ನವದೆಹಲಿ (ಮಾ. 19): ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆಯು ಇಂದಿನ ಆಧುನಿಕ ಯುಗಕ್ಕೆ ಗಂಭೀರ ಚಿಂತನೆಯ ವಿಷಯವಾಗಿವೆ. ಜನಸಂಖ್ಯಾ ಸ್ಪೋಟ, ನಗರೀಕರಣ, ಕೈಗಾರೀಕರಣ, ಕಾಡು ನಾಶ ಇವೆಲ್ಲವುದರ ಪರಿಣಾಮ ಪ್ರಕೃತಿ ವಿಕೋಪಕ್ಕೆ ಮಾನವ ದಾರಿ ಮಾಡಿಕೊಟ್ಟಿದ್ದಾನೆ.
ಏರುತ್ತಿರುವ ತಾಪಮಾನವು ಹವಾಮಾನ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರಲು ಮತ್ತು ಅಂತಿಮವಾಗಿ ಬೆಳೆ ಇಳುವರಿಯ ಮೇಲೆ ಕೃಷಿ ವಿಜ್ಞಾನಿಗಳ ತಂಡದ ಇತ್ತೀಚಿನ ಅಧ್ಯಯನ ನಡೆಸಿತು. ಕೃಷಿ ವಿಜ್ಞಾನಿಗಳಾದ ಕೈಟ್ಲಿನ್ ಮೂರ್, ಕಾರ್ಲ್ ಬರ್ನಾಚಿ, ಕ್ಯಾಥರೀನ್ ಮೀಚಮ್-ಹೆನ್ಸೋಲ್ಡ್ ಮತ್ತು ಅವರ ಸಹೋದ್ಯೋಗಿಗಳು ಜರ್ನಲ್ ಆಫ್ ಎಕ್ಸ್ಪರಿಮೆಂಟಲ್ ಬೊಟನಿಯಲ್ಲಿ ಒಂದು ಪ್ರಬಂಧವನ್ನು ಸಲ್ಲಿಸಿದರು. ಪ್ರಬಂಧದವು ಬೆಳೆಗಳ ಮೇಲೆ ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ. ಉತ್ತಮ ಸಸ್ಯ ಬೆಳವಣಿಗೆಗೆ ಬೆಳೆಯ ಮೇಲೆ ಹೆಚ್ಚುತ್ತಿರುವ ಶಾಖದ ಪರಿಣಾಮವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಮೇಲೆ ಅವರ ಮುಖ್ಯ ಉದ್ದೇಶವಾಗಿತ್ತು. ದ್ಯುತಿಸಂಶ್ಲೇಷಣೆಯ ಪ್ರಮುಖ ಅಂಶವಾಗಿರುವ CO2 ಲಭ್ಯತೆಯೊಂದಿಗೆ ಹೆಚ್ಚಿನ ತಾಪಮಾನವು ಸಸ್ಯಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಈ ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.
ದ್ಯುತಿ ಸಂಶ್ಲೇಷಣೆಯನ್ನು ನಡೆಸುವ ಕಿಣ್ವಗಳು ಇಂಗಾಲದ ಡೈಆಕ್ಸೈಡ್ ಮತ್ತು ಏರುತ್ತಿರುವ ತಾಪಮಾನದಿಂದಾಗಿ ನೀರಿನ ಅಭಾವವನ್ನು ನಿಯಂತ್ರಿಸಲು ಅಡ್ಡಿಯಾಗಬಹುದು ಎಂಡು ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಏರಿಕೆಯಾಗುತ್ತಿರುವ ಶಾಖದ ಮಟ್ಟದ ಪರಿಣಾಮ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಬೆಳೆಗಳು ಮತ್ತು ಸಸ್ಯಗಳ ಮೇಲೆ ರಚನೆ, ನೀರಿನ ಅಭಾವ, CO2 ಹೀರಿಕೊಳ್ಳುವಿಕೆ ಮತ್ತು ಸಂತಾನೋತ್ಪತ್ತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಅಡ್ಡಿಪಡಿಸುವ ಮೂಲಕ ಪರಿಸರದ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: Toll Booth - ಇನ್ನೊಂದು ವರ್ಷದಲ್ಲಿ ಟೋಲ್ ಬೂತ್ ವ್ಯವಸ್ಥೆಯೇ ರದ್ದು: ಕೇಂದ್ರ ಸಾರಿಗೆ ಸಚಿವ
ಹೆಚ್ಚುತ್ತಿರುವ ತಾಪಮಾನದ ಮಟ್ಟದಿಂದಾಗಿ ಸಸ್ಯದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಸಂಶೋಧನೆ ಹೇಳಿದೆ. ಇದು ಅಂತಿಮವಾಗಿ ಸ್ಟೊಮಾಟಾ ಮತ್ತು ಸಸ್ಯ ಸಂಕುಲದ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಶಾಖದ ಮಟ್ಟ ಏರಿಕೆಯಾಗುವುದರಿಂದ ಬೆಳೆಯ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಕುಂಠಿತಗೊಳಿಸಬಹುದು. ವಿವಿಧ ಸಸ್ಯ ಅಂಗಾಂಶಗಳಲ್ಲಿ ಸಕ್ಕರೆಯನ್ನು ಸೇರಿಸಲು ಬೆಳೆಗೆ ಶಾಖ-ಸೂಕ್ಷ್ಮವಾಗಿರುವ ಕಿಣ್ವಗಳು ಮುಖ್ಯವಾಗಿವೆ. ಈ ಪ್ರಕ್ರಿಯೆಯು ಸಸ್ಯವನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ ಮತ್ತು ಸಸ್ಯದ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧನಾ ಸಹೋದ್ಯೋಗಿ ಕೈಟ್ಲಿನ್ ಮೂರ್ ಅವರು ಉಲ್ಲೇಖಿಸಿದ್ದಾರೆ.
ಅಪಾಯ ಮಟ್ಟದಲ್ಲಿ ಜಗತ್ತು ಬಿಸಿಯಾಗುತ್ತಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಇದು ಬೆಳೆ ನಷ್ಟವನ್ನು ಉಂಟುಮಾಡುತ್ತಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಈ ವಿಷಯದ ಬಗ್ಗೆ ಸಂಶೋಧಕರೊಬ್ಬರು ಹೇಳಿದರು. "ಒಟ್ಟು ತಾಪಮಾನ ಪ್ರತಿ ಡಿಗ್ರಿ ಸೆಲ್ಸಿಯಸ್‌ನ ಏರಿಕೆಯಿಂದ ನಮ್ಮ ನಾಲ್ಕು ಪ್ರಮುಖ ಬೆಳೆಗಳ ಇಳುವರಿಯಲ್ಲಿ 3% ರಿಂದ 7% ನಷ್ಟವನ್ನು ಉಂಟುಮಾಡುತ್ತದೆ. ಆದ್ದರಿಂದ, ಇದು ನಾವು ನಿರ್ಲಕ್ಷಿಸುವಂತಹ ಸಾಮಾನ್ಯ ವಿಷಯವಲ್ಲ ” ಎಂದು ಸಂಶೋಧಕರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ