ಈ ಮೊತ್ತದ ಮೇಲೆ ಒಂದು ವರ್ಷದವರೆಗೆ ನಿಮಗೆ 2,750 ರೂ. ಬಡ್ಡಿ ರೂಪದಲ್ಲಿ ಲಭ್ಯವಾಗುತ್ತದೆ.
ಬ್ಯಾಂಕ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಪಿಎನ್ಬಿ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಶೇ.0.50 ರಷ್ಟು ಕಡಿಮೆ ಮಾಡಿದೆ. ಜುಲೈ 1 ರಿಂದ ಉಳಿತಾಯ ಖಾತೆಗೆ ನೀಡಬಹುದಾದ ಗರಿಷ್ಠ ಬಡ್ಡಿ ವಾರ್ಷಿಕ ಶೇ.3.25 ಆಗಿರುತ್ತದೆ.
ಆದ್ದರಿಂದ ಉಳಿತಾಯ ಖಾತೆಯಲ್ಲಿ 50 ಲಕ್ಷ ಹಣ ಹೊಂದಿದ್ದರೆ, ವರ್ಷಕ್ಕೆ ಶೇ.3 ಹಾಗೂ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಾರ್ಷಿಕ ಬಡ್ಡಿದರ ಶೇ.3.25 ರಷ್ಟು ಬಡ್ಡಿ ಮೊತ್ತ ಸಿಗಲಿದೆ.
ಟರ್ಮ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿಮೆ ಮಾಡಿದೆ. ಹೊಸ ದರಗಳು ಈಗಾಗಲೇ ಜಾರಿಯಲ್ಲಿವೆ ಮತ್ತು ಕೆಲವು ದರಗಳು ಸೋಮವಾರದಿಂದ ಜಾರಿಗೆ ಬರಲಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮೇ ತಿಂಗಳಲ್ಲಿ ಬಡ್ಡಿದರಗಳನ್ನು ಶೇ.0.40 ರಷ್ಟು ಕಡಿಮೆ ಮಾಡಿತ್ತು. ಈಗ ರೆಪೊ ದರವು ಹಿಂದಿನ ಶೇ.4.40 ರಿಂದ ಶೇ.4 ಕ್ಕೆ ಇಳಿದಿದೆ.
ಆರ್ಬಿಐನ ಈ ನಿರ್ಧಾರದಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿದರವು 15 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಇದರರ್ಥ ಹೆಚ್ಚಿನ ಜನರು ತಮ್ಮ ಸ್ವಂತ ಮನೆ ಹೊಂದುವ ಕನಸುಗಳನ್ನು ಈಡೇರಿಸಲು ಗೃಹ ಸಾಲವನ್ನು ಪಡೆಯಬಹುದಾಗಿದೆ.
ಆರ್ಬಿಐ ದರಗಳಲ್ಲಿ ನಿರಂತರವಾಗಿ ಇಳಿಕೆ ಕಂಡುಬಂದಿದೆ ಮತ್ತು ಇದು ಸಾಲಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಬ್ಯಾಂಕುಗಳನ್ನು ಪ್ರೇರೇಪಿಸುತ್ತಿದೆ ಎಂಬುದು ಉಲ್ಲೇಖಾರ್ಹ. ಹೀಗಾಗಿ ನೀವು ಗೃಹ ಸಾಲಕ್ಕಾಗಿ ಬ್ಯಾಂಕುಗಳನ್ನು ಸಂಪರ್ಕಿಸುವ ಬಗ್ಗೆ ಯೋಚಿಸುತ್ತಿದ್ದರೆ, ವಿವಿಧ ದೊಡ್ಡ ಬ್ಯಾಂಕುಗಳು ಯಾವ ಬಡ್ಡಿದರಗಳನ್ನು ವಿಧಿಸುತ್ತಿವೆ ಎಂಬುದನ್ನು ಪರಿಶೀಲಿಸಿ ಇದರಿಂದ ನಿಮ್ಮ ಸಾಲದ ಮೇಲೆ ಕನಿಷ್ಠ ಬಡ್ಡಿದರವನ್ನು ಪಾವತಿಸಿ ಮತ್ತು ಸ್ವಲ್ಪ ಹಣವನ್ನು ಉಳಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : Survey - ಭಾರತದ ಗಡಿಭಾಗದಲ್ಲಿ ಚೀನಾ ತಂಟೆ: ನಿಮಗೇನನಿಸುತ್ತೆ? ಒಂದು ಪುಟ್ಟ ಸಮೀಕ್ಷೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ