Navjot Singh Sidhu| ಪಂಜಾಬ್ ರಾಜಕೀಯ ರಣತಂತ್ರದ ಹಾಟ್​ಸ್ಪಾಟ್ ಆಯ್ತೇ ನವಜೋತ್ ಸಿಧು ಪಟಿಯಾಲ ಮನೆ?

ಮೂಲಗಳ ಪ್ರಕಾರ ಅರ್ಧ ಡಜನ್ ಪಂಜಾಬ್ ಕಾಂಗ್ರೆಸ್ ಶಾಸಕರು ಮತ್ತು ಕೆಲವು ಸ್ಥಳೀಯ ಪಕ್ಷದ ಮುಖಂಡರು ಮಂಗಳವಾರ ತಡರಾತ್ರಿ ಸಿಧು ಮನೆಗೆ ತಲುಪಿದ್ದಾರೆ. ರಾಜ್ ಕುಮಾರ್ ವೆರ್ಕಾ ಸೇರಿದಂತೆ ಇನ್ನೂ ಕೆಲವರು ಸಿಧು ಅವರನ್ನು ಭೇಟಿ ಮಾಡಿ ಮಾತನಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ನವಜೋತ್ ಸಿಂಗ್ ಸಿಧು.

ನವಜೋತ್ ಸಿಂಗ್ ಸಿಧು.

 • Share this:
  ಪಟಿಯಾಲ (ಸೆಪ್ಟೆಂಬರ್​ 29); ಪಂಜಾಬ್ ಕಾಂಗ್ರೆಸ್​ ರಾಜ್ಯಾಧ್ಯಕ್ಷ (Congress) ಹುದ್ದೆಗೆ ಕ್ರಿಕೆಟರ್ ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu) ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್​ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಅಲ್ಲದೆ, ಪಂಜಾಬ್ ರಾಜ್ಯ (Punjab Politics) ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಸಿಧು ರಾಜೀನಾಮೆಯಿಂದ ದಿಗ್ಭ್ರಮೆಗೊಂಡ ಅವರ ಬಣದ ಅನೇಕ ಶಾಸಕರು ಮತ್ತು ಬೆಂಬಲಿಗರು ಪಟಿಯಾಲಾದ (Patiyala) ಯಾದವೀಂದ್ರ ಎನ್ಕ್ಲೇವ್‌ನಲ್ಲಿರುವ ನವಜೋತ್ ಸಿಂಗ್ ಸಿಧು ಅವರ ಮನೆಗೆ ಎಡತಾಕುತ್ತಿದ್ದಾರೆ. ಪರಿಣಾಮ ನವಜೋತ್​ ಸಿಂಗ್ ಸಿಧು ಅವರ ಮನೆ ಪಂಜಾಬ್ ರಾಜಕೀಯ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆಯೇ? ಎಂಬ ಸಂಶಯ ಮೂಡಿಸುತ್ತಿದೆ.

  ಮೂಲಗಳ ಪ್ರಕಾರ ಅರ್ಧ ಡಜನ್ ಪಂಜಾಬ್ ಕಾಂಗ್ರೆಸ್ ಶಾಸಕರು ಮತ್ತು ಕೆಲವು ಸ್ಥಳೀಯ ಪಕ್ಷದ ಮುಖಂಡರು ಮಂಗಳವಾರ ತಡರಾತ್ರಿ ಸಿಧು ಮನೆಗೆ ತಲುಪಿದ್ದಾರೆ. ರಾಜ್ ಕುಮಾರ್ ವೆರ್ಕಾ ಸೇರಿದಂತೆ ಇನ್ನೂ ಕೆಲವರು ಸಿಧು ಅವರನ್ನು ಭೇಟಿ ಮಾಡಿ ಮಾತನಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.

  ಕುಲ್ಜಿತ್ ನಾಗ್ರಾ, ಇಂದರ್‌ಜಿತ್ ಬುಲೇರಿಯಾ, ರಜಿಯಾ ಸುಲ್ತಾನಾ ಮತ್ತು ಕುಲ್ವಿಂದರ್ ಡ್ಯಾನಿ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಪ್ರಸ್ತುತ ಮನೆಯ ಮೊದಲ ಮಹಡಿಯಲ್ಲಿ ಸಿದ್ದು ಜೊತೆ ಸಭೆ ನಡೆಸುತ್ತಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಸಿಧು ನಿವಾಸವನ್ನು ತಲುಪಿದ ಪರ್ಗತ್ ಸಿಂಗ್, ಸಭೆಯ ಸ್ಥಳವಾದ ಮೊದಲ ಮಹಡಿಗೆ ನೇರವಾಗಿ ಸುಲ್ಕಿಂಗ್ ನಾಯಕನೊಂದಿಗೆ ಮಾತನಾಡಲು ತೆರಳಿದ್ದರು ಎಂದು ತಿಳಿದುಬಂದಿದೆ.

  ನವಜೋತ್ ಸಿಂಗ್ ಸಿಧು ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಸಕರು ಇದ್ದು, ಇವರಿಂದಲೂ ಸಹ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್​ನಲ್ಲಿ ತನ್ನ ಬಲವನ್ನು ಪ್ರದರ್ಶಿಸಬೇಕು ಎಂದು ಸಿಧು ಬಯಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಧು ಅವರ ರಾಜೀನಾಮೆಯು ಮಜಾ, ಮಾಲ್ವಾ ಮತ್ತು ದೋಬಾ ಪ್ರದೇಶಗಳಲ್ಲಿ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆಗೆ ಕಾರಣವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಪಂಜಾಬ್​ನಲ್ಲಿ ಕಾಂಗ್ರೆಸ್ ನಾಯಕರು ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ತಲೆ ಕೆಡಿಸಿಕೊಂಡಿರುವ ಸಂದರ್ಭದಲ್ಲಿ ನಡೆಯುತ್ತಿರುವ ಇಂತಹ ಪ್ರಸಂಗಗಳು ಕಾಂಗ್ರೆಸ್​ ಹೈಕಮಾಂಡ್ ಅನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ.

  ಪಟಿಯಾಲದ ನವಜೋತ್ ಸಿಂಗ್ ಸಿಧು ಅವರ ಮನೆಯಲ್ಲಿ ಬಾವ ಹೆನ್ರಿ, ಸುಖ್‌ಪಾಲ್ ಖೈರಾ, ಕುಲ್ಬೀರ್ ಜೀರಾ, ನಿರ್ಮಲ್ ಸಿಂಗ್ ಸೂತ್ರಾನ, ಬರೀಂದರ್ ಮೀಟ್, ಸಿಂಗ್ ಪಹ್ದಾ, ಪಿರ್ಮಲ್ ಖಾಲ್ಸಾ, ಜಗದೇವ್ ಸಿಂಗ್ ಕಮಲೋ, ಇಂದರ್‌ವೀರ್ ಬುಲೇರಿಯಾ ಮತ್ತು ರಾಜಾ ವಾರಿಂಗ್ ಸೇರಿದಂತೆ ಅನೇಕ ಶಾಸಕರು ಇದೀಗ ಸಿಧು ಮನೆಯಲ್ಲಿದ್ದಾರೆ.

  ಜುಲೈನಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ ಸಿಧು, ನಿನ್ನೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ರಾಜ್ಯದ ರಾಜಕೀಯ ವಲಯಗಳಲ್ಲಿ ಆಘಾತ ವನ್ನುಂಟು ಮಾಡಿದೆ.

  ಇದನ್ನೂ ಓದಿ: Punjab Politics| ಪಂಜಾಬ್ ರಾಜಕಾರಣದಲ್ಲಿ ಕೆಸರೆರಚಾಟ; ಸಿಧು ವಿರುದ್ಧ ಬಿಜೆಪಿ-ಎಎಪಿ ಕಿಡಿ, ಕೆಂಡಕಾರಿದ ಅಮರೀಂದರ್!

  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರದಲ್ಲಿ, ಸಿಧು ಅವರು "ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣಕ್ಕಾಗಿ ಎಂದಿಗೂ ರಾಜಿ ಮಾಡಿ ಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದರು. ಸಿಎಂ ಚರಣಜೀತ್ ಸಿಂಗ್ ಚನ್ನಿ ಕ್ಯಾಬಿನೆಟ್​ನಲ್ಲಿ ಕಳಂಕಿತ' ಶಾಸಕ ರಾಣಾ ಗುರ್ಜಿತ್ ಸಿಂಗ್ ಅವರ ಸೇರ್ಪಡೆ ಸಿಧು ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದು, ಇದೀಗ ಕಾಂಗ್ರೆಸ್​ ಎದುರು ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಅವರ ಮನೆ ಇಂದು ರಾಜಕೀಯ ರಣತಂತ್ರದ ಭಾಗವಾಗಿದೆ ಎನ್ನಲಾಗಿದೆ.
  Published by:MAshok Kumar
  First published: