#MeToo ಬಿರುಗಾಳಿಗೆ ಸಿಲುಕಿದ ಅಮಿತಾಬ್​ ಬಚ್ಚನ್​!: ಶೀಘ್ರದಲ್ಲೇ ಬಣ್ಣ ಬಯಲು ಮಾಡುತ್ತೇನೆಂದ ಆಕೆ

news18
Updated:October 13, 2018, 9:04 PM IST
#MeToo ಬಿರುಗಾಳಿಗೆ ಸಿಲುಕಿದ ಅಮಿತಾಬ್​ ಬಚ್ಚನ್​!: ಶೀಘ್ರದಲ್ಲೇ ಬಣ್ಣ ಬಯಲು ಮಾಡುತ್ತೇನೆಂದ ಆಕೆ
news18
Updated: October 13, 2018, 9:04 PM IST
ನ್ಯೂಸ್​ 18 ಕನ್ನಡ

ಮುಂಬೈ(ಅ.13): ಭಾರತದಲ್ಲಿ ಆರಂಭವಾಗಿರುವ #MeToo ಅಭಿಯಾನದ ಬಳಿಕ ಬಾಲಿವುಡ್​ನ ಹಲವಾರು ಪ್ರಸಿದ್ಧ ವ್ಯಕ್ತಿಗಳ ಹೆಸರು ಲೈಂಗಿಕ ಆರೋಪದಿಂದ ಸದ್ದು ಮಾಡುತ್ತಿವೆ. ವರಲ್ಲಿ ಅಲೋಕ್​ ನಾಥ್, ವಿಕಾಸ್​ ಬಹೆಲ್​, ನಾನಾ ಪಾಟೇಕರ್​, ಅನು ಮಲಿಕ್​ ಸೇರಿದಂತೆ ಕೈಲಾಶ್​ ಕೇರ್​ ಹೆಸರೂ ಕೇಳಿ ಬಂದಿದೆ. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಸಪ್ನಾ ಭವನಾನಿ ಟ್ವೀಟ್​ ಮಾಡುತ್ತಾ ಬಾಲಿವುಡ್​ನ ಬಿಗ್​ ಬಿ ಅಮಿತಾಬ್​ ಬಚ್ಚನ್​ರನ್ನು ಆರೋಪಿಸಿದ್ದಾರೆ. ಇದು ಎಲ್ಲರಿಗೂ ಶಾಕ್​ ನೀಡಿದೆ. ​

#MeToo ಬೆಂಬಲಿಸಿ ಅಮಿತಾಬ್​ ಬಚ್ಚನ್​ ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸಪ್ನಾ "ಇದು ಬಹುದೊಡ್ಡ ಸುಳ್ಳು. ಸರ್​, ಪಿಂಕ್​ ಸಿನಿಮಾ ಬಂದು ಹೋಗಿದೆ, ಅದೇ ರೀತಿ ಹೋರಾಟಗಾರರಂತೆ ನಿಮ್ಮ ವ್ಯಕ್ತಿತ್ವವೂ ಶೀಘ್ರದಲ್ಲೇ ಮರೆಯಾಗಲಿದೆ. ನಿಮ್ಮ ನಿಜ ಬಣ್ಣ ಶೀಘ್ರದಲ್ಲೇ ಜಗತ್ತಿನೆದುರು ತೆರೆದುಕೊಳ್ಳಲಿದೆ" ಎಂದಿದ್ದಾರೆ. ಇಷ್ಟೇ ಅಲ್ಲದೆ, ಅಪ್ನಾ ತಾನು ಬಚ್ಚನ್​ರವರ ಕೆಟ್ಟ ವ್ಯಕ್ತಿತ್ವದ ಬಗ್ಗೆ ಹಲವಾರು ಕಥೆಗಳನ್ನುಕೇಳಿದ್ದೇನೆಂದೂ ಬರೆದುಕೊಂಡಿದ್ದಾರೆ.



Loading...

ಶನಿವಾರದಂದು ಮತ್ತೊಂದು ಟ್ವೀಟ್​​ ಮಾಡಿ ಸ್ಪಷ್ಟನೆ ನೀಡಿರುವ ಸಪ್ನಾ, ಅಮಿತಾಬ್​ ಬಚ್ಚನ್​ರವರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ. ಆದರೆ ಬಿಗ್​ ಬಿ ಕೆಟ್ಟದಾಗಿ ನಡೆಸಿಕೊಂಡಿರುವ ಹಲವಾರು ಮಂದಿ ತನಗೆ ಗೊತ್ತು ಎಂದಿದ್ದಾರೆ. ಅಲ್ಲದೇ ಅವರು ಕೆಟ್ಟದಾಗಿ ನಡೆಸಿಕೊಂಡ ಮಹಿಳೆಯರು ಯಾವುದೇ ಭಯವಿಲ್ಲದೇ ಮಾತನಾಡಬೇಕೆಂಬ ನಿಟ್ಟಿನಲ್ಲಿ ತಾನು ಈ ಟ್ವೀಟ್​ ಮಾಡಿರುವುದಾಗಿಯೂ ತಿಳಿಸಿದ್ದಾರೆ.

#MeToo: ಕ್ಷಮೆ ಯಾಚಿಸಿದ ಗಾಯಕ ರಘು ದೀಕ್ಷಿತ್; ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದ ಮಯೂರಿ ಉಪಾಧ್ಯ..!


ಕಳೆದ ಎರಡು ದಿನಗಳ ಹಿಂದಷ್ಟೇ ಬಿಗ್​ ಬಿ ಅಮಿತಾಬ್​ ಬಚ್ಚನ್ ತಮ್ಮ 76ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಟ್ವೀಟ್​ ಮಾಡಿದ್ದ ಅವರು #MeToo ಅಭಿಯಾನವನ್ನು ಅಮರ್ಥಿಸಿಕೊಂಡಿದ್ದರು. ಈ ಪೋಸ್ಟ್​ನಲ್ಲಿ ಅವರ ಸಂದರ್ಶನವೊಂದರ ಲಿಂಕ್​ ಕೂಡಾ ಇತ್ತು. ತಮ್ಮ ಈ ಸಂದರ್ಶನದಲ್ಲಿ ಬಿಗ್​ ಬಿ 'ಯಾವುದೇ ಮಹಿಳೆಯ ಮೇಲಾಗುವ ದೌರ್ಜನ್ಯ ಹಾಗೂ ಕೆಟ್ಟ ಸಂಪ್ರದಾಯವನ್ನು ವಿರೋಧಿಸುತ್ತೇನೆ. ಅದರಲ್ಲೂ ಕೆಲಸ ಮಾಡುವ ಸ್ಥಳದಲ್ಲಿ ಹೀಗಾಗುವುದನ್ನು ಖಂಡಿಸುತ್ತೇನೆ ಎಂದಿದ್ದರು. ಹೀಗಾದಾಗ ತಡ ಮಾಡದೆ ಕೆಟ್ಟದಾಗಿ ವರ್ತಿಸುವವರ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದಿದ್ದರು.
First published:October 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...