ಔರಂಗಾಬಾದ್ (ಜೂನ್ 25): ಪೊಲೀಸ್ ಠಾಣೆಗೆ ಸದಾ ವಿಚಿತ್ರವಾದ ಪ್ರಕರಣಗಳು ಬರುತ್ತಲೇ ಇರುತ್ತವೆ. ಆ ವಿಚಿತ್ರವಾದ ದೂರಿನ ತನಿಖೆ ನಡೆಸಿದಾಗ ಒಮ್ಮೊಮ್ಮೆ ಅಚ್ಚರಿಯ ಸಂಗತಿ ಹೊರಬಿದ್ದ ಘಟನೆಯೂ ನಡೆದಿದೆ. ಆದರೆ, ಇನ್ನು ಕೆಲವೊಂದು ಕೇಸುಗಳು ಪೊಲೀಸರ ಮೆದುಳಿಗೇ ಕೈ ಹಾಕಿಬಿಡುತ್ತವೆ! ನಾವೀಗ ಹೇಳುತ್ತಿರುವ ಕತೆ ಅದೇ ರೀತಿಯದ್ದು. ನೀವ್ಯಾರೂ ಊಹಿಸದ ರೀತಿಯ ಕೇಸೊಂದು ಬಿಹಾರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆ ದೂರು ಕೇಳಿದ ಪೊಲೀಸರಿಗೆ ಶಾಕ್ ಆಗಿ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು. ಅಷ್ಟಕ್ಕೂ ಅಂತಹ ವಿಚಿತ್ರ ಪ್ರಕರಣ ಯಾವುದು?
ಇಂದಿನ ಕಾಲದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರೇ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ, ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದರಿಂದಲೇ ಅನೇಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅಂಥದ್ದರಲ್ಲಿ ಬಿಹಾರದ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬಳು ತನ್ನ ಮೇಲೆ ಕನಸಿನಲ್ಲಿ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದಾಳೆ! ವಿಷಯ ಕೇಳಿ ನಿಮಗೂ ಶಾಕ್ ಆಯ್ತಲ್ವ?
ಇದನ್ನೂ ಓದಿ: Murder Mystery: ಪ್ರೇಮಿಯೊಂದಿಗೆ ಮಂಚವೇರಲು ಗಂಡನೇ ಅಡ್ಡಿ; ಗೂಗಲ್ ಸರ್ಚ್ನಿಂದ ಕೊಲೆ ರಹಸ್ಯ ಬಯಲು!
ಹೌದು, ಮಾಟಗಾರನೊಬ್ಬ ದಿನವೂ ನನ್ನ ಕನಸಿನಲ್ಲಿ ಬಂದು ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಔರಂಗಾಬಾದ್ ಜಿಲ್ಲೆಯ ಕುದ್ವಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ದೂರು ದಾಖಲಿಸಿದ್ದಾಳೆ. ಆ ಮಹಿಳೆಯ ಮಗುವಿಗೆ ತೀವ್ರ ಅನಾರೋಗ್ಯವಿದ್ದುದರಿಂದ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದಳು. ಆದರೂ ಆಕೆಯ ಮಗನ ರೋಗ ವಾಸಿಯಾಗಿರಲಿಲ್ಲ. ಹೀಗಾಗಿ, ಸಂಬಂಧಿಕರ ಸಲಹೆಯಂತೆ ಆಕೆ ಮಾಂತ್ರಿಕನನ್ನು ಭೇಟಿಯಾಗಿ, ತನ್ನ ಮಗನ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದ್ದಳು.
ತನ್ನ ಮಗನ ರೋಗವನ್ನು ಗುಣ ಮಾಡುವಂತೆ ಚತುರ್ವೇದಿ ಎಂಬ ಮಾಂತ್ರಿಕನನ್ನು ಭೇಟಿಯಾಗಿದ್ದ ಮಹಿಳೆಗೆ ಆತ ಒಂದು ಮಂತ್ರ ಹೇಳಿಕೊಟ್ಟು, ದಿನವೂ ಮರೆಯದೆ ಪಠಿಸುವಂತೆ ಹೇಳಿದ್ದ. ಆದರೆ, ಆ ಮಂತ್ರ ಹೇಳತೊಡಗಿದ 15 ದಿನಗಳ ನಂತರ ಆಕೆಯ ಮಗ ಸಾವನ್ನಪ್ಪಿದ್ದ. ಇದರಿಂದ ಆಘಾತಕ್ಕೊಳಗಾದ ಆಕೆ ಆ ಮಾಂತ್ರಿಕನನ್ನು ಭೇಟಿಯಾಗಲು ಕಾಳಿ ದೇವಸ್ಥಾನಕ್ಕೆ ಹೋಗಿದ್ದಳು. ಆಗ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದ. ಆದರೆ, ಆಕೆ ಆತನಿಂದ ಬಚಾವಾಗಿದ್ದಳು.
ಇದನ್ನೂ ಓದಿ: Karnataka Weather Today: ಕರಾವಳಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆ; ಮಲೆನಾಡಿನಲ್ಲೂ ನಾಳೆ ವರುಣನ ಆರ್ಭಟ
ಅದಾದ ಮೇಲೆ ಪ್ರತಿದಿನವೂ ಆ ಮಾಂತ್ರಿಕ ಆಕೆಯ ಮೇಲೆ ಅತ್ಯಾಚಾರ ನಡೆಸುವಂತೆ ಕನಸು ಬೀಳುತ್ತಿತ್ತು. ಕಣ್ಣು ಮುಚ್ಚಿದರೆ ಸಾಕು, ಆ ಮಾಂತ್ರಿಕ ನನ್ನ ಮೇಲೆ ಅತ್ಯಾಚಾರ ನಡೆಸುವಂತೆ ಕನಸು ಬೀಳುತ್ತದೆ. ಈ ಕನಸಿನಿಂದ ನನಗೆ ಜೀವನವೇ ಸಾಕೆನಿಸುತ್ತಿದೆ. ರಾತ್ರಿಯಾಗುತ್ತಿದ್ದಂತೆ ಭಯ ಶುರುವಾಗುತ್ತದೆ. ನಿದ್ರೆ ಮಾಡಲೂ ಆಗದೆ ಪರದಾಡುತ್ತಿದ್ದೇನೆ. ಇದರಿಂದ ಹೇಗಾದರೂ ಮಾಡಿ ನನಗೆ ಮುಕ್ತಿ ಕೊಡಿಸಿ ಎಂದು ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ