HOME » NEWS » National-international » SHORT CIRCUIT AT TELANGANA SRISAILAM POWER STATION HYDROELECTRIC PLANT TRAPS 9 STAFF SCT

Srisailam Fire Accident: ತೆಲಂಗಾಣದ ಶ್ರೀಶೈಲಂ ಪವರ್​ ಸ್ಟೇಷನ್​ನಲ್ಲಿ ಶಾರ್ಟ್​ ಸರ್ಕ್ಯೂಟ್; ಬೆಂಕಿಯಲ್ಲಿ ಸಿಲುಕಿದ 9 ಸಿಬ್ಬಂದಿ

Srisailam Power Plant: ಶ್ರೀಶೈಲಂ ಪವರ್ ಸ್ಟೇಷನ್​ನ 6 ಯೂನಿಟ್​ಗಳಿಗೂ ಬೆಂಕಿ ಹರಡುತ್ತಿದ್ದು, ಎಲ್ಲೆಡೆ ಹೊಗೆ ತುಂಬಿಕೊಂಡಿದೆ. ಐವರು ಇಂಜಿನಿಯರ್​ಗಳು, ಇಬ್ಬರು ತಂತ್ರಜ್ಞರು ಸೇರಿದಂತೆ ಒಟ್ಟು 7 ಮಂದಿ ಬೆಂಕಿಯಲ್ಲಿ ಸಿಲುಕಿದ್ದಾರೆ.

Sushma Chakre | news18-kannada
Updated:August 21, 2020, 9:16 AM IST
Srisailam Fire Accident: ತೆಲಂಗಾಣದ ಶ್ರೀಶೈಲಂ ಪವರ್​ ಸ್ಟೇಷನ್​ನಲ್ಲಿ ಶಾರ್ಟ್​ ಸರ್ಕ್ಯೂಟ್; ಬೆಂಕಿಯಲ್ಲಿ ಸಿಲುಕಿದ 9 ಸಿಬ್ಬಂದಿ
ಶ್ರೀಶೈಲಂ ಹೈಡ್ರೋಎಲೆಕ್ಟ್ರಿಕ್ ಪವರ್ ಸ್ಟೇಷನ್​ನಲ್ಲಿ ಬೆಂಕಿ ದುರಂತ ಸಂಭವಿಸಿದೆ
  • Share this:
ತೆಲಂಗಾಣ (ಆ. 21): ತೆಲಂಗಾಣದ ಶ್ರೀಶೈಲಂ ಹೈಡ್ರೋಎಲೆಕ್ಟ್ರಿಕ್ ಪವರ್ ಸ್ಟೇಷನ್​ನಲ್ಲಿ ಇಂದು ಮುಂಜಾನೆ ಬೆಂಕಿ ದುರಂತ ಸಂಭವಿಸಿದೆ. ಈ ಅವಘಡದಲ್ಲಿ 9 ಸಿಬ್ಬಂದಿ ಸಿಲುಕಿದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಡ್ಯಾಂ ಕೆನೆಲ್​ನಲ್ಲಿ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಐವರು ಇಂಜಿನಿಯರ್​ಗಳು, ಇಬ್ಬರು ತಂತ್ರಜ್ಞರು ಸೇರಿದಂತೆ ಒಟ್ಟು 7 ಮಂದಿ ಬೆಂಕಿಯಲ್ಲಿ ಸಿಲುಕಿದ್ದಾರೆ. ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಪ್ಯಾನೆಲ್ ಬೋರ್ಡ್​ಗೆ ಬೆಂಕಿ ತಗುಲಿ, ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ದುರಂತದ ವೇಳೆ ಕೆನೆಲ್​ನಲ್ಲಿದ್ದ 10 ಮಂದಿ ಟನೆಲ್​ನಿಂದ ಹೊರಗೆ ಓಡಿ, ಬಚಾವಾಗಿದ್ದಾರೆ. ಉಳಿದ 7 ಮಂದಿಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಇದನ್ನೂ ಓದಿ: Ram Mandir: 2023ರಲ್ಲಿ ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕಲ್ಲುಗಳಿಂದಲೇ ಕಟ್ಟಲಾದ ಬೃಹತ್ ರಾಮ ಮಂದಿರ!

ಶ್ರೀಶೈಲಂ ಪವರ್ ಸ್ಟೇಷನ್​ನ 6 ಯೂನಿಟ್​ಗಳಿಗೂ ಬೆಂಕಿ ಹರಡುತ್ತಿದ್ದು, ಎಲ್ಲೆಡೆ ಹೊಗೆ ತುಂಬಿಕೊಂಡಿದೆ. ಇದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ರಕ್ಷಣಾ ಕಾರ್ಯವೂ ಸವಾಲಾಗಿದೆ. ಅಲ್ಲಿನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ದುರಂತ ಸಂಭವಿಸಿದಾಗ 19 ಮಂದಿ ಪವರ್ ಸ್ಟೇಷನ್​ನೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಲ್ಲಿ 10 ಮಂದಿ ಬಚಾವಾಗಿದ್ದಾರೆ.


ರಕ್ಷಣಾ ಸಿಬ್ಬಂದಿ ಮೂರ್ನಾಲ್ಕು ಬಾರಿ ಪವರ್ ಸ್ಟೇಷನ್​ನೊಳಗೆ ಪ್ರವೇಶಿಸಲು ಪ್ರಯತ್ನಿಸಿದರೂ ದಟ್ಟ ಹೊಗೆಯ ಕಾರಣದಿಂದ ಅವರಿಗೆ ಒಳಗೆ ಹೋಗಲು ಸಾಧ್ಯವಾಗಿಲ್ಲ. ಎನ್​ಡಿಆರ್​ಎಫ್​ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Published by: Sushma Chakre
First published: August 21, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories