ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾ ವಾಕರ್ನ್ನು (Shraddha Walker) ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟ ಬಳಿಕ ಡೇಟಿಂಗ್ ಮಾಡಿದ (Dating App)ಮಹಿಳೆಯನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು ಕತ್ತರಿಸಿದ ದೇಹದ ಭಾಗಗಳು ಇನ್ನೂ ತನ್ನ ರೆಫ್ರಿಜರೇಟರ್ನಲ್ಲಿ ಇರುವಾಗಲೇ ಅಫ್ತಾಬ್ (Aftab Amin Poonawalla) ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್ಗೆ ಕರೆತಂದಿದ್ದ ಎಂದು ದೆಹಲಿ ಪೊಲೀಸರು (Delhi Police) ತಿಳಿಸಿದ್ದಾರೆ. ಅಲ್ಲದೇ ಈ ಮಹಿಳೆಯನ್ನು ಸಂಪರ್ಕಿಸಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದರೆ.
ಆಫ್ತಾಬ್ ಮೊಬೈಲ್ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕವೇ ಈ ಮಹಿಳೆಯನ್ನು ಸಹ ಪರಿಚಯ ಮಾಡಿಕೊಂಡಿದ್ದ. ಇದೇ ಡೇಟಿಂಗ್ ಆ್ಯಪ್ ಮೂಲಕವೇ ಅಫ್ತಾಬ್ ಶ್ರದ್ಧಾಳನ್ನು ಪರಿಚಯ ಮಾಡಿಕೊಂಡಿದ್ದ.
ಡೇಟಿಂಗ್ ಆ್ಯಪ್ ಪ್ರಧಾನ ಕಚೇರಿಗೆ ಪತ್ರ
ದೆಹಲಿ ಪೊಲೀಸರು ಡೇಟಿಂಗ್ ಆ್ಯಪ್ ಬಂಬಲ್ನ ಅಮೆರಿಕದ ಪ್ರಧಾನ ಕಛೇರಿಗೆ ಪತ್ರ ಬರೆದು ಆಫ್ತಾಬ್ನ ವಿವರಗಳನ್ನು ಕೋರಿದ್ದಾರೆ. ಇದರ ನಡುವೆಯೇಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್ಎ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಶನಿವಾರ ಹೇಳಿದ್ದಾರೆ.
ಈ ಹಿಂದೆ, ವಿಧಿವಿಜ್ಞಾನ ತಂಡಗಳು ಚತ್ತರ್ಪುರದ ಬಾಡಿಗೆ ವಸತಿಗೃಹದ ಬಾತ್ರೂಮ್ನಲ್ಲಿ ರಕ್ತದ ಕಲೆಗಳನ್ನು ಪತ್ತೆ ಮಾಡಿದ್ದಾರೆ. ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ (ಸಿಎಫ್ಎಸ್ಎಲ್) ಮತ್ತು ದೆಹಲಿ ಪೊಲೀಸರ ತಂಡಗಳಿಂದ ತನಿಖೆ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಹೆಂಚುಗಳ ನಡುವೆ ರಕ್ತದ ಕಲೆಗಳು
"ಹೆಂಚುಗಳ ನಡುವೆ ರಕ್ತದ ಕಲೆಗಳು ಕಂಡುಬಂದಿವೆ. ರನ್ನಿಂಗ್ ಶವರ್ ಅಡಿಯಲ್ಲಿ ಆಕೆಯ ದೇಹವನ್ನು ಬಾತ್ರೂಮ್ನಲ್ಲಿ ಕತ್ತರಿಸಿರುವದನ್ನು ಆಫ್ತಾಬ್ ಈಗಾಗಲೇ ತಪ್ಪೊಪ್ಪಿಕೊಂಡಿದ್ದಾನೆ. ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ. ಅಂಬೇಡ್ಕರ್ ಆಸ್ಪತ್ರೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಮೂಲಗಳ ಪ್ರಕಾರ ಅಫ್ತಾಬ್ನ ನಾರ್ಕೋ ಪರೀಕ್ಷೆ ಸೋಮವಾರ ನಡೆಯುವ ಸಾಧ್ಯತೆಯಿದೆ.
ಈ ಹಿಂದೆ ಅಡುಗೆ ಮನೆಯಲ್ಲೂ ರಕ್ತದ ಕಲೆಗಳು ಕಂಡು ಬಂದಿದ್ದವು. ಅಫ್ತಾಬ್ನನ್ನು ದೆಹಲಿ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಕೊಲೆ ಮಾಡಿ ಹಲವು ವಸ್ತುಗಳ ಆರ್ಡರ್!
ದೆಹಲಿ ಪೊಲೀಸರು ಗುಡ್ಲಕ್ ಪ್ಯಾಕರ್ಸ್ ಮತ್ತು ಮೂವರ್ಸ್ನೊಂದಿಗೆ ಸಂಬಂಧ ಹೊಂದಿದ್ದ ಗೋವಿಂದ್ ಯಾದವ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ದೆಹಲಿ ಪೊಲೀಸ್ ತಂಡವು ನಯಾನಗರ ಪೊಲೀಸ್ ಠಾಣೆಯಲ್ಲಿ ಗೋವಿಂದ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಮೇ 18 ರಂದು ಶ್ರದ್ಧಾ ವಾಕರ್ ಕೊಲೆಯಾದ ಸುಮಾರು 18 ದಿನಗಳ ನಂತರ ಜೂನ್ 5 ರಂದು ಅಫ್ತಾಬ್ ಮುಂಬೈನಿಂದ ದೆಹಲಿಗೆ ಕೆಲವು ಸರಕುಗಳನ್ನು ಆರ್ಡರ್ ಮಾಡಿದ್ದ ಎಂದು ಹೇಳಲಾಗಿದೆ. ಅದರ ರಶೀದಿಯೂ ದೆಹಲಿ ಪೊಲೀಸರ ಕೈ ಸೇರಿದೆ.
ಇದನ್ನೂ ಓದಿ: Azamgarh: ಶ್ರದ್ಧಾ ಮಾದರಿಯಂತೆ ಮತ್ತೊಂದು ಹತ್ಯೆ: ಮಹಿಳೆಯನ್ನು 8 ಪೀಸ್ ಮಾಡಿದ ಪ್ರಿಯಕರ!
ದೆಹಲಿ ಪೊಲೀಸರು ಸ್ವೀಕರಿಸಿದ ರಶೀದಿ ಜೂನ್ 5ರದ್ದಾಗಿದೆ. ಮುಂಬೈನ ವಸಾಯ್ ನಿಂದ ದೆಹಲಿಗೆ ತಂದು ಅಫ್ತಾಬ್ ಗೆ ನೀಡಲಾಗಿದ್ದ ಒಟ್ಟು 37 ವಸ್ತುಗಳ ಹೆಸರು ಇದರಲ್ಲಿದೆ. ಶ್ರದ್ಧಾ ವಾಕರ್ರನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಈ ವಸ್ತುಗಳನ್ನು ಆರ್ಡರ್ ಮಾಡಿದ್ದ ಎನ್ನಲಾಗಿದೆ. ರಶೀದಿಯೂ ಅಫ್ತಾಬ್ ಹೆಸರಿನಲ್ಲಿದೆ. ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಈ ವಸ್ತುಗಳನ್ನು ಆರ್ಡರ್ ಮಾಡಿರುವುದು ರಶೀದಿಯಿಂದ ಸ್ಪಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ