ಕೋರ್ಟ್​ ಆದೇಶಕ್ಕೆ ಒಂದು ಬೆಲೆ ಬೇಡವೇ?: ಟಿಲಿಕಾಂ ಕಂಪನಿಗಳ ಮೇಲೆ ಸುಪ್ರೀಂ ಕೆಂಡಾಮಂಡಲ

ನಾವು ನ್ಯಾಯಾಲಯವನ್ನೇ ಮುಚ್ಚಿಬಿಡಬೇಕಾ? ಈ ದೇಶದಲ್ಲಿ ಕಾನೂನು ಏನಾದರೂ ಉಳಿದಿದೆಯಾ? ಒಬ್ಬ ಸರ್ಕಾರಿ ಅಧಿಕಾರಿ ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆ ನೀಡುವುದೆಂದರೆ ಏನು? ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಕೇಂದ್ರವನ್ನು ಪ್ರಶ್ನಿಸಿದ್ದಾರೆ.

news18
Updated:February 14, 2020, 2:13 PM IST
ಕೋರ್ಟ್​ ಆದೇಶಕ್ಕೆ ಒಂದು ಬೆಲೆ ಬೇಡವೇ?: ಟಿಲಿಕಾಂ ಕಂಪನಿಗಳ ಮೇಲೆ ಸುಪ್ರೀಂ ಕೆಂಡಾಮಂಡಲ
ಸುಪ್ರೀಂ ಕೋರ್ಟ್​
  • News18
  • Last Updated: February 14, 2020, 2:13 PM IST
  • Share this:
ನವದೆಹಲಿ(ಫೆ. 14): ನ್ಯಾಯಾಲಯ ಆದೇಶ ಮಾಡಿದ್ದರೂ ಒಂದೂ ರೂಪಾಯಿ ದಂಡ ಕಟ್ಟದೆ ನಿರುಮ್ಮಳವಾಗಿರುವ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತಾದರೂ ಕಿಮ್ಮತ್ತು ಕೊಡದೆ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ವ್ಯಗ್ರಗೊಂಡಿರುವ ಸುಪ್ರೀಂ ಕೋರ್ಟ್ ಈ ಟೆಲಿಕಾಂ ಕಂಪನಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದೆ. ವೊಡಾಫೋನ್ ಐಡಿಯಾ, ಭಾರ್ತಿ ಏರ್​ಟೆಲ್ ಮೊದಲಾದ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಸುಮಾರು ದೊಡ್ಡ ಮೊತ್ತದ ಎಜಿಆರ್ ಹಣವನ್ನು ಬಾಕಿ ಉಳಿಸಿಕೊಂಡಿರುವ ಪ್ರಕರಣ ಇದಾಗಿದೆ.

ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯ (ಡಿಓಟಿ) ಟೆಲಿಕಾಂ ಆದಾಯ ಹಂಚಿಕೆ (ಎಜಿಆರ್) ನಿಯಮದ ಪ್ರಕಾರ ವಿವಿಧ ಟೆಲಿಕಾಂ ಕಂಪನಿಗಳು 1.5 ಲಕ್ಷ ಕೋಟಿ ಮೊತ್ತದಷ್ಟು ಹಣ ಪಾವತಿಸಬೇಕಾಗುತ್ತದೆ. ಆದರೆ, ಹಲವು ವರ್ಷಗಳಿಂದ ಟೆಲಿಕಾಂ ಕಂಪನಿಗಳು ಈ ಹಣ ಕಟ್ಟದೆ ಸುಮ್ಮನಿದ್ದವು. ಕಳೆದ ವರ್ಷದ ಅಕ್ಟೋಬರ್​ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ತೀರ್ಪು ನೀಡಿ ಟೆಲಿಕಾಂ ಕಂಪನಿಗಳಿಗೆ ಬಾಕಿ ಹಣ ಪಾವತಿಸುವಂತೆ ಆದೇಶಿಸಿತು. ಅದರಂತೆ, ವೊಡಾಫೋನ್ ಐಡಿಯಾ ಸಂಸ್ಥೆ 50,000 ಕೋಟಿ ರೂ ಹಾಗೂ ಭಾರ್ತಿ ಏರ್​ಟೆಲ್ 35,586 ಕೋಟಿ ರೂ ಬಾಕಿ ಹಣ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ದಯವಿಟ್ಟು ನಿಮ್ಮ ಹಣ ತೆಗೆದುಕೊಂಡುಬಿಡಿ: ಭಾರತೀಯ ಬ್ಯಾಂಕುಗಳಿಗೆ ಮತ್ತೆ ದುಂಬಾಲು ಬಿದ್ದ ವಿಜಯ್ ಮಲ್ಯ

ತಿಂಗಳುಗಾದರೂ ಹಣ ಪಾವತಿ ಮಾಡದೇ ಹೋದಾಗ ಮಾರ್ಚ್ 17ರಂದು ವಿವಿಧ ಟೆಲಿಕಾಂ ಕಂಪನಿಗಳ ಉನ್ನತಾಧಿಕಾರಿಗಳನ್ನು ಕರೆಸಿದ ಸುಪ್ರೀಂ ನ್ಯಾಯಪೀಠ, ಕೋರ್ಟ್ ಆದೇಶ ಪಾಲಿಸಲು ಇದು ಕೊನೆಯ ಅವಕಾಶ. ಪಾಲಿಸದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೂ ಕೂಡ ಟೆಲಿಕಾಂ ಕಂಪನಿಗಳು ತಮ್ಮ ಹಠ ಮುಂದುವರಿಸಿವೆ.

ಅಧಿಕಾರಿಯ ಉದ್ಧಟತನಕ್ಕೆ ಸುಪ್ರೀಂ ವ್ಯಗ್ರ:

ಟೆಲಿಕಾಂ ಕಂಪನಿಗಳ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಅನ್ವಯ ಆಗದಂತೆ ದೂರಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಡೆಯ ಆದೇಶ ಹೊರಡಿಸಿದ್ದರು. ಈ ವಿಚಾರವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಕೋಪೋದ್ರಿಕ್ತಗೊಳಿಸಿದೆ. ಆ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ನೋಟೀಸ್ ನೀಡಲಾಗಿದೆ. ತನ್ನ ವರ್ತನೆ ಬಗ್ಗೆ ಉತ್ತರ ನೀಡುವಂತೆ ಆತನಿಗೆ ಸೂಚಿಸಲಾಗಿದೆ. ಹಾಗೆಯೇ, ಸಂಜೆಯಷ್ಟರಲ್ಲಿ ಆತ ತನ್ನ ಆದೇಶ ಹಿಂಪಡೆಯದಿದ್ದರೆ ಜೈಲಿಗೆ ಹೋಗಲು ಸಿದ್ಧವಾಗಬೇಕಾಗುತ್ತದೆ ಎಂದು ನ್ಯಾ| ಎಸ್.ಎ. ನಜೀರ್ ಮತ್ತು ನ್ಯಾ| ಎಂಆರ್ ಶಾ ಅವರಿದ್ದ ನ್ಯಾಯಪೀಠವು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ.

ಇದನ್ನೂ ಓದಿ: ರೈಲಿನಲ್ಲಿ ಹೆಂಡತಿ ಮಗುವಿಗೆ ಸೀಟು ಕೇಳಿದ್ದೇ ತಪ್ಪಾಗೋಯ್ತಾ?; ಸಾಯೋ ಹಾಗೆ ಥಳಿಸಿದ ಕ್ರೂರಿಗಳು“ನಾವು ಸರ್ವೋಚ್ಚ ನ್ಯಾಯಾಲಯವನ್ನೇ ಮುಚ್ಚಿಬಿಡಬೇಕಾ? ಈ ದೇಶದಲ್ಲಿ ಕಾನೂನು ಎಂಬುದು ಏನಾದರೂ ಉಳಿದಿದೆಯಾ? ಒಬ್ಬ ಸರ್ಕಾರಿ ಅಧಿಕಾರಿ ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆ ನೀಡುವುದು ಹೇಗೆ? ಆತನ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ?” ಎಂದು ಸುಪ್ರೀಮ್ ನ್ಯಾಯಮೂರ್ತಿಗಳು ಕೇಳಿದರು.

“ಇದು ಹಣದ ಮದ ಇದ್ದಂತಿಲ್ಲವೇ? ಯಾರು ಇದನ್ನು ಪ್ರಾಯೋಜಿಸುತ್ತಿದ್ದಾರೆ? ಯಾರ ಪರವಾಗಿ ಅವರು ಈ ಕೆಲಸ ಮಾಡಿದರು. ದಂಡ ಪಾವತಿ ಮಾಡಬಾರದೆಂದಿರುವವರ ಅಣತಿಯಂತೆ ಈ ಅಧಿಕಾರಿ ಕೆಲಸ ಮಾಡಿರಬಾರದೇಕೆ? ಅವರ ವಿರುದ್ಧ ನಾವು ನ್ಯಾಯಾಂಗ ನಿಂದನೆ ವಿಚಾರಣೆ ಜಾರಿ ಮಾಡಲಿದ್ದೇವೆ.

“ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಮ್ಮ ಪ್ರಜ್ಞೆಯನ್ನು ಘಾಸಿಗೊಳಿಸಿದೆ. ಟೆಲಿಕಾಂ ಆದಾಯ ಹಂಚಿಕೆ ಪ್ರಕರಣದಲ್ಲಿ ತಮ್ಮ ತೀರ್ಪು ಮರುಪರಿಶೀಲಿಸಲು ಸಲ್ಲಿಸಿದ್ದ ಮೇಲ್ಮನವಿಯನ್ನು ನಾವು ರದ್ದು ಮಾಡಿದ್ದೆವು. ಇಷ್ಟಾದರೂ ಒಂದು ನಯಾಪೈಸೆ ಕಟ್ಟಿಲ್ಲ” ಎಂದು ನ್ಯಾಯಪೀಠ ಆಕ್ರೋಸ ವ್ಯಕ್ತಪಡಿಸಿತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ