Video: ಇಂಡೋನೇಷ್ಯಾದಲ್ಲಿ ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಅಪ್ಪಳಿಸಿದ ಸುನಾಮಿ, ನೂರಾರು ಮಂದಿ ಕಣ್ಮರೆ!

ಅವರಿಗೆ ಸುನಾಮಿ ಬಂದಪ್ಪಳಿಸುವ ಯಾವುದೇ ಅರಿವಿರಲಿಲ್ಲ. ಇದ್ದಕ್ಕಿದ್ದಂತೆ ಜವರಾಯನಂತೆ ಬಂದೆರಗಿದ ಸುನಾಮಿ, ವೇದಿಕೆ ಮೇಲಿದ್ದ ಗಾಯಕರನ್ನು ಏಕಾಏಕಿ ಪ್ರೇಕ್ಷಕರೆಡೆಗೆ ನೂಕಿತ್ತು. ಅಲೆಗಳ ರಭಸಕ್ಕೆ ವೇದಿಕೆ ಸಮೇತ ಗಾಯಕ ವೃಂದದವರು ನೀರಲ್ಲಿ ಮುಳುಗಿ ಕಾಣೆಯಾಗಿದ್ದರು. 

Latha CG | news18india
Updated:December 23, 2018, 5:10 PM IST
Video: ಇಂಡೋನೇಷ್ಯಾದಲ್ಲಿ ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಅಪ್ಪಳಿಸಿದ ಸುನಾಮಿ, ನೂರಾರು ಮಂದಿ ಕಣ್ಮರೆ!
ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ದೃಶ್ಯ
  • Share this:
ಇಂಡೋನೇಷ್ಯಾ,(ಡಿ.23): ಇಂಡೋನೇಷ್ಯಾ ಜನರಿಗೆ ಶನಿವಾರ ಕರಾಳ ದಿನವಾಗಿತ್ತು. ಅಂದು ರಾತ್ರಿ ಅಪ್ಪಳಿಸಿದ ಸುನಾಮಿಯ ಹೊಡೆತಕ್ಕೆ 168 ಮಂದಿ ಸಾವನ್ನಪ್ಪಿದ್ದು, 700 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಭಯಾನಕ ಸುನಾಮಿಯ ಹೊಡೆತಕ್ಕೆ ಸಿಲುಕಿ ಬದುಕುಳಿದ ಪ್ರತ್ಯಕ್ಷದರ್ಶಿಗಳ ಅನುಭವಗಳು ನಿಜಕ್ಕೂ ವಿಸ್ಮಯಕಾರಿ.

ಇದನ್ನೂ ಓದಿ: ಇಂಡೋನೇಷ್ಯಾಕ್ಕೆ ಬಂದಪ್ಪಳಿಸಿದ ಸುನಾಮಿ; 168 ಜನರು ಬಲಿ, 700ಕ್ಕೂ ಹೆಚ್ಚು ಜನರಿಗೆ ಗಾಯ

ಶನಿವಾರ ರಾತ್ರಿ ತಂಜಾಂಗ್ ಲೆಸುಂಗ್ ಸಮುದ್ರ ತೀರದ ರೆಸಾರ್ಟ್​ ಬಳಿ ಸಂಗೀತ ಕಾರ್ಯಕ್ರಮವೊಂದು ನಡೆಯುತ್ತಿತ್ತು. ವೇದಿಕೆ ಮೇಲೆ 'ಸೆವೆಂಟೀನ್​' ಬ್ಯಾಂಡ್​ನ ಗಾಯಕರ ಗುಂಪೊಂದು ಬ್ಯಾಂಡ್ ಬಾರಿಸುತ್ತಾ, ಇಂಪಾದ ಸಂಗೀತದ ​ ರಸದೌತಣ ಬಡಿಸುತ್ತಿದ್ದರು. ವೇದಿಕೆ ಮುಂದೆಯೇ ಮತ್ತೊಂದು ತಂಡ ಡ್ಯಾನ್ಸ್ ಮಾಡುತ್ತಿತ್ತು. ಅಲ್ಲಿ ನೆರೆದಿದ್ದ ಜನ ತಮ್ಮಷ್ಟಕ್ಕೆ ಸಂಗೀತ ಕೇಳುತ್ತಾ, ಕೇಕೆ ಹಾಕುತ್ತಿದ್ದರು. ಮೊಬೈಲ್​ನಲ್ಲಿ ಕಾರ್ಯಕ್ರಮದ ದೃಶ್ಯವನ್ನು ಸೆರೆ ಹಿಡಿಯುತ್ತಾ, ಶಿಳ್ಳೆ ಹೊಡೆಯುತ್ತಾ ತಮ್ಮದೇ ಲೋಕದಲ್ಲಿ ತೇಲಿದ್ದರು.

ಸುನಾಮಿ ಅಪ್ಪಳಿಸಿದ ಭಯಾನಕ ವಿಡಿಯೋ:



ಅವರಿಗೆ ಸುನಾಮಿ ಬಂದಪ್ಪಳಿಸುವ ಯಾವುದೇ ಅರಿವಿರಲಿಲ್ಲ. ಇದ್ದಕ್ಕಿದ್ದಂತೆ ಜವರಾಯನಂತೆ ಬಂದೆರಗಿದ ಸುನಾಮಿ, ವೇದಿಕೆ ಮೇಲಿದ್ದ ಗಾಯಕರನ್ನು ಏಕಾಏಕಿ ಪ್ರೇಕ್ಷಕರೆಡೆಗೆ ನೂಕಿತ್ತು. ಅಲೆಗಳ ರಭಸಕ್ಕೆ ವೇದಿಕೆ ಸಮೇತ ಗಾಯಕ ವೃಂದದವರು ನೀರಲ್ಲಿ ಮುಳುಗಿ ಕಾಣೆಯಾಗಿದ್ದರು. 

ಈ  ಭಯಾನಕ ದೃಶ್ಯವನ್ನು 'ಸೆವೆಂಟೀನ್​' ಬ್ಯಾಂಡ್​ನ ಗಾಯಕ ರೆಫಿಯನ್ ಫಜಾರ್ಸಿಯಾ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಮಾಡಿದ್ದರು. ತಮ್ಮ ತಂಡದ  ಇಬ್ಬರು ವ್ಯಕ್ತಿಗಳನ್ನು ಕಳೆದುಕೊಂಡೆವು ಎಂದು ಅಳುತ್ತಿರುವ ವಿಡಿಯೋವೊಂದು ಮನಕಲಕುವಂತಿತ್ತು.




ಡ್ರಮ್​ ಬಾರಿಸುವ ಆಂಡಿ, ಗಿಟಾರ್​ ಬಾರಿಸುವ ಹೆರ್ಮನ್​ ಸೇರಿದಂತೆ ಒಟ್ಟು ನಾಲ್ಕು ಜನ ಕಾಣೆಯಾಗಿದ್ದರು. ಅದೃಷ್ಟವಶಾತ್​ ಉಳಿದವರು ಬದುಕುಳಿದಿದ್ದರು. ಆದರೆ ಅವರ ಮೂಳೆಗಳು ಮುರಿದು ತೀವ್ರ ಗಾಯಗೊಂಡಿದ್ದರು. ಅಲೆಗಳ ಅಬ್ಬರಕ್ಕೆ ಸಿಲುಕಿ ಕಾಣೆಯಾದವರು ಬೇಗ ಸಿಗಲಿ ಎಂದು ಬದುಕುಳಿದವರು ದೇವರಲ್ಲಿ ಪ್ರಾರ್ಥಿಸುತ್ತಿದ್ದರು.
First published:December 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ