Archana Puran Singh: ಸಿಧು ರಾಜೀನಾಮೆ, ಅರ್ಚನಾ ಪೂರನ್ ಸಿಂಗ್ ಹೆಸ್ರು ಟ್ರೆಂಡಿಂಗ್; ನಾನು ನನ್ನ ಕುರ್ಚಿ ಬಿಡಲ್ಲ ಅಂದ್ರು ನಟಿ!

ಕಪಿಲ್ ಶರ್ಮಾ ಶೋದಲ್ಲಿ ಪದೇ ಪದೇ ನವಜೋತ್ ಸಿಂಗ್ ಸಿಧು ಹೆಸರು ಎಳೆದು ತಂದ ಹಾಸ್ಯ ಮಾಡುತ್ತಿರುವ ಹಿನ್ನೆಲೆ ನೆಟ್ಟಿಗರು ಬಗೆ ಬಗೆಯ ಮೀಮ್ಸ್ ಗಳ ಜೊತೆ ಫನ್ನಿ ಫನ್ನಿ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ.

ಸಿಧು , ಅರ್ಚನಾ ಪೂರನ್ ಸಿಂಗ್

ಸಿಧು , ಅರ್ಚನಾ ಪೂರನ್ ಸಿಂಗ್

 • Share this:
  ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು (Navjot Singh Sidhu) ರಾಜೀನಾಮೆ ನೀಡಿದ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ನಟಿ, ಅರ್ಚನಾ ಪೂರನ್ ಸಿಂಗ್ (Archana Puran Singh) ಹೆಸರು ಟ್ರೆಂಡಿಂಗ್ ನಲ್ಲಿದೆ. ಇನ್ನೂ ಕೆಲವರು ಇಬ್ಬರ ಫೋಟೋಗಳು ಜೋಡಿಸಿ ಟ್ರೋಲ್ ಮಾಡುತ್ತಿದ್ದಾರೆ. ಈ ನಡುವೆ ಕೆಲವರು ಹಾಸ್ಯ ಕಲಾವಿದ ಕಪಿಲ್ ಶರ್ಮಾ (Kapil Sharma) ಫೋಟೋಗಳನ್ನು ಸಹ ಬಳಕೆ ಮಾಡಲಾಗಿದೆ. ಇತ್ತ ನವಜೋತ್ ಸಿಂಗ್ ಸಿಧು ರಾಜೀನಾಮೆ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅರ್ಚನಾ, ನಾನು ನನ್ನ ಕುರ್ಚಿ ಬಿಡಲ್ಲ ಎಂದು ಹೇಳಿದ್ದಾರೆ. ನೆಟ್ಟಿಗರ ಪ್ರಕಾರ ಸಿಧು ರಾಜೀನಾಮೆಯಿಂದ ಅರ್ಚನಾ ಬೇಸರಗೊಂಡಿದ್ದಾರಂತೆ. ಅದು ಹೇಗೆ ಎಂಬುದನ್ನ ಮುಂದೆ ಹೇಳ್ತೀವಿ ನೋಡಿ.

  ಸಿಧು ಸ್ಥಾನಕ್ಕೆ ಬಂದಿದ್ದ ಅರ್ಚನಾ:
  ಪಾಕಿಸ್ತಾನ ಕುರಿತ ಹೇಳಿಕೆ ಬೆನ್ನಲ್ಲೇ ನವಜೋತ್ ಸಿಂಗ್ ಸಿಧು ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಿಧು ಭಾಗವಹಿಸುತ್ತಿದ್ದ ಕಾಮಿ ಡಿ ಶೋದಿಂದ ಕೈ ಬಿಡಲಾಗಿತ್ತು. ಖಾಸಗಿ ವಾಹಿನಿ ನವಜೋತ್ ಸಿಂಗ್ ಸಿಧು ಸ್ಥಾನಕ್ಕೆ ನಟಿ ಅರ್ಚನಾ ಪೂರನ್ ಸಿಂಗ್ ಅವರನ್ನ ಕರೆತರಲಾಗಿತ್ತು. ತದನಂತರ ಸಿಧು ಸಹ ಹಾಸ್ಯ ಕಾರ್ಯಕ್ರಮದಿಂದ ದೂರವೇ ಉಳಿದು ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

  ಇದನ್ನು ಓದಿ: ಕನ್ಹಯ್ಯ ಸೇರ್ಪಡೆಗೆ 'ಕೈ'ಅಂಗಳದಲ್ಲಿ ಶುರುವಾಯ್ತು ಕಲಹ; ಕಾಂಗ್ರೆಸ್‍ಗೆ ಸಂಜೀವಿನಿ ಆಗ್ತಾರಾ ಕನ್ಹಯ್ಯಾ, ಜಿಗ್ನೇಶ್?

  ಕಪಿಲ್ ಶೋದಲ್ಲಿ ಸದಾ ಸಿಧು ಜಪ:
  ಕಳೆದ ವಾರದ ಸಂಚಿಕೆಯಲ್ಲಿ ಕಪಿಲ್ ಶರ್ಮಾ ಶೋಗೆ ಗಾಯಕಿ ನೇಹಾ ಕಕ್ಕರ್ ಮತ್ತು ಟೋನಿ ಕಕ್ಕರ್ ಅತಿಥಿಗಳಾಗಿ ಆಗಮಿಸಿದ್ದರು. ಇಂಡಿಯನ್ ಐಡಲ್ ನಲ್ಲಿ ನನ್ನ ಬದಲಾಗಿ ಸೋದರಿ ಸೋನಿಯನ್ನ ಕೂರಿಸಿದೆ. ಕಾರಣ ಒಮ್ಮೆ ಕುರ್ಚಿ ಬಿಟ್ರೆ ಮತ್ತೆ ಸಿಗಲ್ಲ ಅಲ್ಲವಾ ಎಂದು ನೇಹಾ ಹೇಳಿದ್ದರು. ಆಗ ಪ್ರತಿಕ್ರಿಯಿಸಿದ್ದ ಅರ್ಚನಾ ಪೂರನ್ ಸಿಂಗ್, ಈ ಹಿಂದೆ ಒಬ್ಬರು ತಪ್ಪು ಮಾಡಿದ್ದರಿಂದ ನಾನಿಲ್ಲಿ ಕುಳಿತಿದ್ದೇನೆ ಎಂದು ಹೇಳಿದ್ರು. ಆಗ ಮಧ್ಯ ಪ್ರವೇಶಿಸಿದ್ದ ಕಪಿಲ್ ಶರ್ಮಾ, ನಿಮ್ಮ ಕುರ್ಚಿ ಭದ್ರವಾಗಿದೆ ಬಿಡಿ. ನವಜೋತ್ ಸಿಂಗ್ ಸಿಧು ಅವರಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕುರ್ಚಿ ಸಿಕ್ಕಿದೆ ಎಂದು ಹೇಳಿ ನಗೆ ಚಟಾಕಿ ಹಾರಿಸಿದ್ದರು.  ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್, ಮೀಮ್ಸ್:
  ಕಪಿಲ್ ಶರ್ಮಾ ಶೋದಲ್ಲಿ ಪದೇ ಪದೇ ನವಜೋತ್ ಸಿಂಗ್ ಸಿಧು ಹೆಸರು ಎಳೆದು ತಂದ ಹಾಸ್ಯ ಮಾಡುತ್ತಿರುವ ಹಿನ್ನೆಲೆ ನೆಟ್ಟಿಗರು ಬಗೆ ಬಗೆಯ ಮೀಮ್ಸ್ ಗಳ ಜೊತೆ ಫನ್ನಿ ಫನ್ನಿ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ. ಅದಕ್ಕೆ ಫ್ಯಾಮಿಲಿ ಮ್ಯಾನ್, ಹೇರಾ ಫೇರಿ ಸೇರಿದಂತೆ ಹಲವು ಸಿನಿಮಾಗಳ ತುಣುಕುಗಳ ಫೋಟೋಗಳನ್ನ ಬಳಸಿ ಮೀಮ್ಸ್ ಮಾಡಲಾಗುತ್ತಿದೆ. ಅಧ್ಯಕ್ಷ ಗಾದಿ ತೊರೆದಿರುವ ಸಿಧು, ಕಪಿಲ್ ಶರ್ಮಾ ಶೋಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಜಾಲತಾಣದಲ್ಲಿ ನೆಟ್ಟಿಗರು ಗುಸು ಗುಸು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
  ಸಿಧು ರಾಜೀನಾಮೆಗೆ ಅರ್ಚನಾ ಹೇಳಿದ್ದೇನು?
  ಸಿಧು ರಾಜೀನಾಮೆ ಬಗ್ಗೆ ನಾನು ಮಾತನಾಡಲ್ಲ. ಯಾರು ನನಗೆ ಕುರ್ಚಿ ಅಭದ್ರತೆ ಇದೆ ಎಂದು ಹೇಳುತ್ತಿರೋದು? ಸಿಧುಜೀ ಅಲ್ಲಿ ಪದತ್ಯಾಗ ಮಾಡಿದ್ರೆ ನನ್ನ ಕುರ್ಚಿಗೆ ಹೇಗೆ ಸಮಸ್ಯೆ ಎದುರಾಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

  ಪಂಜಾಬ್ ಕಾಂಗ್ರೆಸ್‍ನಲ್ಲಿ ಸಂಚಲನ:
  ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿ ಅಧ್ಯಕ್ಷ ಗಾದಿಗೆ ಏರಿದ ಕೆಲವೇ ದಿನಗಳಲ್ಲಿ ನವಜೋತ್ ಸಿಂಗ್ ಸಿಧು ರಾಜೀನಾವೆ ನೀಡಿದ್ದಾರೆ. ಇತ್ತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿ ತಲುಪಿದ್ದಾರೆ. ಚುನಾವಣೆಯ ಹೊಸ್ತಿಲಿನಲ್ಲಿ ಪಂಜಾಬ್ ಕಾಂಗ್ರೆಸ್ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

  -ಮಹ್ಮದ್​ ರಫೀಕ್​ ಕೆ
  Published by:Seema R
  First published: