HOME » NEWS » National-international » SHOTS FIRED AT AAP MLA NARESH YADAV CONVOY AFTER DELHI ELECTION RESULT VOLUNTEER KILLED SCT

ಗೆಲುವಿನ ಸಂಭ್ರಮದಲ್ಲಿದ್ದ ಆಪ್ ಶಾಸಕನ ಕಾರಿನ ಮೇಲೆ ಗುಂಡಿನ ದಾಳಿ; ಕಾರ್ಯಕರ್ತ ಸಾವು

ದೆಹಲಿಯಲ್ಲಿ ಜಯಭೇರಿ ಭಾರಿಸಿದ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್ ದೇವಸ್ಥಾನದಿಂದ ವಾಪಾಸ್ ಬರುವಾಗ ಗುಂಡಿನ ದಾಳಿ ನಡೆದಿದೆ. ಬೆಂಗಾವಲುಪಡೆಯ ಸಿಬ್ಬಂದಿಗೆ ಗಂಭೀರ ಗಾಯವಾಗಿದ್ದು, ಕಾರ್ಯಕರ್ತನೋರ್ವ ಸಾವನ್ನಪ್ಪಿದ್ದಾನೆ.

Sushma Chakre | news18-kannada
Updated:February 12, 2020, 9:10 AM IST
ಗೆಲುವಿನ ಸಂಭ್ರಮದಲ್ಲಿದ್ದ ಆಪ್ ಶಾಸಕನ ಕಾರಿನ ಮೇಲೆ ಗುಂಡಿನ ದಾಳಿ; ಕಾರ್ಯಕರ್ತ ಸಾವು
ಆಪ್ ಶಾಸಕ ನರೇಶ್ ಯಾದವ್
  • Share this:
ನವದೆಹಲಿ (ಫೆ. 12): ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷ ಭಾರೀ ಅಂತರದಿಂದ ಗೆಲುವು ಕಂಡಿದೆ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಬಳಿಕ ನೂತನ ಆಪ್ ಶಾಸಕ ನರೇಶ್ ಯಾದವ್ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬರುವಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಆಮ್ ಆದ್ಮಿ ಶಾಸಕನ ಬೆಂಗಾವಲು ಪಡೆ ಸಿಬ್ಬಂದಿ ಗಂಭೀರ ಗಾಯಗಳಾಗಿದ್ದು, ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾರೆ.

ಮಹರೌಲಿ ಕ್ಷೇತ್ರದಿಂದ ಆಪ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಶ್ ಯಾದವ್ ಭರ್ಜರಿ ಗೆಲುವು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಕ್ಷೇತ್ರದ ದೇವಾಲಯಗಳಿಗೆ ತೆರಳಿ, ದರ್ಶನ ಪಡೆದು ಬರುವಾಗ ಈ ಅವಘಡ ಸಂಭವಿಸಿದೆ. ದೆಹಲಿಯ ಕೃಷ್ಣಾಘಡ್ ಬಳಿ ನರೇಶ್ ಯಾದವ್ ತಮ್ಮ ಬೆಂಗಾವಲು ಪಡೆಯ ವಾಹನಗಳೊಂದಿಗೆ ವಾಪಾಸಾಗುತ್ತಿದ್ದಾಗ ಅಪರಿಚಿತರ ಗುಂಪೊಂದು 4 ಸುತ್ತು ಗುಂಡು ಹಾರಿಸಿತ್ತು. ಈ ಗುಂಡಿನ ದಾಳಿಯಲ್ಲಿ ಅಶೋಕ್ ಮನ್ ಎಂಬ ಆಪ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಎಎಪಿ ಭರ್ಜರಿ ಗೆಲುವು; ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಈ ಬಗ್ಗೆ ಆಮ್ ಆದ್ಮಿ ಪಕ್ಷ್ದದ ನಾಯಕ ಸಂಜಯ ಸಿಂಗ್ ಟ್ವೀಟ್ ಮಾಡಿದ್ದಾರೆ. ದೇವಸ್ಥಾನದಿಂದ ವಾಪಾಸ್ ಬರುವಾಗ ಆಪ್ ಶಾಸಕ ನರೇಶ್ ಯಾದವ್ ಮತ್ತು ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ. ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಇನ್ನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಪ್ ಶಾಸಕ ನರೇಶ್ ಯಾದವ್, ಈ ಘಟನೆಯಿಂದ ಬಹಳ ನೋವಾಗಿದೆ. ಇಂತಹ ದುರಾದೃಷ್ಟಕರ ಘಟನೆ ನಡೆಯಬಾರದಿತ್ತು. ಈ ದಾಳಿಯ ಹಿಂದಿನ ಉದ್ದೇಶ ಏನೆಂಬುದು ನನಗೆ ಗೊತ್ತಿಲ್ಲ. ನಾವು ಕಾರಿನಲ್ಲಿ ಬರುತ್ತಿದ್ದಾಗ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲವೂ ನಡೆದುಹೋಯಿತು. ನನ್ನ ಕಾರಿನ ಮೇಲೂ ಗುಂಡಿನ ದಾಳಿ ನಡೆಸಿದರು. ಪೊಲೀಸರು ಈ ಘಟನೆ ಬಗ್ಗೆ ಸರಿಯಾದ ತನಿಖೆ ನಡೆಸಿದರೆ ಅಪರಾಧಿಗಳನ್ನು ಪತ್ತೆಹಚ್ಚಲು ಸಾಧ್ಯವಿದೆ ಎಂದು ನನಗೆ ನಂಬಿಕೆಯಿದೆ ಎಂದಿದ್ದಾರೆ.ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 70ಕ್ಕೆ 62 ಸ್ಥಾನಗಳನ್ನು ಪಡೆಯುವ ಮೂಲಕ ವಿಜಯಪತಾಕೆ ಹಾರಿಸಿದೆ. ಬಿಜೆಪಿ ಕೇವಲ 8 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ ದೆಹಲಿಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.
Youtube Video

 

 
First published: February 12, 2020, 9:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories