News18 India World Cup 2019

ನಿವೃತ್ತಿ ನಂತರ ಬಿಜೆಪಿ ಪರ ಪ್ರಚಾರಕ್ಕೆ ಅವಕಾಶ ಕೋರಿದ ಐಪಿಎಸ್​ ಅಧಿಕಾರಿ

news18
Updated:August 28, 2018, 4:44 PM IST
ನಿವೃತ್ತಿ ನಂತರ ಬಿಜೆಪಿ ಪರ ಪ್ರಚಾರಕ್ಕೆ ಅವಕಾಶ ಕೋರಿದ ಐಪಿಎಸ್​ ಅಧಿಕಾರಿ
news18
Updated: August 28, 2018, 4:44 PM IST
ನ್ಯೂಸ್​ 18 ಕನ್ನಡ

ಲಕ್ನೋ (ಆ.28): ಉತ್ತರ ಪ್ರದೇಶದ ಐಎಎಸ್​ ಅಧಿಕಾರಿಯೊಬ್ಬರು ತಾವು ನಿವೃತ್ತಿಯಾದ ಬಳಿಕ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಅವಕಾಶ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಬಳಿ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಗೃಹರಕ್ಷಕ ದಳದ ಮಹಾನಿರ್ದೇಶಕ ಸೂರ್ಯ ಕುಮಾರ್​ ಶುಕ್ಲಾ ಈ ರೀತಿಯ ಬೇಡಿಕೆ ಇಟ್ಟಿರುವ ಅಧಿಕಾರಿ. ನಿವೃತ್ತಿ ಅಂಚಿನಲ್ಲಿರುವ ಶುಕ್ಲಾ ಯೋಗಿ ಆದಿತ್ಯನಾಥ್​ ಕಾರ್ಯ ವೈಖರಿಯನ್ನು ಮೆಚ್ಚಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಸರ್ಕಾರದ ಭಾಗವಾಗಿ ಮುಂದುವರೆಯುವ ಇಚ್ಚೇ ಇದ್ದು, ಇದ್ದಕ್ಕಾಗಿ ಕಚೇರಿಯ ಲೆಟರ್​ಹೆಡ್​ನಲ್ಲಿಯೇ ಯೋಗಿಗೆ ಪತ್ರ ಬರೆದಿದ್ದಾರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆತ ಇದರಲ್ಲಿ ತಪ್ಪೇನಿಲ್ಲ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ಐಎಎಸ್​ ಅಧಿಕಾರಿಯೊಬ್ಬರು ಒಂದು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವುದು ತಪ್ಪು ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.ಈ ಹಿಂದೆ ಶುಕ್ಲಾ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಬಹಿರಂಗವಾಗಿಯೇ ಬೆಂಬಲ ಘೋಷಣೆ ಮಾಡಿದ್ದರು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...