• Home
  • »
  • News
  • »
  • national-international
  • »
  • Hemant Kumar Lohia: ಡಿಯರ್ ಡೆತ್, ಐ ಆ್ಯಮ್ ವೇಯ್ಟಿಂಗ್ ಫಾರ್ ಯೂ! ಪೊಲೀಸ್ ಅಧಿಕಾರಿ ಹಂತಕನ ಡೈರಿಯಲ್ಲಿತ್ತು ಸ್ಫೋಟಕ ಮಾಹಿತಿ

Hemant Kumar Lohia: ಡಿಯರ್ ಡೆತ್, ಐ ಆ್ಯಮ್ ವೇಯ್ಟಿಂಗ್ ಫಾರ್ ಯೂ! ಪೊಲೀಸ್ ಅಧಿಕಾರಿ ಹಂತಕನ ಡೈರಿಯಲ್ಲಿತ್ತು ಸ್ಫೋಟಕ ಮಾಹಿತಿ

ಮೃತ ಅಧಿಕಾರಿ ಹೇಮಂತ್ ಲೋಹಿಯಾ ಹಾಗೂ ಶಂಕಿತ ಆರೋಪಿ

ಮೃತ ಅಧಿಕಾರಿ ಹೇಮಂತ್ ಲೋಹಿಯಾ ಹಾಗೂ ಶಂಕಿತ ಆರೋಪಿ

ಕೊಲೆಯಾದ ಹೇಮಂತ್ ಕುಮಾರ್ ಅವರ ಮನೆಯ ಸಹಾಯಕ ಯಾಸಿರ್ ಲೋಹರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತನ ಡೈರಿಯನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

  • Share this:

ಜಮ್ಮು ಮತ್ತು ಕಾಶ್ಮೀರ: ರಾಜ್ಯದ ಕಾರಾಗೃಹ ಡಿಜಿಪಿ (State Prisons DGP) ಹೇಮಂತ್​ ಕುಮಾರ್​ ಲೋಹಿಯಾ (Hemant Kumar Lohia) ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಂದು (Murder) ಹಾಕಿದ್ದಾರೆ. ಅವರ ಹತ್ಯೆಯಿಂದ ಇಡೀ ಜಮ್ಮು ಕಾಶ್ಮೀರ (Jammu Kashmir) ಬೆಚ್ಚಿ ಬಿದ್ದಿದೆ. ಇದೀಗ ಅವರ ಹತ್ಯೆ ಕೇಸ್ ತನಿಖೆ ಪೊಲೀಸರು ಮುಂದುವರೆಸಿದ್ದು, ಪ್ರಕರಣದ ಪ್ರಮುಖ ಶಂಕಿತ ಆರೋಪಿ (suspect), ಲೋಹಿಯಾ ಅವರ ಮನೆಯ ಸಹಾಯಕ ಯಾಸಿರ್ ಲೋಹರ್ (Yasir Lohar) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಡೈರಿಯನ್ನು (diary) ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.


ಶಂಕಿತ ಆರೋಪಿ ಡೈರಿಯಲ್ಲಿತ್ತು ಸ್ಫೋಟಕ ಮಾಹಿತಿ


ಕೊಲೆಯಾದ ಹೇಮಂತ್ ಕುಮಾರ್ ಅವರ ಮನೆಯ ಸಹಾಯಕ ಯಾಸಿರ್ ಲೋಹರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತನ ಡೈರಿಯನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.


shocking information found in diary of killer of jammu and kashmir ips officer hemant kumar lohia
ಶಂಕಿತ ಆರೋಪಿ ಮತ್ತು ಆತನ ಡೈರಿ


“ಡಿಯರ್ ಡೆತ್, ಐ ಆ್ಯಮ್ ವೇಯ್ಟಿಂಗ್ ಫಾರ್ ಯೂ”


ಹೌದು, ಹೀಗಂತ ಶಂಕಿತ ಆರೋಪಿ ಯಾಸಿರ್ ಲೋಹರ್ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾನೆ. ಪ್ರೀತಿಯ ಸಾವೇ, ನೀನು ನನ್ನ ಜೀವನದಲ್ಲಿ ಬಾ, ನಾನು ನಿನಗಾಗಿ ಕಾಯುತ್ತಿದ್ದೇನೆ ಅಂತ ಬರೆದಿದ್ದಾನೆ. ಅಲ್ಲದೇ "ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ. ಜಿಂದಗಿ ತೋ ಬಾಸ್ ತಕ್ಲಿಫ್ ದೇತಿ ಹೈ. ಸುಕೂನ್ ತೊ ಅಬ್ ಮೌತ್ ಹೈ ದೇತಿ ಅಂದರೆ ಜೀವನವು ದುಃಖವನ್ನು ಮಾತ್ರ ತರುತ್ತದೆ. ಸಾವು ಮಾತ್ರ ನನಗೆ ಶಾಂತಿಯನ್ನು ತರುತ್ತದೆ. ನಾನು ನನ್ನ ಜೀವನವನ್ನು ಮರುಪ್ರಾರಂಭಿಸಲು ಬಯಸುತ್ತೇನೆ" ಎಂದು ಆರೋಪಿ ಡೈರಿಯಲ್ಲಿ ಬರೆದುಕೊಂಡಿದ್ದಾನೆ.


ಇದನ್ನೂ ಓದಿ: Hemant Kumar Lohia: ಜಮ್ಮು ಕಾಶ್ಮೀರದ ಹಿರಿಯ IPS​ ಅಧಿಕಾರಿಯ ಭೀಕರ ಹತ್ಯೆ: ಅಮಿತ್ ಶಾಗೆ ಚಿಕ್ಕ ಉಡುಗೊರೆ ಎಂದ ಉಗ್ರ ಸಂಘಟನೆ!


ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಹೇಮಂತ್ ಕುಮಾರ್


ಕಾರಾಗೃಹದ ಮಹಾನಿರ್ದೇಶಕಾರದ ಹೇಮಂತ್ ಕುಮಾರ್ ಲೋಹಿಯಾ ಅವರು ಜಮ್ಮು ನಗರದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.  1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಲೋಹಿಯಾ ಅವರು ಜಮ್ಮುವಿನ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ನೆಲೆಸಿದ್ದರು. ಅವರನ್ನು ಆಗಸ್ಟ್‌ನಲ್ಲಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನಿಯೋಜಿಸಲಾಗಿತ್ತು. ಇನ್ನು ಅಲ್ಲಿಯೇ ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ.


ಭೀಕರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು


ಹೇಮಂತ್ ಕುಮಾರ್ ಲೋಹಿಯಾ ಮೃತದೇಹ ಕತ್ತು ಸೀಳಿದ ಮತ್ತು ಸುಟ್ಟು ಗಾಯಗಳ ಸ್ಥಿತಿಯಲ್ಲಿ ಜಮ್ಮುವಿನ ಹೊರವಲಯದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿತ್ತು., ಲೋಹಿಯಾ ಅವರ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯಾಸಿರ್​ನನ್ನು ಪ್ರಮುಖ ಆರೋಪಿ ಎಂದು ಶಂಕಿಸಿ, ಆತನನ್ನು ಬಂಧಿಸಲಾಗಿದೆ.


ಪೊಲೀಸ್ ಅಧಿಕಾರಿ ಹತ್ಯೆ ಹಿಂದಿದೆಯಾ ಉಗ್ರ ಸಂಘಟನೆ ಕೈವಾಡ?


ಕೇಂದ್ರ ಗೃಹ ಸಚಿವ ಶಾ ಜಿಲ್ಲೆಗೆ ಭೇಟಿ ನೀಡಿದ ಗಂಟೆಗಳ ಹಿಂದೆ ಈ ಘಟನೆ ನಡೆದಿದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಅಂಗಸಂಸ್ಥೆ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್)  ಸಂಘಟನೆಯು ಈ ಹತ್ಯೆಯ ಹಿಂದಿರುವ ಶಂಕೆ ಇದೆ.


ಇದನ್ನೂ ಓದಿ: Amit Shah: ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ ಮಾಡಿದ ಗೃಹ ಸಚಿವ ಅಮಿತ್ ಶಾ


ಮನೆ ಸೇವಕನ ವಿಚಾರಣೆ ಚುರುಕು


ಹೇಮಂತ್ ಕುಮಾರ್ ಲೋಹಿಯಾ ಅವರ ಮೆನಯ ಸೇವಕನೇ ಅವರನ್ನು ಕೊಂದಿದ್ದಾನೆ ಎಂದು ಪ್ರಾಥಮಿಕವಾಗಿ ಪೊಲೀಸರು ಶಂಕಿಸಿದ್ದಾರೆ. ಮನೆ ಕೆಲಸಗಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ನಿವಾಸಿಯಾಗಿದ್ದು, ಈತ ಘಟನೆ ಬಳಿಕ ತಲೆಮರೆಸಿಕೊಂಡಿದ್ದ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿ ಆತನ ಪತ್ತೆಯಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಸೇರಿದಂತೆ ಎಲ್ಲಾ ಕೋನಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Published by:Annappa Achari
First published: