ಪತ್ಥಲ್​ಗಡ್ ಹೋರಾಟದ ಉಗ್ರಾವತಾರ: ಆದೇಶ ಮೀರಿದವರ ದಮನ; ಹತ್ಯೆಯಾದವರ ಸಂಖ್ಯೆ ಏಳಕ್ಕಿಂತಲೂ ಹೆಚ್ಚು

ಜಾರ್ಖಂಡ್, ಛತ್ತೀಸ್​ಗಡ ರಾಜ್ಯಗಳಲ್ಲಿ ಈ ಆಂದೋಲನ ದೊಡ್ಡ ಮಟ್ಟಕ್ಕೆ ಬೆಳೆದಿವೆ. ಆದಿವಾಸಿಗಳು ಭಾರತದ ನಿಜವಾದ ಆಡಳಿತಗಾರರು. ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ. ಅವರಿಗೆ ಅವರದ್ದೇ ಕಟ್ಟುಪಾಡುಗಳಿವೆ ಎಂಬಿತ್ಯಾದಿ ಘೋಷಣೆಗಳು ಬುಡಕಟ್ಟು ಪ್ರದೇಶಗಳಲ್ಲಿ ಅಲ್ಲಲ್ಲಿ ರಾರಾಜಿಸುತ್ತವೆ.

news18
Updated:January 24, 2020, 8:43 PM IST
ಪತ್ಥಲ್​ಗಡ್ ಹೋರಾಟದ ಉಗ್ರಾವತಾರ: ಆದೇಶ ಮೀರಿದವರ ದಮನ; ಹತ್ಯೆಯಾದವರ ಸಂಖ್ಯೆ ಏಳಕ್ಕಿಂತಲೂ ಹೆಚ್ಚು
ಪತ್ಥಲ್​ಗಡಿ ಹೋರಾಟಗಾರರಿಂದ ಹತ್ಯೆಯಾದವರು...
  • News18
  • Last Updated: January 24, 2020, 8:43 PM IST
  • Share this:
ಬುಡಕಟ್ಟು ಜನಾಂಗಗಳು ಹೆಚ್ಚಿರುವ ಜಾರ್ಖಂಡ್, ಛತ್ತೀಸ್​ಗಡ, ಒಡಿಶಾ, ಮಧ್ಯ ಪ್ರದೇಶಗಳಲ್ಲಿ ಈಗ್ಗೆ ಕೆಲವಾರು ವರ್ಷಗಳಿಂದ ಪತ್ಥಲ್​ಗಡ್ ಆಂದೋಲನ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ. ಸರ್ಕಾರಿ ವ್ಯವಸ್ಥೆಯನ್ನೇ ವಿರೋಧಿಸಿ ಸ್ವಾವಲಂಬನೆಯ ಉದ್ದೇಶವಿಟ್ಟುಕೊಂಡು ಬೆಳೆಯುತ್ತಿರುವ ಈ ಆಂದೋಲನ ಈಗ ಉಗ್ರ ಸ್ವರೂಪಕ್ಕೆ ತಿರುಗಿದೆ. ಬುಡಕಟ್ಟು ಪ್ರದೇಶಗಳಲ್ಲಿ ತಮ್ಮ 14 ಅಂಶಗಳ ಕಾರ್ಯಕ್ರಮಕ್ಕೆ ಬದ್ಧರಾಗದ ವ್ಯಕ್ತಿಗಳನ್ನು ಕೊಲ್ಲುವ ಕೆಲಸವಾಗುತ್ತಿದೆ. ಜಾರ್ಖಂಡ್​ನ ಪಶ್ಚಿಮ ಸಿಂಘಭುಮ್ ಜಿಲ್ಲೆಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಏಳು ಮಂದಿ ಅಸುನೀಗಿದ್ದರು. ಆಗ ಗಾಯಗೊಂಡಿದ್ದವರಲ್ಲಿ ಇಬ್ಬರು ಮಂದಿ ಇವತ್ತು ಮೃತಪಟ್ಟಿದ್ದಾರೆನ್ನಲಾಗಿದೆ.

ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಅದಿವಾಸಿಗಳಿಗೆ ಅನ್ಯಾಯವಾಗಿದೆ. ಅವರನ್ನು ನಿರಂತರವಾಗಿ ಶೋಷಿಸಲಾಗುತ್ತಿದೆ. ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತೇವೆ. ನಮ್ಮ ನಿಯಮವನ್ನು ನಾವೇ ರೂಪಿಸಿಕೊಳ್ಳುತ್ತೇವೆ ಎಂದು ಆದಿವಾಸಿಗಳ ಕೆಲ ಗುಂಪುಗಳು ಪತ್ಥಲ್​ಗಡ್ ಆಂದೋಲನವನ್ನು ರೂಪಿಸಿವೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ಎಲ್ಲಾ ರೀತಿಯ ಸರ್ಕಾರೀ ಗುರುತುಪತ್ರಗಳನ್ನು ಮರಳಿಸುವುದು; ಸರ್ಕಾರಿ ಶಾಲೆಗಳನ್ನು ನಿಷೇಧಿಸುವುದು ಇತ್ಯಾದಿ 14 ಅಂಶಗಳ ಆದೇಶವನ್ನು ಹೊರಡಿಸಲಾಗಿದೆ.

1) ಆದಿವಾಸಿಗಳಿಗೆ ಪ್ರತ್ಯೇಕ ವ್ಯವಸ್ಥೆ

2) ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಎಲ್ಲಾ ಸರ್ಕಾರಿ ಗುರುತುಪತ್ರಗಳನ್ನು ಹಿಂದಿರುಗಿಸುವುದು
3) ಸರ್ಕಾರಿ ಶಾಲೆಗಳ ನಿಷೇಧ
4) ಎಲ್ಲಾ ಸಂದರ್ಭಗಳಲ್ಲೂ ಪುರುಷರು ಪಂಚೆ ಮತ್ತು ಮಹಿಳೆಯರು ಸೀರೆ ತೊಡುವುದು
5) ಧಾರ್ಮಿಕ ಗ್ರಂಥ, ದೇವರು ಇತ್ಯಾದಿಗಳಿಂದ ದೂರ ಇರುವುದುಇದನ್ನೂ ಓದಿ: ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸುವಂತೆ ಮನವಿ ಮಾಡಿ 154 ನಾಗರಿಕರ ನಿಯೋಗದಿಂದ ರಾಷ್ಟ್ರಪತಿ ಕೋವಿಂದ್ ಭೇಟಿ

ಈ ಮೇಲಿನವು 14 ಅಂಶಗಳ ಪತ್ಥಲ್​ಗಡಿ ಆಂದೋಲನದ ಸ್ಯಾಂಪಲ್​ಗಳಾಗಿವೆ. ಜಾರ್ಖಂಡ್, ಛತ್ತೀಸ್​ಗಡ ರಾಜ್ಯಗಳಲ್ಲಿ ಈ ಆಂದೋಲನ ದೊಡ್ಡ ಮಟ್ಟಕ್ಕೆ ಬೆಳೆದಿವೆ. ಆದಿವಾಸಿಗಳು ಭಾರತದ ನಿಜವಾದ ಆಡಳಿತಗಾರರು. ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ. ಅವರಿಗೆ ಅವರದ್ದೇ ಕಟ್ಟುಪಾಡುಗಳಿವೆ ಎಂಬಿತ್ಯಾದಿ ಘೋಷಣೆಗಳು ಬುಡಕಟ್ಟು ಪ್ರದೇಶಗಳಲ್ಲಿ ಅಲ್ಲಲ್ಲಿ ರಾರಾಜಿಸುತ್ತವೆ. ಅನೇಕ ಕಡೆ ಅವರದ್ದೇ ಪ್ರತ್ಯೇಕ ಬ್ಯಾಂಕುಗಳನ್ನು ಮಾಡಿಕೊಂಡಿದ್ದಾರೆ. ಗ್ರಾಮ ಸಭೆಗಳನ್ನು ಮಾಡಿ ಅದರಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಗ್ರಾಮ ಬ್ಯಾಂಕುಗಳು ಸ್ಥಾಪನೆಯಾಗಿವೆ. ಹೀಗೆ, ಪತ್ಥಲ್​ಗಡ್ ಜನಾಂದೋಲನ ಮೂಲಕ ಬುಡಕಟ್ಟು ಪ್ರದೇಶಗಳನ್ನು ಮುಖ್ಯವಾಹಿನಿಯಿಂದ ವಿಮುಖವಾಗಿಸಿ ಪ್ರತ್ಯೇಕವಾಗಿ ಬೆಳೆಯುವಂಥ ಪ್ರಯತ್ನಗಳು ನಡೆಯುತ್ತಿವೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪತ್ಥಲ್​ಗಡಿ ಹೋರಾಟಗಾರರ ಮೇಲೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈಗ ಹೇಮಂತ್ ಸೋರೆನ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಈ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದೆ. ಸೋರೆನ್ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ಟೀಕೆ ಮಾಡಿವೆ. ಈ ಪತ್ಥಲ್​ಗಡ್ ಹೋರಾಟಕ್ಕೆ ಮಾವೋವಾದಿ ಶಕ್ತಿಗಳು ಕೈಜೋಡಿಸಿವೆ ಎಂಬ ಆರೋಪಗಳೂ ಇವೆ.

ಮೂಲಗಳ ಪ್ರಕಾರ, ಪತ್ಥಲ್​ಗಡ್ ಹೋರಾಟಗಾರರಿಂದ ಏಳು ಮಂದಿಯ ಹತ್ಯೆಯಾದ ಘಟನೆಗೆ ಎಸ್​ಐಟಿಯಿಂದ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

(ವರದಿ: ಸುಹಾಸ್ ಮುನ್ಷಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ