• Home
 • »
 • News
 • »
 • national-international
 • »
 • Shraddha Walker: ಶ್ರದ್ಧಾ ವಾಕರ್ ಹತ್ಯಾಕಾಂಡದ ಎಫೆಕ್ಟ್; ಬ್ಯಾಚುಲರ್​ಗಳಿಗೆ ಸಿಕ್ತಿಲ್ಲ ಮನೆ

Shraddha Walker: ಶ್ರದ್ಧಾ ವಾಕರ್ ಹತ್ಯಾಕಾಂಡದ ಎಫೆಕ್ಟ್; ಬ್ಯಾಚುಲರ್​ಗಳಿಗೆ ಸಿಕ್ತಿಲ್ಲ ಮನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮತ್ತೆ ಶ್ರದ್ಧಾ ವಾಕರ್ ಕೊಲೆಯಂತಹ ಪ್ರಕರಣ ನಡೆಯುವ ಅಪಾಯ ಅವಿವಾಹಿತರಿಗೆ ಮನೆ ಬಾಡಿಗೆಗೆ ಕೊಡಲು ಹಿಂದೇಟು ಹಾಕುವಂತೆ ಮಾಡುತ್ತಿದೆ.

 • News18 Kannada
 • 2-MIN READ
 • Last Updated :
 • Delhi, India
 • Share this:

ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದಿಂದ (Shraddha Walker Murder Case) ಬ್ಯಾಚುಲರ್​ಗಳು ಸಮಸ್ಯೆ ಎದುರಿಸುವಂತಾಗಿದೆ. ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಡದ ತರುಣ ತರುಣಿಯರು ದೆಹಲಿಯಲ್ಲಿ ಬಾಡಿಗೆ ಮನೆ ಹುಡುಕಲು ಹೆಣಗಾಡುತ್ತಿದ್ದಾರೆ. ಶ್ರದ್ಧಾ ವಾಕರ್ ಹತ್ಯಾಕಾಂಡದಿಂದ ಬೆಚ್ಚಿಬಿದ್ದಿರುವ ಮನೆ ಮಾಲೀಕರು (Home Owner's) ಅವಿವಾಹಿತರಿಗೆ ಮನೆ ಬಾಡಿಗೆಗೆ ಕೊಡಲು ಹಿಂಜರಿಯುತ್ತಿದ್ದಾರೆ. ಮತ್ತೆ ಶ್ರದ್ಧಾ ವಾಕರ್ ಕೊಲೆಯಂತಹ ಪ್ರಕರಣ ನಡೆಯುವ ಅಪಾಯ ಅವಿವಾಹಿತರಿಗೆ ಮನೆ ಬಾಡಿಗೆಗೆ ಕೊಡಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಇದರಿಂದ ನೋಯ್ಡಾದಲ್ಲಿ ಹೌಸಿಂಗ್ ಸೊಸೈಟಿಗಳಿಂದ ಬ್ಯಾಚುಲರ್‌ಗಳನ್ನು (Bachelors) ದೂರವಿಡಲಾಗುತ್ತಿದೆ.


ನೋಯ್ಡಾದ (Noida) ಅಂತರಿಕ್ಷ್ ಸೊಸೈಟಿಯ ಪ್ರವೇಶ ದ್ವಾರದಲ್ಲೇ ಬ್ಯಾಚುಲರ್‌ಗಳನ್ನು ದೂರವಿಡುವ ಕುರಿತು ಪೋಸ್ಟರ್ ಅಂಟಿಸಲಾಗಿದೆ. ನೋಯ್ಡಾದ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್‌ನ ನಿವಾಸಿಗಳ ಕಲ್ಯಾಣ ಸಂಘವು ತಮ್ಮ ಫ್ಲಾಟ್‌ಗಳನ್ನು ಬ್ಯಾಚುಲರ್‌ಗಳಿಗೆ ಬಾಡಿಗೆಗೆ ನೀಡದಂತೆ ಮನೆ ಮಾಲೀಕರಿಗೆ ನೋಟಿಸ್ ನೀಡಿದೆ.


ಅವಿವಾಹಿತರನ್ನು ಮನೆಯಿಂದ ದೂರ ಇಡೋದೇ ಬೆಟರ್!
ಇತ್ತೀಚಿಗೆ ನಡೆಯುತ್ತಿರುವ ಶ್ರದ್ಧಾ ವಾಕರ್ ಹತ್ಯೆ ಮತ್ತು ಅಂತಹ ಪ್ರಕರಣಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಈ ಘಟನೆಗಳಿಗೆ ಯಾರು ಹೊಣೆ? ಈ ಘಟನೆಗಳಿಗೆ ವಸತಿ ಗೃಹದ ಭದ್ರತಾ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಆದ್ದರಿಂದ ನಾವು ಈಗಾಗಲೇ ಅವಿವಾಹಿತರಿಗೆ ಮನೆ ನೀಡದಿರುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಆರ್‌ಡಬ್ಲ್ಯೂಎ ಅಧ್ಯಕ್ಷ ಉದಯಭಾನ್ ಸಿಂಗ್ ಟಿಯೋಟಿಯಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


ಹೌಸಿಂಗ್ ಸೊಸೈಟಿಗಳಿಂದ ಕಾನೂನು ಉಲ್ಲಂಘನೆ?
ಆದರೆ ಯಾವುದೇ ಹೌಸಿಂಗ್ ಸೊಸೈಟಿಯು ಇಂತಹ ಯಾವುದೇ ಸೂಚನೆಯನ್ನು ನೀಡಲು ಸಾಧ್ಯವಿಲ್ಲ. ಹಾಗೇನಾದ್ರೂ ಇಂತಹ ಸೂಚನೆ ನೀಡಿದರೂ ಅದು ಕಾನೂನುಬಾಹಿರವಾಗಿದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.


ಅಂತಹ ಹೌಸಿಂಗ್ ಸೊಸೈಟಿಗಳ ನಿವಾಸಿಗಳು ತಮ್ಮ ನೆರೆಹೊರೆಯಲ್ಲಿ ಬ್ಯಾಚುಲರ್‌ಗಳು ವಾಸವಿರಬಾರದು ಎಂದು ಬಯಸದಿರಲು ವಿವಿಧ ಕಾರಣಗಳನ್ನು ಉಲ್ಲೇಖಿಸುತ್ತಾರೆ. ಬ್ಯಾಚುಲರ್​ಗಲು ಸ್ವಾತಂತ್ರ್ಯವನ್ನು ಹಿಗ್ಗಾಮುಗ್ಗಾ ಬಳಸಿಕೊಳ್ಳುತ್ತಾರೆ ಎಂಬುದು ಹೌಸಿಂಗ್ ಸೌಸೈಟಿಗಳ ದೂರಾಗಿದೆ.


ಹಾಸ್ಟೆಲ್​ಗಳಲ್ಲಿ ಇರೋಕೆ ಏಕೆ ಹಿಂಜರಿಕೆ?
ಮದುವೆಯಾಗದ ಹುಡುಗರು ಸುತ್ತಮುತ್ತಲಿನ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ಬಂದಿರುತ್ತಾರೆ. ಹಾಸ್ಟೆಲ್‌ಗಳಲ್ಲಿ ತುಂಬಾ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅವರು ಸ್ವತಂತ್ರವಾಗಿ ಮನೆ ಮಾಡಲು ಯೋಚಿಸುತ್ತಾರೆ. ಅಂದರೆ ಸ್ವಾತಂತ್ರ್ಯದ ಹಂಬಲದಿಂದಲೇ ಅವರು ಮನೆ ಮಾಡುತ್ತಾರೆ ಎಂದೇ ಅರ್ಥವಲ್ಲವೇ ಎಂಬುದು ಹೌಸಿಂಗ್ ಸೊಸೈಟಿ ಸದಸ್ಯರ ದೂರಾಗಿದೆ. ಸಮಸ್ಯೆ ಏನೆಂದರೆ ಶುಕ್ರವಾರ ಬಂದರೆ ಅಥವಾ ವಾರಾಂತ್ಯದ ದಿನಗಳಂದು ಹೆಚ್ಚು ಪಾರ್ಟಿ ಮಾಡುತ್ತಾರೆ. ಇದರಿಂದ ಹೌಸಿಂಗ್ ಸೊಸೈಟಿಗೆ ವಿವಿಧ ರೀತಿಯ ಜನರು ಬಂದು ಗಲಾಟೆ ಮಾಡುತ್ತಾರೆ, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: