• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shopian Encounter: ಕಾಶ್ಮೀರದ ಶೋಪಿಯಾನ್​ನಲ್ಲಿ​ ಎನ್​ಕೌಂಟರ್​; ಸೇನಾ ಪಡೆಯಿಂದ ಮೂವರು ಉಗ್ರರ ಹತ್ಯೆ

Shopian Encounter: ಕಾಶ್ಮೀರದ ಶೋಪಿಯಾನ್​ನಲ್ಲಿ​ ಎನ್​ಕೌಂಟರ್​; ಸೇನಾ ಪಡೆಯಿಂದ ಮೂವರು ಉಗ್ರರ ಹತ್ಯೆ

ಉಗ್ರರ ಎನ್​ಕೌಂಟರ್

ಉಗ್ರರ ಎನ್​ಕೌಂಟರ್

ನಿನ್ನೆ ರಾತ್ರಿಯಿಡೀ ಶೋಪಿಯಾನ್​ನಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

  • Share this:

ಶ್ರೀನಗರ (ಏ. 9): ಜಮ್ಮು ಕಾಶ್ಮೀರದ ಆವಂತಿಪುರದ ನೌಭಾಗ್ ತ್ರಾಲ್ ಪ್ರದೇಶದಲ್ಲಿ ಉಗ್ರರು ಮತ್ತು ಗಡಿ ಭದ್ರತಾ ಪಡೆಯ ಸಿಬ್ಬಂದಿ ನಡುವೆ ನಿನ್ನೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ. 2ನೇ ದಿನವಾದ ಇಂದು ಕೂಡ ಎನ್​ಕೌಂಟರ್ ಕಾರ್ಯಾಚರಣೆ ಮುಂದುವರೆದಿದ್ದು, ನಿನ್ನೆ ರಾತ್ರಿಯಿಡೀ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.


ನಿನ್ನೆ ರಾತ್ರಿ ಬಿಎಸ್​ಎಫ್​ ಯೋಧರು ಮೂವರು ಉಗ್ರರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ ಶೋಪಿಯಾನ್​ನಲ್ಲಿ ಎನ್​ಕೌಂಟರ್ ನಡೆದಿದ್ದು, ಮೂವರು ಉಗ್ರರು ಹತರಾಗಿದ್ದಾರೆ. ಇಬ್ಬರು ಬಿಎಸ್​ಎಫ್ ಯೋಧರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.



ಪೊಲೀಸರು, ಸೇನಾಪಡೆ ಮತ್ತು ಸಿಆರ್​ಪಿಎಫ್​ ಪಡೆಯದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಶೋಪಿಯಾನ್​ನಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಉಗ್ರ ಸಂಘಟನೆಯ ಮುಖ್ಯಸ್ಥ ಅನ್ಸರ್ ಘಜ್ವತ್ ಉಲ್ ಹಿಂದ್ ಸೇರಿದಮತೆ ಇನ್ನೂ ಮೂರ್ನಾಲ್ಕು ಉಗ್ರರನ್ನು ಸೆರೆ ಹಿರಿಯಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಎನ್​ಕೌಂಟರ್​ನಲ್ಲಿ ಮೃತರಾದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಲ್​ಖೈದಾ ಸಂಘಟನೆಯ ಪ್ರಚೋದನೆಯಿಂದ ಉಗ್ರರು ಈ ದಾಳಿ ನಡೆಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

First published: