Rajyasabha Elections: ಜೆಡಿಎಸ್ ಜೊತೆ ಹೊಂದಾಣಿಕೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ: ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಕಳೆದ ಬಾರಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ  ಅವರಿಗೆ ಬೆಂಬಲ ನೀಡಿದ್ದರಿಂದ ಈ ಬಾರಿ ಜೆಡಿಎಸ್ ಮತಗಳನ್ನು ಪಡೆದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ‌ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

  • Share this:

ನವದೆಹಲಿ, ಮೇ 21: ಹಾಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ (Rajyasabha Member Jairam Ramesh) ಅವರನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು (Congress Party) ರಾಜ್ಯದಿಂದ ರಾಜ್ಯಸಭೆಗೆ ಕಳಿಸುವುದು ಬಹುತೇಕ ಖಚಿತವಾಗಿದೆ. ಇದಲ್ಲದೆ ಕಳೆದ ಬಾರಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ (Former Prime Minister H.D. Devegowda)  ಅವರಿಗೆ ಬೆಂಬಲ ನೀಡಿದ್ದರಿಂದ ಈ ಬಾರಿ ಜೆಡಿಎಸ್ (JDS) ಮತಗಳನ್ನು ಪಡೆದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ‌ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಎರಡನೇ ಅಭ್ಯರ್ಥಿ ವಿಚಾರವಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) 'ಇದನ್ನು  ಹೈಕಮಾಂಡ್ ನಿರ್ಧಾರ ಮಾಡುತ್ತದೆ' ಎಂದು ಹೇಳಿದ್ದಾರೆ.


ಸೋನಿಯಾ ಗಾಂಧಿ ಭೇಟಿ ಇಲ್ಲ
ದೆಹಲಿಯಲ್ಲಿ ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜೊತೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿದ ಸಿದ್ದರಾಮಯ್ಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, 'ವಿಧಾನ ಪರಿಷತ್ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಯಾರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿದೆ ಎಂದು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲರ ಬಗ್ಗೆಯೂ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಅಂತಿಮವಾಗಿ ಹೈಕಮಾಂಡ್ ತಿರ್ಮಾನ ಕೈಗೊಳ್ಳಲಿದೆ. ನಾವು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.


ಇದನ್ನೂ ಓದಿ: Rahul Gandhi In London: ಮಾತು ಕೇಳೋ ಸ್ವಭಾವ ಮೋದಿಗಿಲ್ಲ, ರಾಹುಲ್ ಗಾಂಧಿ ವಾಗ್ದಾಳಿ


ಅಶೋಕ ನೀನು ಏನು ಮಾಡಿದ್ದೀಯಪ್ಪ?
ಬೆಂಗಳೂರನಲ್ಲಿ ಮಳೆ ನೀರು ನುಗ್ಗಿ ಆಗಿರುವ ಅನಾಹುತಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ಹೋದ ಬಳಿಕ ಬೆಂಗಳೂರಿಗೆ ಬಿಜೆಪಿ ಸರ್ಕಾರ ಒಂದು ಪೈಸ್ ಕೊಟ್ಟಿಲ್ಲ. ರಾಜಾ ಕಾಲುವೆ ಹೂಳೆತ್ತಿಲ್ಲ. ಹಾಗಾಗಿ ನೀರು ನುಗ್ಗಿದೆ ಎಂದು ಹೇಳಿದರು. :ಬೆಂಗಳೂರು ಪ್ರವಾಹ ಕಾಂಗ್ರೆಸ್ಸಿಗರ ಪಾಪಾದ ಕೊಡ' ಎಂಬ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು 'ಅಶೋಕಾ ನೀನು ಏನು ಮಾಡಿದ್ದೀಯಾ ಹೇಳಪ್ಪ? ಶಾಸಕ ಆಗಿದ್ದೀಯಾ? ಮಂತ್ರಿ ಆಗಿದ್ದೀಯಾ? ನೀನು ಏನು ಮಾಡಿದೆ ಹೇಳು. ಸುಮ್ಮನೆ ಪಾಪಾದ ಕೊಡ ಅಂತಾ ಹೇಳಿ ಜಾರಿಕೊಳ್ಳಬೇಡ ಎಂದು ಜಾಡಿಸಿದರು.


ಪಾಪದ ಕೊಡ ನಮ್ಮದಾ ನಿಮ್ಮದಾ?
ಕಾಂಗ್ರೆಸ್ ನವರು ತಪ್ಪು ಮಾಡಿದ್ದರೆ, ನೀವು ಸರಿ ಮಾಡಬಹುದಾಗಿತ್ತು ತಾನೆ? ಬಿಜೆಪಿಯವರು ಮೇಯರ್ ಆಗಿದ್ದರು ತಾನೆ? ನೀವು ಮೂರು ವರ್ಷದಿಂದ ಸರ್ಕಾರ ಮಾಡ್ತಾ ಇದ್ದೀರಿ ತಾನೆ? ಬೆಂಗಳೂರಿನಲ್ಲಿ ಮಳೆ ನೀರಿನಿಂದ ಆಗುತ್ತಿರುವ ಅನಾಹುತಗಳನ್ನು ತಡೆಯಲು ಏನು ಮಾಡಿದ್ದೀಯಾ ಹೇಳು. ಸಚಿವನಾಗಿ ಏನು ಕೆಲಸ ಮಾಡಿದ್ದೀಯ ಹೇಳು. ನಮ್ಮನ್ನು ಪ್ರಶ್ನೆ ಮಾಡುವ ಮೊದಲು ನೀನು ಮಾಡಿರುವ ಕೆಲಸದ ಬಗ್ಗೆ ಹೇಳು. ನಾನು ಬೆಂಗಳೂರು ಅಭಿವೃದ್ಧಿಗೆ 1,217 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ಶೇಕಡಾ 50ರಷ್ಟು ಕಾಲುವೆಗೆ ತಡೆ ಗೋಡೆ ನಿರ್ಮಿಸಿದ್ದೆವು. ನೀವು ಎಷ್ಟು ಕೆಲಸ ಮಾಡಿದ್ದೀರಿ? ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದು ಆರ್. ಅಶೋಕ್ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

Published by:Kavya V
First published: