HOME » NEWS » National-international » SHOOT ME BUT I WILL NOT SHOW PAPERS SAYS ASADUDDIN OWAISI GNR

‘ನನ್ನೆದೆಗೆ ಗುಂಡಿಟ್ಟರೂ ದಾಖಲೆ ನೀಡಲಾರೆ‘: ಸಿಎಎ ವಿರುದ್ಧ ಹೋರಾಟದಲ್ಲಿ ಅಸಾದುದ್ದೀನ್ ಓವೈಸಿ

ಭಾರತದ ಕೆಲ ಭಾಗಗಳನ್ನು ಆಕ್ರಮಿಸಿಕೊಂಡಿರುವ ಚೀನಾ ಮತ್ತು ಇತರೆ ದೇಶಗಳನ್ನು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಯಾಕೆ ಸೇರಿಸಿಲ್ಲ. ಕೇವಲ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನವನ್ನು ಮಾತ್ರ ಸೇರಿಸಲು ಕಾರಣವೇನು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

news18-kannada
Updated:February 10, 2020, 6:52 PM IST
‘ನನ್ನೆದೆಗೆ ಗುಂಡಿಟ್ಟರೂ ದಾಖಲೆ ನೀಡಲಾರೆ‘: ಸಿಎಎ ವಿರುದ್ಧ ಹೋರಾಟದಲ್ಲಿ ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ
  • Share this:
ಹೈದರಾಬಾದ್(ಫೆ.10): "ನನ್ನೆದೆಗೆ ಗುಂಡಿಟ್ಟರೂ ಯಾವುದೇ ದಾಖಲೆ ಪತ್ರಗಳನ್ನು ನೀಡಲಾರೆ" ಎಂದು  ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ. ಇಂದು ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ಸಿಎಎ ಮತ್ತು ಎನ್​​ಆರ್​ಸಿ ವಿರುದ್ಧದ ಪ್ರತಿಭಟನೆಯಲ್ಲಿ ಮಾತಾಡಿದ ಅಸಾದುದ್ದೀನ್​​ ಓವೈಸಿ ಹೀಗೆಂದರು. "ನಾನು ಭಾರತದಲ್ಲೇ ಬುದಕುತ್ತೇನೆ. ನನ್ನ ಪೌರತ್ವ ಸಾಬೀತಿಗೆ ಕೇಂದ್ರ ಸರ್ಕಾರ ದಾಖಲೆ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಲಾರೆ. ಬದಲಿಗೆ ಬೇಕಿದ್ದರೆ ನನ್ನ ಎದೆಗೆ ಗುಂಡಿಕ್ಕಿ ಎಂದು ಸವಾಲ್​​ ಹಾಕುವೆ" ಎಂದರು.

ಇನ್ನು ನಾನು ಭಾರತೀಯ. ಇದೇ ದೇಶದಲ್ಲೇ ಉಳಿಯುತ್ತೇನೆ. ಆದರೆ, ದಾಖಲೆ ಪತ್ರಗಳನ್ನು ಮಾತ್ರ ತೋರಿಸಲಾರೆ. ಕೇಂದ್ರ ಸರ್ಕಾರ ದಾಖಲೆ ಕೇಳಿದರೆ, ನನ್ನ ಎದೆ ತೋರಿಸುತ್ತೇನೆ. ನನ್ನ ಎದೆಗೆ ಗುಂಡಿಕ್ಕಿ ಎನ್ನುತ್ತೇನೆ. ಭಾರತದ ಮೇಲಿನ ಪ್ರೀತಿ ನನ್ನ ಹೃದಯಾಳದಲ್ಲಿ ಅಡಕವಾಗಿದೆ. ಅದನ್ನು ಬಿಜೆಪಿಗೆ ತೋರಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡುತ್ತೇನೆ. ಸಿಎಎ ಮತ್ತು ಎನ್​​ಆರ್​ಸಿ ವಿರುದ್ಧ ಪ್ರತಿಭಟಿಸುವರು ಮಾತ್ರ ನಿಜವಾದ ಹೋರಾಟಗಾರರು ಎಂದರು ಅಸಾದುದ್ದೀನ್​​ ಓವೈಸಿ.

ಈ ಹಿಂದೆಯೂ ಸಂಸತ್​​ನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿದು ಬಿಸಾಡುವ ಮೂಲಕ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿವಾದ ಹುಟ್ಟುಹಾಕಿದ್ದಾರೆ. ಈ ತಿದ್ದುಪಡಿ ಮಸೂದೆ ದೇಶದ ಮುಸ್ಲಿಂ ಸುಮದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಮತ್ತವರನ್ನು ದೇಶದಿಂದ ಹೊರಹಾಕುವ ಹುನ್ನಾರ ಈ ಮಸೂದೆ ಹೊಂದಿದೆ. ಇದೊಂದು ಸಂವಿಧಾನ ವಿರೋಧಿ ಕ್ರಮ ಎಂದು ಓವೈಸಿ ಕಿಡಿಕಾರಿದ್ದರು.

ಇದನ್ನೂ ಓದಿ: ಜೋಪಡಿಗಳ ನೆಲಸಮ ಪ್ರಕರಣ: ತಿಂಗಳೊಳಗೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್​ ಆದೇಶ

ಭಾರತದ ಕೆಲ ಭಾಗಗಳನ್ನು ಆಕ್ರಮಿಸಿಕೊಂಡಿರುವ ಚೀನಾ ಮತ್ತು ಇತರೆ ದೇಶಗಳನ್ನು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಯಾಕೆ ಸೇರಿಸಿಲ್ಲ. ಕೇವಲ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನವನ್ನು ಮಾತ್ರ ಸೇರಿಸಲು ಕಾರಣವೇನು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಜಾರಿ ಮಾಡಲೊರಟ ಸಿಎಎ ಮತ್ತು ಎನ್​​ಆರ್​ಸಿಯೂ ಭಾರತಕ್ಕೆ ಮಾಡುವ ಅವಮಾನ. ಈ ದೇಶದ ಮುಸ್ಲಿಮರನ್ನು ಮೂಲೆಗುಂಪು ಮಾಡಲು ಕೇಂದ್ರ ಹೊರಟಿದೆ. ಮೋದಿ ಸರ್ಕಾರದ ಈ ಕ್ರಮವೂ ಜರ್ಮನ್​​ನ ಸರ್ವಾಧಿಕಾರಿ ಹಿಟ್ಲರ್ ಜಾರಿಗೊಳಿಸಿದ್ದ ಜನಾಂಗೀಯ ತಾರತಮ್ಯ ನೀತಿಗಿಂತಲೂ ಕ್ರೂರವಾಗಿದೆ ಎಂದು ಓವೈಸಿ ಕುಟುಕಿದರು.
First published: February 10, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories