ಚಂಡೀಗಢ ಮಾಲ್​ನಲ್ಲಿ ಹುಸಿ ಬಾಂಬ್​ ಬೆದರಿಕೆ; ಎಲ್ಲಾ ಮಳಿಗೆಗಳನ್ನು ಖಾಲಿ ಮಾಡಿಸಿದ ಪೊಲೀಸ್ ಇಲಾಖೆ

ಸ್ಥಳೀಯ ಪೊಲೀಸ್​ ಘಟಕ, ಬಾಂಬ್​ ನಿಷ್ಕ್ರಿಯ ದಳ, ಅಪರಾಧ ದಳ,  ಮಾಲ್​ಗೆ ಆಗಮಿಸಿ, ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸರು ಏಕಾಏಕಿ ತಪಾಸಣೆ ಆರಂಭಿಸಿದ್ದರಿಂದ ಗ್ರಾಹಕರು ಗಾಬರಿಗೊಂಡಿದ್ದಾರೆ. ಬಳಿಕ ಮೈಕ್​ ಮೂಲಕ ಎಲ್ಲ ಗ್ರಾಹಕರು ಮಾಲ್​ ಬಿಟ್ಟು ಹೊರಗೆ ಹೋಗುವಂತೆ ಮನವಿ ಮಾಡಲಾಗಿದೆ.

HR Ramesh | news18
Updated:August 12, 2019, 6:00 PM IST
ಚಂಡೀಗಢ ಮಾಲ್​ನಲ್ಲಿ ಹುಸಿ ಬಾಂಬ್​ ಬೆದರಿಕೆ; ಎಲ್ಲಾ ಮಳಿಗೆಗಳನ್ನು ಖಾಲಿ ಮಾಡಿಸಿದ ಪೊಲೀಸ್ ಇಲಾಖೆ
ಪಂಜಾಬ್ ಪೊಲೀಸ್​ (ಸಾಂದರ್ಭಿಕ ಚಿತ್ರ)
HR Ramesh | news18
Updated: August 12, 2019, 6:00 PM IST
ನವದೆಹಲಿ: ಚಂಡೀಗಢದ ಎಲಾಂಟೆ ಮಾಲ್​ ಆವರಣದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಸುದ್ದಿ ಹಬ್ಬಿದ ಬಳಿಕ ಮಾಲ್​ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲ ಶಾಪ್​ಗಳನ್ನು ಸ್ಥಳಾಂತರ ಮಾಡಲಾಗಿದೆ.

ಈದ್​ ಸಂಭ್ರಮಾಚರಣೆಯಿಂದ ಜನಜಂಗುಳಿಯಿಂದ ತುಂಬಿರುವ ಚಂಡೀಗಢದ ಪ್ರಸಿದ್ಧ ಮಾಲ್​ನಲ್ಲಿ ಬಾಂಬ್​ ಸ್ಫೋಟಗೊಳ್ಳಲಿದೆ ಎಂಬ ಮಾಹಿತಿ ಪೊಲೀಸರಿಗೆ ತಲುಪಿದೆ.

ಇದನ್ನು ಓದಿ: ಸಂತ್ರಸ್ತರನ್ನು ರಕ್ಷಿಸಲು ಮುಂದಾಗಿ ಅಪಾಯಕ್ಕೀಡಾದ ಎನ್​ಡಿಆರ್​ಎಫ್​ ತಂಡ; 12 ಕಿಮೀ ಈಜಿ ದಡ ಸೇರಿದ ಕಮಾಂಡರ್ ಚೇತನ್!

ಬಳಿಕ ಸ್ಥಳೀಯ ಪೊಲೀಸ್​ ಘಟಕ, ಬಾಂಬ್​ ನಿಷ್ಕ್ರಿಯ ದಳ, ಅಪರಾಧ ದಳ,  ಮಾಲ್​ಗೆ ಆಗಮಿಸಿ, ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸರು ಏಕಾಏಕಿ ತಪಾಸಣೆ ಆರಂಭಿಸಿದ್ದರಿಂದ ಗ್ರಾಹಕರು ಗಾಬರಿಗೊಂಡಿದ್ದಾರೆ. ಬಳಿಕ ಮೈಕ್​ ಮೂಲಕ ಎಲ್ಲ ಗ್ರಾಹಕರು ಮಾಲ್​ ಬಿಟ್ಟು ಹೊರಗೆ ಹೋಗುವಂತೆ ಮನವಿ ಮಾಡಲಾಗಿದೆ. ಮಾಲ್​ನಲ್ಲಿದ್ದ ಎಲ್ಲ ಮಳಿಗೆ​ಗಳನ್ನು ಖಾಲಿ ಮಾಡಿಸಲಾಗಿದೆ. ಆನಂತರ ಮಾಲ್​ ಸುತ್ತಮುತ್ತ ಪರಿಶೀಲನೆ ನಡೆಸಿದ ಬಳಿಕ ಇದೊಂದು ಗಾಳಿಸುದ್ದಿ ಎಂಬುದು ತಿಳಿದುಬಂದಿದೆ. ಹೀಗೆ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.

 

First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...