HOME » NEWS » National-international » SHOCKING NEWS JAPAN COURT ORDERS WOMAN TO PAY PENALTY OF 70000 RUPEES TO MAN FOR HAVING SEX WITH HIS WIFE STG SCT

ಗೆಳತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಹೆಂಡತಿ!; 70,000 ರೂ. ಪರಿಹಾರ ಪಡೆದ ಗಂಡ!

ಕುತೂಹಲಕಾರಿ ಸಂಗತಿಯೆಂದರೆ, ಆ ಮಹಿಳೆಯೊಂದಿಗಿನ ದೈಹಿಕ ಸಂಬಂಧವನ್ನು ಆರೋಪಿ ಮಹಿಳೆ ಒಪ್ಪಿಕೊಂಡಿದ್ದು, ಆದರೆ ಆ ಸಂಬಂಧದಿಂದ ಅವರ ವಿವಾಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅದು ದಾಂಪತ್ಯ ದ್ರೋಹಕ್ಕೆ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಾಡಿದ್ದಾಳೆ.

news18-kannada
Updated:March 25, 2021, 10:11 AM IST
ಗೆಳತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಹೆಂಡತಿ!; 70,000 ರೂ. ಪರಿಹಾರ ಪಡೆದ ಗಂಡ!
ಸಾಂದರ್ಭಿಕ ಚಿತ್ರ
  • Share this:
ಪುರುಷರು ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಪತ್ನಿಯರು ದೂರು ನೀಡೋದು ಸಾಮಾನ್ಯ ಸಂಗತಿ. ಆದರೆ, ತನ್ನ ಹೆಂಡತಿ ಬೇರೊಬ್ಬ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಕೋರ್ಟ್ ಮೊರೆ ಹೋಗಿರುವ ಘಟನೆ ನೀವೆಲ್ಲಾದರೂ ಕೇಳಿದ್ದೀರ? ಜಪಾನ್‌ನಲ್ಲಿ ಇಂತಹ ಘಟನೆ ನಡೆದಿದೆ ನೋಡಿ.

ಮಹಿಳೆಯೊಬ್ಬಳು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿದ ವ್ಯಕ್ತಿಗೆ 1,10,000 ಯೆನ್‌ಗಳಷ್ಟು ಅಂದರೆ ಸುಮಾರು 70,000 ರೂ.ಗಳಷ್ಟು ಪರಿಹಾರವನ್ನು ನೀಡುವಂತೆ ಜಪಾನ್‌ನ ನ್ಯಾಯಾಲಯ ಆದೇಶಿಸಿದೆ. 37 ವರ್ಷದ ಮಹಿಳೆಗೆ ಟೋಕಿಯೊ ಜಿಲ್ಲಾ ನ್ಯಾಯಾಲಯವು ಫೆಬ್ರವರಿಯಲ್ಲಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ ಎಂದು ವರದಿಯಾಗಿದೆ. ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು 39 ವರ್ಷದ ವ್ಯಕ್ತಿ ಮಹಿಳೆಯೊಬ್ಬರ ವಿರುದ್ಧ ಮೊಕದ್ದಮೆ ಹೂಡಿದ್ದರು. ತನ್ನ ಪತ್ನಿ ಹಾಗೂ ಆ ಮಹಿಳೆ ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದಾರೆ ಎಂದು ದೂರುದಾರ ಪತಿ ಆರೋಪಿಸಿದ್ದ.

ಕುತೂಹಲಕಾರಿ ಸಂಗತಿಯೆಂದರೆ, ಆ ಮಹಿಳೆಯೊಂದಿಗಿನ ದೈಹಿಕ ಸಂಬಂಧವನ್ನು ಆರೋಪಿ ಮಹಿಳೆ ಒಪ್ಪಿಕೊಂಡಿದ್ದು, ಆದರೆ ಆ ಸಂಬಂಧದಿಂದ ಅವರ ವಿವಾಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅದು ದಾಂಪತ್ಯ ದ್ರೋಹಕ್ಕೆ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಾಡಿದ್ದಾಳೆ. ಆದರೂ, ನ್ಯಾಯಾಲಯವು ಆರೋಪಿ ಮಹಿಳೆಗೆ ದಂಡ ವಿಧಿಸಲು ಆದೇಶಿಸಿದೆ.

ಇದನ್ನೂ ಓದಿ: Viral Video: ಬಿಸಿಲಿನಿಂದ ದಣಿದಿದ್ದ ಅಳಿಲಿಗೆ ನೀರು ಕುಡಿಸಿ ಮಾನವೀಯತೆ ಮೆರೆದ ವ್ಯಕ್ತಿ; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಈ ಹಿಂದೆ ಟೋಕಿಯೋ ನ್ಯಾಯಾಲಯವು ಮಹಿಳೆಯೊಬ್ಬಳಿಗೆ ಮೋಸ ಮಾಡಿದ್ದಕ್ಕಾಗಿ ತನ್ನ ಮಹಿಳಾ ಪಾಲುದಾರಳಿಗೆ ದಂಡ ಪಾವತಿಸುವಂತೆ ಆದೇಶಿಸಿತ್ತು. ಈ ಮಹಿಳೆಯರಿಬ್ಬರೂ ಅಮೆರಿಕದಲ್ಲಿ ಮದುವೆಯಾಗಿದ್ದರು ಹಾಗೂ ಏಳು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದು ವಿವಾಹಿತ ದಂಪತಿಗಳಂತೆ ಸಹಕಾರದಿಂದ ತಮ್ಮ ಜೀವನವನ್ನು ನಡೆಸಲು ಪುರುಷ ಮತ್ತು ಮಹಿಳೆ ಒಟ್ಟಾಗಿ ಸೇರುವ ಸಂಬಂಧಕ್ಕೆ ಸಮಾನವಾದ ಸಂಬಂಧವಾಗಿದೆ" ಎಂದು ಹೇಳಿದ್ದ ಟೋಕಿಯೋ ನ್ಯಾಯಾಧೀಶ ಹಿಟೊಮಿ ಅಕಿಯೋಶಿ 1.1 ಮಿಲಿಯನ್ ಯೆನ್ ಪರಿಹಾರ ನೀಡುವಂತೆ ಆದೇಶಿಸಿದ್ದರು.

"ಸಲಿಂಗ ದಂಪತಿ ಇಬ್ಬರ ನಡುವಿನ ಒಪ್ಪಂದವಾಗಿದೆ ಮತ್ತು ಅದರ ಆಧಾರದ ಮೇಲೆ, ಕಾನೂನುಬದ್ಧವಾಗಿ ವಿವಾಹಿತರಾಧ ಪುರುಷ - ಮಹಿಳೆ ದಂಪತಿ ಕೈಗೊಳ್ಳುವ ನಿಷ್ಠೆಗೆ ಅದೇ ಬಾಧ್ಯತೆಗಳನ್ನು ಹೊಂದಿದೆ ಎಂದು ಹೇಳಬಹುದು" ಎಂದು ಜಪಾನ್‌ ರಾಜಧಾನಿ ಟೋಕಿಯೋ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ.
ಇನ್ನೊಂದೆಡೆ, ಕಳೆದ ವಾರ ಜಪಾನಿನ ನ್ಯಾಯಾಲಯವೊಂದು ಸಲಿಂಗ ವಿವಾಹಗಳನ್ನು ನಿಷೇಧಿಸುವುದು ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. ಈ ತೀರ್ಪು ಜಪಾನ್‌ನಲ್ಲಿ ನಡೆಯುತ್ತಿರುವ ಇದೇ ರೀತಿಯ ಐದು ಪ್ರಕರಣಗಳಲ್ಲಿ ಒಂದಾಗಿದೆ. ಈ ತೀರ್ಪು ಇತರ ಪ್ರಕರಣಗಳ ಮೇಲೆ ಪ್ರಭಾವ ಬೀರುವ ಒಂದು ಪೂರ್ವನಿದರ್ಶನವನ್ನು ಹೊಂದಿಸಬಹುದು. ಆದರೆ, ಸಲಿಂಗ ವಿವಾಹವನ್ನು ಅನುಮತಿಸಲು, ಜಪಾನ್‌ನಲ್ಲಿ ಹೊಸ ಕಾನೂನನ್ನು ಜಾರಿಗೆ ತರಬೇಕಾಗಿದ್ದು, ಇದು ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೂ ಸಾರ್ವಜನಿಕ ಚಿಂತನೆ ಬದಲಾಗುತ್ತಿದ್ದು, ಅಸಾಹಿ ಶಿಂಬುನ್ ಎಂಬುವವರು ನಡೆಸಿದ ವೀಕೆಂಡ್‌ ಅಭಿಪ್ರಾಯ ಸಂಗ್ರಹದಲ್ಲಿ ಶೇ. 65ರಷ್ಟು ಜನರು ಈ ತೀರ್ಪನ್ನು ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ.
Published by: Sushma Chakre
First published: March 25, 2021, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories