Shocking Video: ಜಾತ್ರೆ ವೇಳೆ ಯುವತಿಯನ್ನು ಒಬ್ಬರಾದ ಮೇಲೆ ಒಬ್ಬರು ಎಳೆದಾಡಿ ತಬ್ಬಿಕೊಂಡು ಲೈಂಗಿಕ ಕಿರುಕುಳ

ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗ ನಡೆಸುವ ಜಾತ್ರೆ ವೇಳೆ ಯುವತಿಯೊಬ್ಬಳನ್ನು ಕಾಮುಕರು ಹಿಡಿದು ಎಳೆದಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಸಹಾಯಕ ಯುವತಿ ಕಿರುಚಾಡುತ್ತಿದ್ದರೂ ಸುತ್ತಮುತ್ತಲಿನವರು ಸಹಾಯಕ್ಕೆ ಬರದೆ, ವಿಡಿಯೋ ಮಾಡಿದ್ದಾರೆ.

ಸಹಾಯ ಮಾಡದೆ ವಿಡಿಯೋ ಮಾಡುತ್ತಿರುವ ಜನ

ಸಹಾಯ ಮಾಡದೆ ವಿಡಿಯೋ ಮಾಡುತ್ತಿರುವ ಜನ

  • Share this:
ಭೂಪಾಲ್​​: ದೆಹಲಿಯ ನಿರ್ಭಯಾ ಪ್ರಕರಣದ (Delhi Nirbhaya Case) ನಂತರ ಭಾರತದಲ್ಲಿ ಅತ್ಯಾಚಾರ(RAPE), ಲೈಂಗಿಕ ಅಪರಾಧಗಳ (Sexually Harassed) ಸಂಬಂಧ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಯಿತು. ಆದರೆ ಕಠಿಣ ಕಾನೂನುಗಳ ಆಚೆಯೂ ನಾಗರೀಕ ಸಮಾಜ ತಲೆತಗ್ಗಿಸುವಂತ ಘಟನೆಗಳು ವರದಿಯಾಗುತ್ತಲೇ ಇವೆ. ಯುವತಿಯರ ಮೇಲೆ ಕಾಮುಕರ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳಿಂದ ಆನ್​​ ಲೈನ್​ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋ ಕಂಡು ಹೆಣ್ಣು ಹೃದಯಗಳು ತಲ್ಲಣಿಸಿದರೆ, ಸಭ್ಯರ ರಕ್ತ ಕುದಿಯುವಂತಿದೆ. ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗ ನಡೆಸುವ ಜಾತ್ರೆ ವೇಳೆ ಯುವತಿಯೊಬ್ಬಳನ್ನು ಕಾಮುಕರು ಹಿಡಿದು ಎಳೆದಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಸಹಾಯಕ ಯುವತಿ ಕಿರುಚಾಡುತ್ತಿದ್ದರೂ ಸುತ್ತಮುತ್ತಲಿನವರು ಸಹಾಯಕ್ಕೆ ಬರದೆ, ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!ಏನಿದು ಪ್ರಕರಣ..?

ಮಧ್ಯಪ್ರದೇಶದಲ್ಲಿ ಯುವಕರ ಗುಂಪು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್​​ ಆಗಿದೆ. ನೂರಾರು ಜನರ ಎದುರೇ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆ. ರಸ್ತೆಯಲ್ಲಿ ಎಲ್ಲರೂ ನೋಡುತ್ತಿರುವಾಗಲೇ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಒಬ್ಬರ ನಂತರ ಒಬ್ಬರು ಹುಡುಗಿಯ ಮೇಲೆ ಬಿದ್ದು ಮೃಗದಂತೆ ಹಿಂಸಿಸಿರು ಪೈಶಾಚಿಕ ಘಟನೆ ನಡೆದಿದೆ. ಕೆಲ ಯುವಕರು ಕಿರುಕುಳ ನೀಡುತ್ತಿದ್ದರೆ.. ಇನ್ನು ಕೆಲವರು ಅದನ್ನು ವಿಡಿಯೋ ಮಾಡಿದ್ದಾರೆ. ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ಬುಡಕಟ್ಟು ಜನಾಂಗದವರು ಆಚರಿಸುತ್ತಿದ್ದ ಭಗೋರಿಯಾ ಹಬ್ಬದ ವೇಳೆ ಯುವಕರ ಗುಂಪು ಬಾಲಕಿಗೆ ಕಿರುಕುಳ ನೀಡಿದೆ. ಒಬ್ಬರ ನಂತರ ಒಬ್ಬರಂತೆ ಬಾಲಕಿಯನ್ನು ಬಲವಂತವಾಗಿ ಹಿಡಿದು ಲೈಂಗಿಕ ದೌರ್ಜನ್ಯ ಎಸಗಲಾಯಿತು. ಬಾಲಕಿ ಕಿರುಚಾಡುತ್ತಾ,  ಅಸಹಾಯಕ ಸ್ಥಿತಿಯಲ್ಲಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಸಹಾಯ ಮಾಡಲು ಮುಂದೆ ಬರದೆ ವಿಡಿಯೋ ಮಾಡುವುದರಲ್ಲಿ ನಿರತರಾಗಿರೋದನ್ನು ವೈರಲ್​ ವಿಡಿಯೋದಲ್ಲಿ ನೋಡಬಹುದಾಗಿದೆ.ವಿಡಿಯೋ ವೈರಲ್​ ಬಳಿಕ ಕೇಸ್​ ದಾಖಲು

ಘಟನೆಯ ವೀಡಿಯೊ ಆನ್‌ ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹದಿಹರೆಯದವರು ಒಬ್ಬರ ನಂತರ ಒಬ್ಬರು ಹುಡುಗಿಗೆ ಕಿರುಕುಳ ನೀಡುತ್ತಿರುವುದನ್ನು ಹುಡುಗಿ ಕಿರುಚುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.  ಅಲ್ಲಿದ್ದವರು ಹುಡುಗಿಗೆ ಸಹಾಯ ಮಾಡದೆ ತಮ್ಮ ಫೋನ್‌ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಲು ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಇಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ.

ಇದನ್ನೂ ಓದಿ: Viral News: ಹೆಂಡ್ತಿ ಹೆಣ್ಣಲ್ಲ ಗಂಡು, ಆಕೆಗೆ ಶಿಶ್ನವಿದೆ ಎಂದು ಕೋರ್ಟ್​ ಮೆಟ್ಟಿಲೇರಿದ ಗಂಡ

ಅಮ್ಮನ ಶವದೊಂದಿಗೆ 4 ದಿನ ಇದ್ದ ಬಾಲಕ!

ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ತಿರಪತಿ ಸಮೀಪದ ವಿದ್ಯಾನಗರದಲ್ಲಿ. ಇಲ್ಲಿ 10 ವರ್ಷದ ಬಾಲಕ ತನ್ನ ತಾಯಿಯ ಮರಣದ ನಂತರ 4 ದಿನಗಳ ಕಾಲ ತಾಯಿಯ ಶವದ ಜೊತೆಗೆ ಇದ್ದಿದ್ದನಂತೆ.  ಅವಳು ವಿಶ್ರಾಂತಿ ಪಡೆಯುತ್ತಿದ್ದಾಳೆ ಎಂದು ಭಾವಿಸಿ, 4 ದಿನ ತನ್ನ ಪಾಡಿಗೆ ತಾನು ಇದ್ದನಂತೆ. ನಾಲ್ಕು ದಿನದ ನಂತರ ಆಕೆಯ ಶವ ಕೊಳೆತು, ವಾಸನೆ ಬರೋದಕ್ಕೆ ಶುರುವಾಗಾದಲೇ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತಳನ್ನು 50 ವರ್ಷದ ರಾಜಲಕ್ಷ್ಮೀ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಕೆಲವು ವರ್ಷಗಳ ಹಿಂದೆ ಪತಿಯಿಂದ ಡಿವೋರ್ಸ್ ಪಡೆದು, ಬೇರೆಯಾಗಿದ್ದರು. ಅವರಿಗೆ ಶ್ಯಾಮ್ ಕಿಶೋರ್ ಎಂಬ 10 ವರ್ಷದ ಮಗ ಇದ್ದ. ಇಬ್ಬರೂ ವಿದ್ಯಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು.
Published by:Kavya V
First published: