Viral Story: ಕಡಲೆಕಾಯಿಯ ಪುಡಿಗಾಸಿನ ಸಾಲ ತೀರಿಸಲು ಅಮೆರಿಕದಿಂದ ಬಂದ ಅಣ್ಣ-ತಂಗಿ
Kakinada: ದೂರದ ಅಮೆರಿಕದಿಂದ ಅಜ್ಜಿಯ ಕಡಲೆಕಾಯಿ ಸಾಲವನ್ನು ತೀರಿಸುವ ಸಲುವಾಗಿ ಭಾರತಕ್ಕೆ ಬಂದ ಅಣ್ಣ ತಂಗಿ ಇಬ್ಬರೂ ಕಾಕಿನಾಡದಲ್ಲಿ ಅಜ್ಜಿಯ ವಿಳಾಸಕ್ಕಾಗಿ ಸಾಕಷ್ಟು ಅಲೆದಾಟ ನಡೆಸಿದ್ದಾರೆ.. ಕೊನೆಗೆ ಅಜ್ಜಿ ಕಾಕಿನಾಡ ಸಮೀಪದ ಹಳ್ಳಿಯೊಂದರಲ್ಲಿ ವಾಸವಾಗಿರುವುದು ಪತ್ತೆಹಚ್ಚಿ ಅಲ್ಲಿಗೆ ತೆರಳಿ ಅಜ್ಜಿಯ ಕಡಲೆಕಾಯಿಯ ಸಾಲ ತಿರಿಸಿದ್ದಾರೆ.
ನಾವು ಸಿನಿಮಾಗಳಲ್ಲಿ(Cinema) ಸಾಮಾನ್ಯವಾಗಿ ಅನೇಕ ರೀತಿಯ ರೋಚಕ ಕಥೆಗಳನ್ನು(Thriller Story) ನೋಡಿರುತ್ತೇವೆ.. ಅದ್ರಲ್ಲೂ ಯಾರಾದರೂ ಒಬ್ಬ ವ್ಯಕ್ತಿ ಸಾಲ ಪಡೆದಿದ್ದು, ಸಾಲ ತೀರಿಸಲಾಗದೇ ದೂರ ಇದ್ದು ಅನೇಕ ವರ್ಷಗಳ(So Many Years) ಬಳಿಕ ಸಾಲ ಕೊಟ್ಟವರ ಹುಡುಕಿ ಮರಳಿ ಸಾಲ ತೀರಿಸಲು ಪರದಾಡುವ ಕಥೆಗಳನ್ನು ಸಿನಿಮಾಗಳಲ್ಲಿ ಕಾದಂಬರಿಗಳಲ್ಲಿ(Novels) ನೋಡಿರುತ್ತೇವೆ ಓದಿರುತ್ತೇವೆ.. ಆದರೆ ನಿಜಜೀವನದಲ್ಲಿ ಎಲ್ಲಿಯಾದರೂ ಈ ರೀತಿಯ ಘಟನೆಗಳು ಸಂಭವಿಸುವುದು ಸಾಧ್ಯವೇ ಇಲ್ಲ.. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕೊಟ್ಟ ಸಾಲವನ್ನು ಮರಳಿ ವಾಪಸ್ ಮಾಡಲು ಪರದಾಡುವ ಜನರು ಇದ್ದಾರೆ.. ಸಾಲ ಕೊಟ್ಟವರು ಎಲ್ಲಿ ಕೇಳುತ್ತಾರೆ ಎಂದು ತಲೆಮರೆಸಿಕೊಂಡು ಓಡಾಡುವ ಜನರ ಮಧ್ಯೆ ಅಪರೂಪದಲ್ಲಿ ಅಪರೂಪ ಎನ್ನುವಂತೆ ಸಿನಿಮೀಯ ಶೈಲಿಯಲ್ಲಿ ಕೇವಲ ಕಡಲೆಕಾಯಿಯ ಸಾಲ ತೀರಿಸಲು ದೂರದ ಅಮೆರಿಕದಿಂದ ಕುಟುಂಬವೊಂದು ಭಾರತಕ್ಕೆ ಬಂದು ಸಾಲ ತೀರಿಸಿರುವ ಘಟನೆ ನಡೆದಿದೆ
ಕಡಲೆಕಾಯಿ ಸಾಲ ತೀರಿಸಲು ಅಮೇರಿಕಾದಿಂದ ಹಾರಿಬಂದ ಕುಟುಂಬ
12 ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸವಾಗಿದ್ದಾರೆ ಕುಟುಂಬವೊಂದು ಭಾರತಕ್ಕೆ ಪ್ರವಾಸಕ್ಕೆಂದು ಬಂದಿತ್ತು.. ಈ ವೇಳೆ ಆ ಕುಟುಂಬ ಆಂಧ್ರಪ್ರದೇಶದ ಕಾಕಿನಾಡ ಸುತ್ತಮುತ್ತಲಿನ ಪ್ರವಾಸ ಕೈಗೊಂಡಿತ್ತು.. ಕಾಕಿನಾಡ ಬೀಚಿಗೆ ತೆರಳಿದ್ದ ಕುಟುಂಬ ಅಲ್ಲಿ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರಿಂದ ಕಡಲೆಕಾಯಿಯನ್ನು ಖರೀದಿ ಮಾಡಿತ್ತು.ಆದರೆ ಹಣ ನೀಡಲು ತಮ್ಮ ಜೇಬು ಹುಡುಕಾಡಿದಾಗ ಕುಟುಂಬದ ಕೈಯಲ್ಲಿ ಹಣ ಇರಲಿಲ್ಲ.. ಹೀಗಾಗಿ ಮರಳಿ ಬಂದು ಹಣ ನೀಡುವುದಾಗಿ ಅಜ್ಜಿಯ ಫೋಟೋ ತೆಗೆದುಕೊಂಡು ಕುಟುಂಬ ಅಜ್ಜಿಗೆ ಭರವಸೆ ನೀಡಿತ್ತು.. ಅಲ್ಲದೆ ಅಜ್ಜಿ ಸಹಕುಟುಂಬಕ್ಕೆ ಕಡಲೆಕಾಯಿಯನ್ನು ಉಚಿತವಾಗಿ ನೀಡಿ ಉದಾರತೆಯನ್ನು ಮೆರೆದಿತ್ತು.
ಆದ್ರೆ ಅಜ್ಜಿಯ ಕಡಲೆಕಾಯಿ ಸಾಲ ತೀರಿಸುವ ಮೊದಲೇ ಆಂಧ್ರಪ್ರದೇಶದಿಂದ ಕಡಲೆಕಾಯಿ ಪಡೆದುಕೊಂಡಿದ್ದ ಕುಟುಂಬ ಮರಳಿ ಅಮೇರಿಕಾಗೆ ವಾಪಸ್ ಆಗಿತ್ತು.. ಅಜ್ಜಿಯ ಕಡಲೆಕಾಯಿ ಸಾಲ ತೀರಿಸಲು ಸಾಧ್ಯವಾಗದೇ ಇದ್ದಿದ್ದರಿಂದ ಬೇಸರ ಮಾಡಿಕೊಂಡಿದ್ದ ಕುಟುಂಬ ಮುಂದೊಂದು ದಿನ ಸಾಲ ತೀರಿಸಿದರು ಆಯಿತು ಎಂದು ಸುಮ್ಮನೆ ಇತ್ತು.. ಆದರೆ ಈಗ ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಕಡಲೇಕಾಯಿ ಸಾಲ ಪಡೆದಿದ್ದ ಕುಟುಂಬದ ಮಕ್ಕಳು ಇಬ್ಬರು ಭಾರತಕ್ಕೆ ಬಂದು ಅಜ್ಜಿಯ ಸಾಲ ತೀರಿಸಲು ಮುಂದಾಗಿದ್ದಾರೆ.
ಅಜ್ಜಿ ಸಾಲ ತೀರಿಸಲು ದೂರದಿಂದ ಬಂದ ಅಣ್ಣ ತಂಗಿ
ಕಾಕಿನಾಡದಲ್ಲಿ ಅಜ್ಜಿಯಿಂದ ಕಡಲೇಕಾಯಿ ಸಾಲ ಪಡೆದಿದ್ದ ಕುಟುಂಬದಲ್ಲಿ 10 ವರ್ಷದ ಪ್ರಣವ್ ಹಾಗೂ 9 ವರ್ಷದ ಸುಚಿತ ಕೂಡ ಇದ್ದರು.. ಇವರಿಬ್ಬರಿಗೂ ಕೂಡ ಅಜ್ಜಿಯಿಂದ ಕಡಲೆಕಾಯಿಯ ಸಾಲ ಪಡೆದಿದ್ದು ನೆನಪಿತ್ತು.. ಹೀಗಾಗಿ ಅಜ್ಜಿಯ ಸಾಲ ತೀರಿಸಲು ದೂರದ ಅಮೆರಿಕಾದಿಂದ ಮರಳಿ ಆಂಧ್ರಪ್ರದೇಶಕ್ಕೆ ಬಂದಿದ್ದಾರೆ.. ಅಲ್ಲದೇ ಅಂದು ಅಜ್ಜಿಯ ಸಾಲ ತೀರಿಸುವುದಾಗಿ ಮೊಬೈಲ್ನಲ್ಲಿ ತೆಗೆದುಕೊಂಡಿದ್ದ ಫೋಟೋ ಇಟ್ಟುಕೊಂಡು ಅವರನ್ನು ಹುಡುಕಿ, ಅಜ್ಜಿಯ ಕಡಲೆಕಾಯಿಯ ಪುಡಿಗಾಸು ಸಾಲವನ್ನು ತಿರಿಸಿದ್ದಾರೆ.
ದೂರದ ಅಮೆರಿಕದಿಂದ ಅಜ್ಜಿಯ ಕಡಲೆಕಾಯಿ ಸಾಲವನ್ನು ತೀರಿಸುವ ಸಲುವಾಗಿ ಭಾರತಕ್ಕೆ ಬಂದ ಅಣ್ಣ ತಂಗಿ ಇಬ್ಬರೂ ಕಾಕಿನಾಡದಲ್ಲಿ ಅಜ್ಜಿಯ ವಿಳಾಸಕ್ಕಾಗಿ ಸಾಕಷ್ಟು ಅಲೆದಾಟ ನಡೆಸಿದ್ದಾರೆ.. ಕೊನೆಗೆ ಅಜ್ಜಿ ಕಾಕಿನಾಡ ಸಮೀಪದ ಹಳ್ಳಿಯೊಂದರಲ್ಲಿ ವಾಸವಾಗಿರುವುದು ಪತ್ತೆಹಚ್ಚಿ ಅಲ್ಲಿಗೆ ತೆರಳಿ ಅಜ್ಜಿಯ ಕಡಲೆಕಾಯಿಯ ಸಾಲ ತಿರಿಸಿದ್ದಾರೆ..ಅಲ್ಲದೆ ಅಂದುಕೊಂಡು ಉದಾರವಾಗಿ ಕಡಲೆಕಾಯಿ ಮಾನವೀಯತೆ ಮೆರೆದ ಅಜ್ಜಿಗೆ ಅಣ್ಣ ತಂಗಿ ಇಬ್ಬರೂ ಸೇರಿ rs.25000 ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ