ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಮತ್ತು ಅವರ ಕುಟುಂಬಕ್ಕೆ ಅತ್ಯಾಚಾರ ಕೊಲೆ ಬೆದರಿಕೆಗಳು ಎದುರಾಗಿದೆ. ಈ ಕುರಿತು ಟ್ವೀಟ್ ಮೂಲಕ ತಿಳಿಸಿರುವ ನಟ ಸಿದ್ಧಾರ್ಥ್ ಅವರ ಫೋನ್ ನಂಬರ್ ಸೋರಿಕೆಯಾಗಿದ್ದು, ಈ ರೀತಿ ಕರೆಗಳು ಬರಲಾರಂಭಿಸಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಫೋನ್ ನಂಬರ್ ಅನ್ನು ಬಿಜೆಪಿ ಐಟಿ ಸೆಲ್ (ಮಾಹಿತಿ ತಂತ್ರಜ್ಞಾನ ಘಟಕ) ಲೀಕ್ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟ, ತಮಿಳುನಾಡು ಬಿಜೆಪಿ ಐಟಿ ಘಟಕ ನನ್ನ ಫೋನ್ ನಂಬರ್ ಲೀಕ್ ಮಾಡಿದೆ, ಇದರಿಂದಾಗಿ 500ಕ್ಕೂ ಹೆಚ್ಚು ಬೆದರಿಕೆ, ಅತ್ಯಾಚಾರದ ಕರೆಗಳು ಬರುತ್ತಿವೆ. ನನ್ನ ಕುಟುಂಬಕ್ಕೂ ಕಳೆದ 24 ಗಂಟೆಯಲ್ಲಿ ಅನೇಕ ಬೆದರಿಕೆ ಕರೆ ಬಂದಿದೆ. ಬಿಜೆಪಿಯ ಲಿಂಕ್ ಮತ್ತು ಡಿಪಿಯೊಂದಿಗೆ ಎಲ್ಲಾ ನಂಬರ್ಗಳನ್ನು ನಾನು ರೆಕಾರ್ಡ್ ಮಾಡಿದ್ದು, ಪೊಲೀಸರಿಗೆ ಒಪ್ಪಿಸುತ್ತೇನೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದಿದ್ದಾರೆ ಅಲ್ಲದೇ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೂ ತಮ್ಮ ಟ್ವೀಟ್ ಸಂದೇಶ ರವಾನಿಸಿದ್ದಾರೆ.
My phone number was leaked by members of TN BJP and @BJPtnITcell
Over 500 calls of abuse, rape and death threats to me & family for over 24 hrs. All numbers recorded (with BJP links and DPs) and handing over to Police.
ತಮಗೆ ಬರುತ್ತಿರುವ ಬೆದರಿಕೆ ಕರೆಗಳ ಮತ್ತು ಸಂದೇಶಗಳ ಸ್ಕ್ರೀನ್ ಶಾಟ್ಗಳನ್ನು ನಟ ಸಿದ್ಧಾರ್ಥ್ ಸಾಮಾಜಿಕ ಜಾಲತಾಣಧಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿ ನನ್ನ ನಂಬರ್ ಹಂಚಿಕೆ ಮಾಡಿದ್ದು, ನನ್ನ ಮೇಲೆ ಆಕ್ರಮಣ ಮಾಡಿ ದೌರ್ಜನ್ಯ ನಡೆಸುವಂತೆ ಜನರಿಗೆ ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೋವಿಡ್ನಂತಹ ಸೋಂಕಿನಿಂದ ಬೇಕಾದರೂ ನಾವು ಹೋರಾಡಬಹುದು ಇಂತಹ ಜನರ ವಿರುದ್ಧ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಜನಪ್ರಿಯತೆ ಪಡೆದಿರುವ ನಟ ಸಿದ್ಧಾರ್ಥ್, ಆಡಳಿತಾ ರೂಢ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರು. ಅಲ್ಲದೇ, ದೇಶದಲ್ಲಿ ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಇತ್ತೀಚೆಗೆ ಟೀಕಿಸಿದ್ದರು.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ