Crime News: ಚಾಕು ತೋರಿಸಿ ಹೆತ್ತ ತಾಯಿ ಮೇಲೆ ಅತ್ಯಾಚಾರ, ಇದಕ್ಕಿಂತ ಘೋರ ಪ್ರಕರಣ ಇನ್ನೊಂದಿಲ್ಲ!

Shocking Incident: ಡ್ರಗ್ಸ್(Drugs)​ ನಶೆಯಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ(Rape) ಮಾಡಿದ್ದಾನೆ. ಬ್ಲೇಡ್​(Blade)​ ತೋರಿಸಿ ಬೆದರಿಸಿ ಅಮ್ಮನ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ತಾಯಿ ಅಂದರೆ ಕಣ್ಣಿಗೆ ಕಾಣುವ ದೇವರು(Mother is the God at sight). ಮಕ್ಕಳ ಮೇಲೆ ಆಕೆ ತೋರುವ ಪ್ರೀತಿ(Love)ಗೆ ಬೆಲೆ ಕಟ್ಟಲು ಆಗಲ್ಲ. ಈ ಪ್ರಪಂಚದಲ್ಲಿ ನಮ್ಮನ್ನು ಎಲ್ಲ ಬಿಟ್ಟು ಹೋದರೂ, ತಾಯಿ ನಮ್ಮ ಹಿಂದೆ ನಿಂತಿರುತ್ತಾಳೆ. ಮಕ್ಕಳು ಏನೇ ತಪ್ಪು ಮಾಡಿದರೂ, ಸಹಿಸಿಕೊಂಡು ಮಕ್ಕಳಿಗೆ ಬುದ್ಧಿ ಹೇಳುತ್ತಾಳೆ. ಬೆಳಗ್ಗೆ ಎದ್ದಾಗಿನಿಂದಲೂ ಮಕ್ಕಳು, ಗಂಡ ಅಂತ ಕೆಲಸ ಮಾಡುವ ಏಕೈಕ ಮಹಿಳೆ ಅಂದ್ರೆ ಅದು ಅಮ್ಮ.ಈ ಭೂಮಿ ಮೇಲೆ ಬೆಲೆ ಕಟ್ಟಲಾಗದ ಆಸ್ತಿ(Intangible Asset) ಅಂದರೆ ತಾಯಿ. ತಾಯಿ ಪ್ರೀತಿಗಿಂತ ಶೇಷ್ಠವಾದ ಪ್ರೀತಿಯಿಲ್ಲ, ತಾಯಿಗಿಂತ  ದೊಡ್ಡ ದೇವರಿಲ್ಲ ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಅಮ್ಮ ಅನ್ನದೇ ದಿನವಿಲ್ಲ ಸೂರ್ಯ(Sun) ಮುಳುಗೋದಿಲ್ಲ.. ಅಮ್ಮ ಅನ್ನದ ಜೀವ ಇಲ್ಲ ಮರೆತರೆ ಸಾವಲ್ಲ.. ಕೊನೆಗೆ ಕೊನೆ ಎಲ್ಲಿ..ತಾಯಿ ಪ್ರೀತಿಗೆ ಕೊನೆ ಇಲ್ಲ.. ಆದರೆ ಇಲ್ಲೊಬ್ಬ ಕಾಮುಕ ಪುತ್ರ ತನ್ನ ತಾಯಿ ಮೇಲೆ ಎರಗಿಬಿದ್ದಿದ್ದಾನೆ. ಡ್ರಗ್ಸ್(Drugs)​ ನಶೆಯಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ(Rape) ಮಾಡಿದ್ದಾನೆ. ಬ್ಲೇಡ್​(Blade)​ ತೋರಿಸಿ ಬೆದರಿಸಿ ಅಮ್ಮನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮದ್ಯ ಮತ್ತು ಡ್ರಗ್ಸ್​​​ಗೆ ದಾಸನಾಗಿದ್ದ ಪಾಪಿ ಪುತ್ರ ಇಂಥ ಹೇಯ ಕೃತ್ಯ ವೆಸಗಿದ್ದಾನೆ. 

ಬ್ಲೇಡ್​ ತೋರಿಸಿ ತಾಯಿ ಮೇಲೆ ಅತ್ಯಾಚಾರ​

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆಯಬಾರದಾಗಿದ್ದ ಘಟನೆಯೊಂದು ನಡೆದುಹೋಗಿದೆ. ಸದಾ ಡ್ರಗ್ಸ್, ಮದ್ಯ ನಶೆಯಲ್ಲಿ ಇರುತ್ತಿದ್ದ ಮಗನೊಬ್ಬ ತಾಯಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಹತ್ಯೆ ಮಾಡುತ್ತೇನೆ ಎಂದು ಕುತ್ತಿಗೆಗೆ ಬ್ಲೇಡ್ ಇಟ್ಟಿದ್ದಾನೆ. ಕುಡಿತ ಹಾಗೂ ಮಾದಕ ವ್ಯಸನಿಯಾಗಿರುವ ಯುವಕ ತನ್ನ ಬೇಡಿಕೆಗೆ ಮಣಿಯದಿದ್ದರೆ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ತಿಲ್ಲಾ ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದೆ.  ಘಟನೆ  ದಿನ ಆರೋಪಿ ಮದ್ಯ ಹಾಗೂ ಮಾದಕ ವ್ಯಸನದ ಅಮಲಿನಲ್ಲಿ ಮನೆಗೆ ಬಂದಿದ್ದ.  ನಂತರ ತನ್ನ ತಾಯಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಮಗನ ವರ್ತನೆಯಿಂದ ಆಘಾತಕ್ಕೊಳಗಾದ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ತಪ್ಪಿಸಿಕೊಳ್ಳಲು ನೋಡಿದ್ದಾಳೆ.  ಆದರೆ ಕುತ್ತಿಗೆಗೆ ಬ್ಲೇಡ್ ಹಿಡಿದ ಪರಿಣಾಮ ಆಕೆ ಏನೂ ಮಾಡಲು ಸಾಧ್ಯವಾಗಿಲ್ಲ.

ಇದನ್ನು ಓದಿ : ಹಣಕ್ಕಾಗಿ ಹುಡುಗ ಹುಡುಗಿಯರನ್ನು ಬೆತ್ತಲಾಗಿಸಿ ಅಶ್ಲೀಲ ವಿಡಿಯೋ ಮಾಡಿದ ಕಿಡಿಗೇಡಿಗಳು

‘ನನ್ನ ಮಗ ಹೀಗೆ ಮಾಡುತ್ತಾನೆ ಎಂದು ಕೊಂಡಿರಲಿಲ್ಲ’

ಘಟನೆ ಬಳಿಕ ತಾಯಿ ಮನನೊಂದಿದ್ದಳು. ನನ್ನ ಮಗ ಈ ರೀತಿಯ ಹೇಯ ಕೃತ್ಯ ಮಾಡುತ್ತಾನೆ ಎಂದು ಆ ತಾಯಿ ಭಾವಿಸಿರಲಿಲ್ಲ. ಆ ತಾಯಿ ಮಾತ್ರ ಅಲ್ಲ  ಪ್ರಪಂಚದ ಯಾವುದೇ ತಾಯಿ ಕೂಡ ನನ್ನ ಮಗ ನನ್ನ ಮೇಲೆ ಅತ್ಯಾಚಾರ ಮಾಡುತ್ತಾನೆ ಎಂದು ಭಾವಿಸಿರಲ್ಲ. ಇದಾದ ಬಳಿಕ ಪೊಲೀಸರ ಬಳಿ ತಾಯಿ ಹೋಗಿ ಮಗನ ಬಗ್ಗೆ ದೂರು ನೀಡಿದ್ದಾಳೆ. ಘಟನೆ ಬಗ್ಗೆ ಪೊಲೀಸರ ಬಳಿ ವಿವರಿಸಿದ್ದಾಳೆ. ತಾಯಿಯ ಮಾತು ಕೇಳಿ ಪೊಲೀಸರ ಕರುಳು ಚುರುಕ್​ ಅಂದಿದೆ. ಪಾಪಿ ಪುತ್ರನ ಮೇಲೆ ಕೆಟ್ಟ ಕೋಪ ಬಂದಿದೆ.  ನನ್ನ ಪತಿ ರಾಂಪುರ ಜಿಲ್ಲೆಯಲ್ಲಿ ವಾಸಿಸುತ್ತಿದ್ದು ಆತನೂ ಡ್ರಗ್ಸ್  ದಾಸನಾಗಿದ್ದಾನೆ.  ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಆದರೆ ನನ್ನ ಮಗನೇ ಈ ರೀತಿ ಮಾಡುತ್ತಾನೆ ಎಂದು ಕೊಂಡಿರಲಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.

ಇದನ್ನು ಓದಿ : ಬಾಲಕಿ ಮತ್ತು ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಪಾಪಿ ಪುತ್ರನನ್ನು ವಶಕ್ಕೆ ಪಡೆದ ಪೊಲೀಸರು

ಮಗ ಸ್ವಭಾವತಃ ಕ್ರೂರ ಮತ್ತು ಸ್ಥಳೀಯ ಜನರೊಂದಿಗೆ ಜಗಳವಾಡಿಕೊಂಡೇ ಬಂದಿದ್ದಾನೆ ಎಂದು  ತಾಯಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Published by:Vasudeva M
First published: