13 Point Agenda for Punjab: ಸೋನಿಯಾ ಗಾಂಧಿಗೆ ಸಿಧು ಪತ್ರ; ಹೊಸ ಫಾರ್ಮುಲಾದೊಂದಿಗೆ ಸಿಎಂ ಚನ್ನಿ ವಿರುದ್ಧ ಅಸ್ತ್ರ

ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವ ನೆಪದಲ್ಲಿ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ (CM Charanjit Singh Channi)ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಜೊತೆ ನವಜೋತ್ ಸಿಂಗ್ ಸಿಧು

ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಜೊತೆ ನವಜೋತ್ ಸಿಂಗ್ ಸಿಧು

 • Share this:
  ಚಂಡೀಗಢ: ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಸಭೆಯಲ್ಲಿ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ ಮರುದಿನವೇ ಪಂಜಾಬ್ ಕಾಂಗ್ರೆಸ್ (Punjab Congress) ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ನಿಯಮ ಬ್ರೇಕ್ ಮಾಡಿದ್ದಾರೆ. ಸೋನಿಯಾ ಗಾಂಧಿ ಮುಂದೆ 13 ಬೇಡಿಕೆಗಳನ್ನಿರಿಸಿರುವ ಪತ್ರವನ್ನು ಸೋಶಿಯಲ್ ಮೀಡಿಯಾ(Social Media)ದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 13 ಬೇಡಿಕೆಗಳು ಪಂಜಾಬ್ ಕಾಂಗ್ರೆಸ್ ಅಜೆಂಡಾ ಆಗಿರಬೇಕು ಎಂಬ ಮಾತುಗಳನ್ನಾಡಿದ್ದಾರೆ, ಸದ್ಯ ಸಿಧು ಬೇಡಿಕೆಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

  ಸಿಧು ಬರೆದ ಪತ್ರದಲ್ಲೇನಿದೆ?

  ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವ ನೆಪದಲ್ಲಿ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ (CM Charanjit Singh Channi)ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಆದ್ರೂ ಸರ್ಕಾರದಲ್ಲಿ ಅನುಸೂಚಿತ ವರ್ಗಕ್ಕೆ ಪ್ರಾತಿನಿಧಿತ್ವ ಸಿಗುತ್ತಿಲ್ಲ. ಕಾಂಗ್ರೆಸ್ ದಲಿತರೊಬ್ಬರನ್ನ ಸಿಎಂ ಮಾಡಿದೆ ಎಂಬ ವಿಚಾರದ ಮೇಲೆಯೇ ಪಂಜಾಬ್ ನಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಈಗ ಸಿಧು ದಲಿತರಿಗೆ ಪ್ರಾತಿನಿಧಿತ್ಯ ಸಿಗುತ್ತಿಲ್ಲ ಎಂಬ ಹೇಳಿಕೆ ಕಾಂಗ್ರೆಸ್‍ಗೆ ಮುಜುಗರ ಉಂಟು ಮಾಡಿದೆ.

  ಕಾಂಗ್ರೆಸ್ ಮೇಲೆ ಸಿಧು ನ್ಯೂ ಫಾರ್ಮುಲಾ

  ನೇರವಾಗಿ ಪಂಜಾಬ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ನವಜೋತ್ ಸಿಂಗ್ ಸಿಎಂ ಚನ್ನಿ ವಿರುದ್ಧ ಹೊಸ ಫಾರ್ಮುಲಾ ಪ್ರಯೋಗಿಸಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಧು ಬೇಡಿಕೆಗಳ ರೂಪದಲ್ಲಿ 13 ವಿಷಯಗಳನ್ನು ಮುಂದಿಟ್ಟಿದ್ದಾರೆ. ಈ ಸಂಬಂಧ ಚನ್ನಿ ಸರ್ಕಾರಕ್ಕೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಇತ್ತ ಸೂಪರ್ ಸಿಎಂ ಆಗಲು ಪ್ರಯತ್ನಿಸುತ್ತಿರುವ ಹೈಕಮಾಂಡ್ ಮೂಲಕ ಸಿಎಂ ಚನ್ನಿ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬವುದು ಕಾಂಗ್ರೆಸ್ ಅಂಗಳದಲ್ಲಿನ ಗುಸು ಗುಸು.

  ಕಾಂಗ್ರೆಸ್ ನಿರ್ಧಾರವೇನು?

  ಇಷ್ಟು ದಿನ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದ ಸಿಧು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆ ತಮ್ಮ ಪ್ಲಾನ್ ಚೇಂಜ್ ಮಾಡಿಕೊಂಡಿರುವ ಹೈಕಮಾಂಡ್ ಮೂಲಕವೇ ಸಿಧು ಮುಂದಿನ ದಿನಗಳಲ್ಲಿ ಯಾವ ಹೇಳಿಕೆ ನೀಡುತ್ತಾರೆ ಎಂದು ಕುತೂಹಲ ಮೂಡಿದೆ. ಈಗ ಕಾಂಗ್ರೆಸ್ 13 ಬೇಡಿಕೆಗಳ ಕುರಿತು ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಎಂಬುದರ ಬಗ್ಗೆ ಚರ್ಚೆಗಳು ನಡೆದಿದೆ. 2017ರ ವಿಧಾನಸಭಾ ಚುನಾವಣೆ ಪ್ರಚಾರ ನಡೆಸಿದ 55 ವಿಧಾನಸಭಾ ಕ್ಷೇತ್ರಗಳಲ್ಲಿ 53ರಲ್ಲಿ ಗೆದ್ದಿದೆ ಎಂದು ನವಜೋತ್ ಸಿಂಗ್ ಹೇಳಿಕೆ ನೀಡಿದ್ದಾರೆ.

  ಇದನ್ನೂ ಓದಿ: Mahipal Death- ಭನ್ವರಿ ದೇವಿ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಮದರಾನ ನಿಧನ

  ನವಜೋತ್ ಸಿಂಗ್ ಸಿಧು ಪ್ರಮುಖ ಬೇಡಿಕೆಗಳು

  * ಗೋಲಿಬಾರ್ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಮತ್ತು ಮಾದಕದ್ರವ್ಯ ಸಾಗಾಣಿಕದಾರರನ್ನು ಬಂಧಿಸಬೇಕು.

  * ಗ್ರಾಹಕರಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡಬೇಕು.

  * ಸಿಎಂ ಚನ್ನಿ ಸಂಪುಟದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕು.

  * ಮದ್ಯದ ಮೇಲೆ ಸರ್ಕಾರ ಏಕಸ್ವಾಮ್ಯ ಹೊಂದಬೇಕು.

  * ಮರಳು ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗಮಗಳನ್ನು ರಚಿಸಬೇಕು.

  * ಸಾರಿಗೆ ಸಚಿವ ರಾಜಾ ವಾಡಿಂಗ್ ಬಗ್ಗೆ ಪ್ರಶಂಸೆ

  * ಕೇಬಲ್ ಮಾಫಿಯಾ ಬಗ್ಗೆಯೂ ಪ್ರಸ್ತಾಪನೆ

  ವರದಿ: ಮೊಹ್ಮದ್​ ರಫೀಕ್​ ಕೆ
  Published by:Kavya V
  First published: