ಬಿಹಾರ: ಸಾಮಾನ್ಯವಾಗಿ ಜನರು ರಸ್ತೆಯಲ್ಲಿ ಅಡ್ಡಾಡುವಾಗ ಅಥವಾ ಅವರ ಮನೆಯ ಗೇಟಿನ ಹೊರಗೆ ನಿಂತಾಗ ದುಷ್ಕರ್ಮಿಗಳು ಹಿಂದೆಯಿಂದ ಬೈಕ್ ಮೇಲೆ ಬಂದು ನಮಗೆ ಅರಿವಾಗದಂತೆ ಕ್ಷಣ ಮಾತ್ರದಲ್ಲಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಥವಾ ಕಿವಿಗೆ ಹಚ್ಚಿಕೊಂಡು ಮಾತನಾಡುತ್ತಿರುವ ಮೊಬೈಲ್ ಫೋನ್ ಅನ್ನು ದೋಚಿಕೊಂಡು ಹೋಗಿರುವ ಅನೇಕ ಘಟನೆಗಳ ಬಗ್ಗೆ ನಾವು ಕೇಳಿದ್ದೀವಿ. ಕೆಲವೊಮ್ಮೆ ಕಣ್ಣಾರೆ ಸಹ ಕಂಡಿರುವ ಸಾಧ್ಯತೆನೂ ಇರುತ್ತದೆ.
ಇನ್ನೂ ಕೆಲವೊಮ್ಮೆ ಕೆಲವು ಕಿಡಿಗೇಡಿಗಳು ಬಂದು ಬೈಕ್ ಮೇಲೆ ತುಂಬಾ ಹತ್ತಿರಕ್ಕೆ ಬಂದು ಮಹಿಳೆಯರನ್ನು ತುಂಬಾನೇ ಅಸಭ್ಯವಾಗಿ ಮುಟ್ಟಿ ಕಿರುಕುಳ ನೀಡಿರುವ ಘಟನೆಗಳ ಬಗ್ಗೆಯೂ ನಾವು ಕೇಳಿರುತ್ತೇವೆ. ಆದರೆ ಈಗ ನಾವು ಹೇಳಲು ಹೊರಟಿರುವಂತಹ ಘಟನೆಯ ಬಗ್ಗೆ ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರೆಂಟಿ!
ಇದನ್ನೂ ಓದಿ: Misbehave: ಹೋಳಿ ಆಚರಣೆ ಹೆಸರಲ್ಲಿ ಜಪಾನ್ ಯುವತಿಗೆ ಪುಂಡರ ಕಿರುಕುಳ; ವಿಡಿಯೋ ವೈರಲ್
ಹಿಂದೆಯಿಂದ ಬಂದು ಮಹಿಳೆಯರನ್ನು ಬಲವಂತವಾಗಿ ಚುಂಬಿಸುವ ಸೀರಿಯಲ್ ಕಿಸ್ಸರ್
ಹೌದು.. ಬಿಹಾರದ ಜಮುಯಿ ಜಿಲ್ಲೆಯಲ್ಲಿ, ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಮೊಬೈಲ್ ಫೋನ್‌ನಲ್ಲಿ ಮಾತಾಡುತ್ತಿರುವಾಗ ವ್ಯಕ್ತಿಯೊಬ್ಬ ಹಿಂದೆಯಿಂದ ಮೆಲ್ಲಗೆ ಹೋಗಿ ಆಕೆಯ ತುಟಿಗೆ ಬಲವಂತವಾಗಿ ಚುಂಬಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಬ್ಬಂಟಿಯಾಗಿ ರಸ್ತೆಗಳಲ್ಲಿ ಓಡಾಡುವ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದೆ.
ಸಂತ್ರಸ್ತೆ ಜಮುಯಿಯಲ್ಲಿರುವ ಸದರ್ ಆಸ್ಪತ್ರೆಯಲ್ಲಿ ನಾಲ್ಕನೇ ದರ್ಜೆಯ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಮಾರ್ಚ್ 10 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ದುಷ್ಕರ್ಮಿ ಆಸ್ಪತ್ರೆಯ ಗೋಡೆಯನ್ನು ಹಾರಿ, ಸಂತ್ರಸ್ತೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿಕೊಂಡು, ನಂತರ ಅವಳ ಒಪ್ಪಿಗೆಯಿಲ್ಲದೆ ಅವಳನ್ನು ಬಲವಂತವಾಗಿ ಹಿಡಿದು ತುಟಿಗೆ ಕಿಸ್ ಮಾಡಿದ್ದಾನೆ ಓಡಿ ಹೋಗಿದ್ದಾನೆ.
ಇದನ್ನೂ ಓದಿ: Sad News: ‘ಅಪ್ಪಾ ಐ ಹೇಟ್ ಯೂ’ ಎಂದು ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ! ಕರುಳು ಹಿಂಡುವ ಸ್ಟೋರಿ
ಈ ಸೀರಿಯಲ್ ಕಿಸ್ಸರ್ ವಿರುದ್ಧ ದಾಖಲಾಯ್ತು ಎಫ್ಐಆರ್
ಈಗಾಗಲೇ ಸಂತ್ರಸ್ತೆ ಜಮುಯಿ ಪೊಲೀಸರಿಗೆ ದೂರು ನೀಡಿದ್ದು, ಅವರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಘಟನೆಯ ನಂತರ ಅಪರಾಧಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಅಳವಡಿಸುವಂತೆ ವಿನಂತಿಸಿದ್ದಾರೆ. ಅಲ್ಲದೇ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುವ ಮಹಿಳೆಯರ ಭದ್ರತೆಗಾಗಿ ಆಸ್ಪತ್ರೆಯ ಸುತ್ತಲೂ ಮುಳ್ಳು ಬೇಲಿಯನ್ನು ಸ್ಥಾಪಿಸುವಂತೆ ಆಗ್ರಹ ಮಾಡಿದ್ದಾರೆ.
ಸಂತ್ರಸ್ತ ಮಹಿಳೆ ಹೇಳಿದ್ದೇನು?
ಸುದ್ದಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಮಹಿಳೆ "ಅವನು ಆಸ್ಪತ್ರೆಯ ಕಾಂಪೌಂಡ್ ಒಳಗೆ ಹೇಗೆ ಬಂದ ಅಂತ ನನಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ಆ ವ್ಯಕ್ತಿಯನ್ನು ಈ ಹಿಂದೆ ಯಾವತ್ತೂ ನೋಡಿಲ್ಲ. ನಾನು ಅವನಿಗೆ ಏನು ಮಾಡಿದ್ದೇನೆ? ಅವನು ನನ್ನ ಜೊತೆ ಏಕೆ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಅಂತ ನನಗೆ ಗೊತ್ತಿಲ್ಲ. ನನಗೆ ಬಲವಂತವಾಗಿ ಕಿಸ್ ಮಾಡಿದಾಗ ನಾನು ಪ್ರತಿರೋಧಿಸಿದೆ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕೂಗಿದೆ ಎಂದು ಹೇಳಿದ್ದಾರೆ.
ಈ ಘಟನೆಯು ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಸಾಕಷ್ಟು ಆಕ್ರೋಶ ವ್ಯಲ್ತಪಡಿಸಿದ್ದು, ಅನೇಕರು ಮಹಿಳೆಯರನ್ನು ಲೈಂಗಿಕ ಕಿರುಕುಳ ಮತ್ತು ಹಲ್ಲೆಯಿಂದ ರಕ್ಷಿಸಲು ಕಠಿಣ ಕಾನೂನುಗಳನ್ನು ಜಾರಿ ಮಾಡುವಂತೆ ಕೋರಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ